Asianet Suvarna News Asianet Suvarna News

ವಿಜಯಪುರ: ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯ ಬರ್ಬರ ಹತ್ಯೆ

ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾದ ಘಟನೆ ವಿಜಯಪುರ ತಾಲೂಕಿನ ಅರಕೇರಿ ಗ್ರಾಮದಲ್ಲಿ ನಡೆದ ಘಟನೆ. 

55 Year Old Man Killed in Vijayapura grg
Author
First Published Jan 24, 2023, 1:37 PM IST

ವಿಜಯಪುರ(ಜ.24): ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾದ ಘಟನೆ ವಿಜಯಪುರ ತಾಲೂಕಿನ ಅರಕೇರಿ ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ. 55 ವರ್ಷದ ಪರಸಪ್ಪ ಗುಂಡಕರಜಗಿ ಎಮಬಾತನೇ ಹತ್ಯೆಯಾಗಿರುವ ದುರ್ದೈವಿಯಾಗಿದ್ದಾನೆ. 

ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಕಾಮನಕೇರಿ‌ ನಿವಾಸಿ ಪರಸಪ್ಪ ಕೆಲವು ದಿನಗಳಿಂದ ಅಮೋಘಸಿದ್ದ ಮಂದಿರದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದನು ಅಂತ ತಿಳಿದು ಬಂದಿದೆ. 

Hubballi: ಅನೈತಿಕ ಸಂಬಂಧ ಶಂಕೆ: ಪತ್ನಿ ಕತ್ತು ಸೀಳಿ ಭೀಕರ ಹತ್ಯೆ ಮಾಡಿದ ಪತಿ

ಆದ್ರೇ, ಯಾರೋ ದುಷ್ಕರ್ಮಿಗಳು ಪರಸಪ್ಪನನ್ನ ಹತ್ಯೆಗೈದು ಪರಾರಿಯಾಗಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪೊಲೀಸರ ತನಿಖೆಯಿಂದಷ್ಟೇ ಕೊಲೆ ಕಾರಣ ತಿಳಿದು ಬರಬೇಕಿದೆ.  ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 
 

Follow Us:
Download App:
  • android
  • ios