Asianet Suvarna News Asianet Suvarna News

Hubballi: ಅನೈತಿಕ ಸಂಬಂಧ ಶಂಕೆ: ಪತ್ನಿ ಕತ್ತು ಸೀಳಿ ಭೀಕರ ಹತ್ಯೆ ಮಾಡಿದ ಪತಿ

ಗಂಡನೇ ಕತ್ತು ಸೀಳಿ ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಕೋಳಿವಾಡ ಗ್ರಾಮದಲ್ಲಿ ನಡೆದಿದೆ. ಶಾರದಾ ದೇವರಮನಿ ಕೊಲೆಯಾಗಿರುವ ಮಹಿಳೆ. 

husband murdered wife for illicit relationship in hubballi gvd
Author
First Published Jan 23, 2023, 1:18 PM IST

ಹುಬ್ಬಳ್ಳಿ (ಜ.23): ಗಂಡನೇ ಕತ್ತು ಸೀಳಿ ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಕೋಳಿವಾಡ ಗ್ರಾಮದಲ್ಲಿ ನಡೆದಿದೆ. ಶಾರದಾ ದೇವರಮನಿ ಕೊಲೆಯಾಗಿರುವ ಮಹಿಳೆ. ಅನೈತಿಕ ಸಂಬಂಧ ಹಾಗೂ ಕೌಟುಂಬಿಕ ಕಲಹದ ಕಾರಣ ಕೊಲೆ ಮಾಡಿರುವ ಶಂಕೆಯಿದ್ದು, ಅರೋಪಿ ಪತಿ ಉಡಚಪ್ಪ ದೇವರಮನಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗನನ್ನೇ ಕೊಲೆ ಮಾಡಿದ ತಂದೆ: ಅಣ್ಣ-ತಮ್ಮಂದಿರಿಗೆ ಆಸ್ತಿ ಹಂಚುವ ವಿಚಾರದಲ್ಲಿ ತಂದೆ ಕೃಷ್ಣಪ್ಪ ಹಿರಿಯ ಮಗ ಲಕ್ಷ್ಮೀಕಾಂತ್‌ಗೆ ಚಿಪ್ಪು ಗುದ್ದಲಿಯ ಕಾವಿನಿಂದ ತಲೆಯ ಹಿಂಬದಿಗೆ ಹೊಡೆದು ಕೊಲೆ ಮಾಡಿರುವ ಘಟನೆ ಕೊರಟಗೆರೆ ತಾಲೂಕಿನ ಚನ್ನರಾಯದುರ್ಗ ಹೋಬಳಿಯ ದೊಡ್ಡನರಸಯ್ಯನಪಾಳ್ಯದಲ್ಲಿ ಸಂಭವಿಸಿದೆ.

ಪ್ಲಾಸ್ಟಿಕ್ ರೇಷನ್ ಅಕ್ಕಿಯೆಂದು ಭಯಗೊಂಡ ಗ್ರಾಮಸ್ಥರು: ಅಡುಗೆ ಮಾಡಲು ಭಯ ಪಡುತ್ತಿರುವ ಮಹಿಳೆಯರು

ಪ್ರಕರಣದ ಹಿನ್ನೆಲೆ: ಆರೋಪಿ ಕೃಷ್ಣಪ್ಪನ ಹೆಸರಿನಲ್ಲಿ 3 ಎಕರೆ 18 ಕುಂಟೆ ಜಮೀನಿದೆ. ಕೊಲೆಯಾದ ಲಕ್ಷ್ಮೀಕಾಂತ್‌ಗೆ ಗೊತ್ತಿಲ್ಲದೆ ಸಹಿ ಹಾಕಿಸಿ, ಮೋಸದಿಂದ ಚಿಕ್ಕ ಮಗನಾದ ರಾಮಚಂದ್ರಪ್ಪಗೆ 1 ಎಕರೆ 29 ಕುಂಟೆ ಜಮೀನನ್ನು ವಿಲ್‌ ಮಾಡಿಕೊಟ್ಟಿದ್ದರು. ಇನ್ನುಳಿದ ಜಮೀನನ್ನು ಹೆಣ್ಣು ಮಗಳಿಗೆ ನೀಡಬೇಕೆಂದು ಕೃಷ್ಣಪ್ಪ ಪಣ ತೊಟ್ಟಿದ್ದನು. ನಂತರ ತನಗಾದ ಅನ್ಯಾಯವನ್ನು ತಡವಾಗಿ ತಿಳಿದ ಲಕ್ಷ್ಮೀಕಾಂತ್‌ ನ್ಯಾಯ ದೊರಕಿಸುವಂತೆ ಗ್ರಾಮಸ್ಥರ ಮೊರೆಹೋಗಿದ್ದನು.  

