ಇಶ್ಶೀ, ನನ್ನ ಬಾಯ್‌ಫ್ರೆಂಡ್ ಅಂಡರ್‌ವೇರ್ ಧರಿಸೋದೇ ಇಲ್ಲ! ಏನ್ ಮಾಡ್ಬೇಕೀಗ?
ಲೈಂಗಿಕ ತಜ್ಞರಿಗೆ ಕೆಲವು ವಿಚಿತ್ರ ಪ್ರಶ್ನೆಗಳು ಬರುತ್ತಿರುತ್ತವೆ. ಅಂಥವುಗಳಲ್ಲಿ ಇದೂ ಒಂದು. ಇಲ್ಲೊಬ್ಬಾಕೆಗೆ, ತನ್ನ ಬಾಯ್‌ಫ್ರೆಂಡ್ ಅಂಡರ್‌ವೇರ್ ಧರಿಸುವ ಅಭ್ಯಾಸವೇ ಇಲ್ಲ ಎಂಬುದು ಗೊತ್ತಾಗಿದೆ. ಈಕೆಯ ಗೊಂದಲಕ್ಕೆ ತಜ್ಞರು ನೀಡಿದ ಉತ್ತರ ಇಲ್ಲಿದೆ.
ಪ್ರಶ್ನೆ: ನನಗೊಬ್ಬ ಬಾಯ್‌ಫ್ರೆಂಡ್ ಇದಾನೆ, ನಾವಿಬ್ಬರೂ ವರ್ಕಿಂಗು ಹಾಗೂ ಸದ್ಯದಲ್ಲೇ ಮದುವೆಯಾಗಲಿದ್ದೇವೆ. ಇಬ್ಬರೂ ಒಂದೆರಡು ಸಲ ಲೈಂಗಿಕವಾಗಿ ಒಂದಾಗಿದ್ದೇವೆ. ಪ್ರಶ್ನೆ ಅದಲ್ಲ. ಆತ ಅಂಡರ್‌ವೇರ್ ಧರಿಸುವುದು ಅತ್ಯಂತ ಕಡಿಮೆ. ತೀರಾ ಅನಿವಾರ್ಯ ಆದರೆ ಮಾತ್ರ ಧರಿಸ್ತೀನಿ ಅಂತಾನೆ. ನನಗೆ ಗಾಬರಿ. ಗಂಡಸರು ಹೀಗೂ ಇರ್ತಾರಾ? ಮನೆಯೊಳಗೆ ಹೀಗಿದ್ದರೆ ಪರವಾಗಿಲ್ಲ, ಆದರೆ ಹೊರಗೆ ಹೋದಾಗ? ಅದು ಅಗತ್ಯವಲ್ಲವೇ?
ವೈದ್ಯರ ಉತ್ತರ: ಮನೆಯೊಳಗೆ ಬಾಯ್‌ಫ್ರೆಂಡ್ ಅಂಡರ್‌ವೇರ್ ಧರಿಸದಿದ್ದರೆ ಓಕೆ ಎಂಬ ನಿಮ್ಮ ಅಭಿಪ್ರಾಯ ಸಮಂಜಸವಾಗಿದೆ. ಆದರೆ ಮೇಲಿನ ಉಡುಪುಗಳನ್ನು ಧರಿಸಿರಬೇಕು ಮಾತ್ರ! ಹಾಗೇ ಹೊರಗೆ ಹೋದಾಗಲೂ ಇರುತ್ತಾರೆ ಅಲ್ಲವೇ. ಅಂಕಿ ಅಂಶದ ಪ್ರಕಾರ ಸುಮಾರು ಇಪ್ಪತ್ತು ಶೇಕಡಾ ಗಂಡಸರು ಒಳ ಉಡುಪು ಧರಿಸುವುದಿಲ್ಲ. ಹಾಗೇ ಹದಿನೈದು ಪರ್ಸೆಂಟ್ ಹೆಂಗಸರು ಕೂಡ ಒಳ ಉಡುಪು ಧರಿಸುವುದಿಲ್ಲವಂತೆ! ಈಗ ಅಂಡರ್‌ವೇರ್ ಧರಿಸದಿದ್ದರೆ ಏನು ಸಮಸ್ಯೆ ಅಥವಾ ಪ್ರಯೋಜನ ಎಂಬುದನ್ನು ನೋಡೋಣ.
ಒಳ ಉಡುಪು ಧರಿಸದೇ ಇದ್ದರೆ ಕೆಲವು ಲಾಭಗಳಿವೆ. ಒಂದನೆಯದು, ಯೀಸ್ಟ್ ಸೋಂಕಿನ ಅಪಾಯ ಕಡಿಮೆ ಮಾಡುತ್ತದೆ. ಯೀಸ್ಟ್ ಸೋಂಕುಗಳು ಹೆಂಗಸರಲ್ಲಿ ಯೋನಿ ಕಿರಿಕಿರಿ, ತುರಿಕೆ ಮತ್ತು ಯೋನಿ ಡಿಸ್ಚಾರ್ಜ್‌ಗೆ ಕಾರಣವಾಗಬಹುದು. ಹತ್ತಿಯ ಹೊರತಾಗಿ ಇತರ ವಸ್ತುಗಳಿಂದ ಮಾಡಿದ ಕೆಲವು ರೀತಿಯ ಒಳ ಉಡುಪುಗಳು ಹೆಚ್ಚಿನ ಪ್ರಮಾಣದ ಯೀಸ್ಟ್ ಸೋಂಕುಗಳಿಗೆ ಕಾರಣವಾಗಬಹುದು. ಹೀಗಾಗಿ ಒಳ ಉಡುಪುಗಳನ್ನು ಧರಿಸುವ ಸಮಯವನ್ನು ಮಿತಿಗೊಳಿಸಬಹುದು.
ಅಂಡರ್‌ವೇರ್ ಧರಿಸದವರಲ್ಲಿ ಮೂತ್ರಕೋಶದ ಸೋಂಕಿನ (UTI) ಸಂಭವ ಕಡಿಮೆ. ಹತ್ತಿಯ ಹೊರತಾದ ಒಳ ಉಡುಪುಗಳನ್ನು ಧರಿಸಿದಾಗ UTI ಬರಬಹುದು. ದಿನವಿಡೀ ಜನನಾಂಗದ ಪ್ರದೇಶದಲ್ಲಿ ಬೆವರು ಬರುವುದೂ ಆಂಡರ್‌ವೇರ್‌ನಲ್ಲಿ ಸೇರಿಕೊಂಡು ಖಾಸಗಿ ಅಂಗದ ಸುತ್ತಲೂ ತೇವಾಂಶ ಅಥವಾ ವಾಸನೆಯನ್ನು ಉಂಟುಮಾಡುವ ಜೀವಿಗಳನ್ನು ಹಿಡಿದಿಟ್ಟುಕೊಳ್ಳಬಹುದು. ಬಿಗಿಯಾದ ಒಳಉಡುಪುಗಳು ತೊಡೆಗಳಿಗೆ ಉಜ್ಜಿ ಉಜ್ಜಿ ಯೋನಿ ಅಥವಾ ಶಿಶ್ನದ ಸೂಕ್ಷ್ಮ ಚರ್ಮವನ್ನು ಗಾಯಗೊಳಿಸಬಹುದು.
ಅಂಡರ್‌ವೇರ್ ಧರಿಸದಿದ್ದರೆ, ತುರಿಕಜ್ಜಿಯ ಅಪಾಯ ಕಡಿಮೆ. ಶಿಲೀಂಧ್ರಗಳ ಸೋಂಕುಗಳನ್ನು ತಡೆಯುತ್ತದೆ. ವ್ಯಾಯಾಮದ ಸಮಯದಲ್ಲಿ ನೀವು ಹೆಚ್ಚು ಬೆವರು ಬಿಡುತ್ತಿದ್ದರೆ, ಆಗ ಒಳಉಡುಪು ಬಿಟ್ಟುಬಿಡುವುದು ಜನನಾಂಗಗಳ ಪ್ರದೇಶದಲ್ಲಿ ಗಾಳಿಯಾಡಲು, ಶಿಲೀಂಧ್ರಗಳ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.
ಬೆವರಿನ ವಾಸನೆ ಇರುವುದಿಲ್ಲ.
ನಿಮ್ಮ ಸಂತೋಷಕ್ಕೆ ಕಾರಣವಾಗಬಲ್ಲ ಇನ್ನೊಂದು ವಿಷಯ ಇದೆ- ಅಂಡರ್‌ವೇರ್ ಧರಿಸದ ಪುರುಷರಲ್ಲಿ ವೀರ್ಯದ ಕೌಂಟ್ ಹೆಚ್ಚಿರಬಹುದು! ಯಾಕೆಂದರೆ ವೀರ್ಯ ಸೃಷ್ಟಿಯಾಗುವ ವೃಷಣಗಳು ತುಂಬಾ ಬೆಚ್ಚಗಿದ ಏರಿಯಾದಲ್ಲಿದ್ದರೆ, ಹೆಚ್ಚಿದ ತಾಪಮಾನವು ಉತ್ತಮ ವೀರ್ಯವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಬ್ರೀಫ್‌ಗಳಂತಹ ಬಿಗಿಯಾದ ಒಳಉಡುಪುಗಳು ನಿಮ್ಮ ವೃಷಣಗಳನ್ನು ದೇಹದ ಹತ್ತಿರ ಹಿಡಿದಿಟ್ಟುಕೊಂಡು ಅವುಗಳನ್ನು ಬೆಚ್ಚಗಾಗಿಸಬಹುದು. ಇದು ವೀರ್ಯ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ನಿಮ್ಮ ಬಿಗಿಯಾದ ಒಳ ಉಡುಪಿಗೆ ಬಾಯ್ ಹೇಳಿದರೆ ಗಂಡಸಿನ ಫಲವತ್ತತೆಯನ್ನು ಹೆಚ್ಚಿಸಬಹುದು.