ಈ ವಿಚಾರವಾಗಿ ಗ್ರಾಮದ ಮುಖ್ಯಸ್ಥರು ಆರೋಪಿ ಹೆಸರಿನಲ್ಲಿದ್ದ ಜಮೀನನ್ನು ಲಕ್ಷ್ಮೀಕಾಂತ್‌ಗೆ ಬರೆದು ಕೊಡುವಂತೆ ಸಾಕಷ್ಟು ಬಾರಿ ರಾಜಿ ಸಂಧಾನಗಳಾಗಿದ್ದವು ಹಾಗೂ ಹಲವು ಸಲ ಪೊಲೀಸ್‌ ಠಾಣೆ ಮೆಟ್ಟಿಲು ತುಳಿದಿದ್ದಾರೆ ಎನ್ನಲಾಗಿದೆ.  ಇದೇ 17ರ ಮಂಗಳವಾರ ಬೆಳಿಗ್ಗೆ ಲಕ್ಷ್ಮೀಕಾಂತ್‌ ಕೋಳಿ ಮಾಂಸ ತರಲು ದೊಡ್ದನರಸಯ್ಯನ ಪಾಳ್ಯ ಗ್ರಾಮದ ಪಕ್ಕದ ಊರು ಅಜ್ಜಿ ಹಳ್ಳಿ ಗ್ರಾಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಲಕ್ಷ್ಮೀಕಾಂತ್‌ ಮಗ ಹರಿನನ್ನು ಆರೋಪಿ ಕೃಷ್ಣಪ್ಪ ಬೇಕಂತಲೇ ಕ್ಯಾತೆ ತೆಗೆದು ಥಳಿಸುತ್ತಿರುತ್ತಾನೆ. 

ರಾಜ್ಯದ ಸಿರಿಧಾನ್ಯ ಯೋಜನೆಗೆ ಕೇಂದ್ರದ ಶಹಬ್ಬಾಸ್‌: ಕೇಂದ್ರ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮೆಚ್ಚುಗೆ

ಈ ಸಮಯದಲ್ಲಿ ಲಕ್ಷ್ಮೀಕಾಂತ್‌ನ ಮಡದಿ ಮಗನನ್ನು ಹೊಡೆಯುತ್ತಿರುವುದನ್ನು ಕಂಡು ಬಿಡಿಸಿಕೊಳ್ಳಲು ಅಡ್ಡ ಬಂದಂತಹ ಸಂದರ್ಭದಲ್ಲಿ ಅವಳ ಮೇಲೆಯೂ ಸಹ ಕೃಷ್ಣಪ್ಪ ಹಲ್ಲೆಗೆ ಯತ್ನಿಸುತ್ತಿರವಷ್ಟರಲ್ಲಿ ಅಲ್ಲಿಗೆ ಬಂದ ಲಕ್ಷ್ಮೀಕಾಂತ್‌, ಪತ್ನಿಯ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ತಡೆಯಲು ಹೋದಾಗ ಚಿಪ್ಪು ಗುದ್ದಲಿಯ ಕಾವಿನಿಂದ ತಲೆಯ ಹಿಂಬದಿಗೆ ಹೊಡೆದಿದ್ದಾನೆ. ತಲೆಗೆ ಹೆಚ್ಚು ಪೆಟ್ಟು ಬಿದ್ದ ಪರಿಣಾಮ ವ್ಯಕ್ತಿ ಮೂರ್ಛೆ ಹೋಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆ್ಯಂಬುಲೆನ್ಸ್‌ ಗೆ ಕರೆ ಮಾಡಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾವನ್ನಪ್ಪಿದ್ದಾರೆ.

Follow Us:
Download App:
  • android
  • ios