ಹಾಗೇ ಚಲನೆಯ ಸ್ವಾತಂತ್ರ್ಯ. ಒಳ ಉಡುಪುಗಳು ನಿಮ್ಮ ಚಲನವಲನಗಳನ್ನು ನಿರ್ಬಂಧಿಸುತ್ತದೆ ಎಂದು ನಿಮಗೆ ಅನಿಸಿದರೆ, ಅದನ್ನು ಬಿಡುವುದು ಲೇಸು.
ಆದರೆ ಯಾವಾಗಲೂ ಅಂಡರ್‌ವೇರ್ ಧರಿಸದೇ ಓಡಾಡುವುದು ಉತ್ತಮವಲ್ಲ. ಕೆಲವೊಮ್ಮೆ, ಒಳಉಡುಪುಗಳಿಲ್ಲದೆ ಹೋಗುವುದರಿಂದ ನೀವು ಊತ ಅಥವಾ ಸೋಂಕುಗಳಿಗೆ ಹೆಚ್ಚು ತೆರೆದುಕೊಳ್ಳಬಹುದು. ವಿಶೇಷವಾಗಿ ಇದು ಹೆಂಗಸರಿಗೆ ಸಂಬಂಧಿಸಿದೆ. ಯೋನಿಯ ಹಾಗೂ ಮೂತ್ರನಾಳದ ಕಿರಿಕಿರಿ ಉಂಟಾಗಬಹುದು. ಯಾಕೆಂದರೆ ಪ್ಯಾಂಟ್‌ನ ಒರಟಾದ ಬಟ್ಟೆಯ ಉಜ್ಜುವಿಕೆಯಿಂದ ಉಂಟಾಗುತ್ತದೆ.
ನಿದ್ದೆ ಮಾಡುವಾಗ ಮುಖ ಮುಚ್ಚಿ ಮಲಗುವುದು ಎಷ್ಟು ಡೇಂಜರಸ್ ಗೊತ್ತಾ?
ಇನ್ನೊಂದು ಸಮಸ್ಯೆ ಅಂದರೆ ಮೂತ್ರದ ಹನಿಗಳದ್ದು. ನಿಮ್ಮ ಜನನಾಂಗಗಳು ಮತ್ತು ನಿಮ್ಮ ಪ್ಯಾಂಟ್‌ಗಳ ನಡುವೆ ಬೇರೆ ಬಟ್ಟೆ ಇಲ್ಲದಿರುವುದರಿಂದ ಮೂತ್ರದ ಹನಿ ಪ್ಯಾಂಟ್‌ಗೆ ಅಂಟಿಕೊಂಡು ವಾಸನೆ ಸೃಷ್ಟಿಸುವ ಸಾಧ್ಯತೆ ಇದೆ.
ಗಂಡಸರು ಹೊರಾಂಗಣ ಆಟದ ಸಂದರ್ಭದಲ್ಲಿ ಒಳ ಉಡುಪು ಧರಿಸುವುದು ಲೇಸು. ಯಾಕೆಂದರೆ ಅದು ಮರ್ಮಾಂಗಕ್ಕೆ ಹೆಚ್ಚಿನ ರಕ್ಷಣೆಯನ್ನು ಕೊಡುತ್ತದೆ. ಹಾಗೇ ಬಟ್ಟೆ ಕೊಳ್ಳಲು ಹೋಗುವಾಗ, ವೈದ್ಯರಲ್ಲಿಗೆ ತೆರಳುವಾಗ, ಲೂಸ್ ಫಿಟ್ ಬಟ್ಟೆ ಧರಿಸಿದಾಗ, ಮಹಿಳೆಯರು ಪೀರಿಯಡ್ಸ್ ಸಂದರ್ಭದಲ್ಲಿ ಒಳ ಉಡುಪು ಧರಿಸಿರಬೇಕು.
ಈಗ ನಿಮ್ಮ ಸಮಸ್ಯೆ ಏನು ಎಂಬುದನ್ನು ಮರು ಪರಿಶೀಲಿಸಿ. ಬಾಯ್‌ಫ್ರೆಂಡ್ ಅಂಡರ್‌ವೇರ್ ಇಲ್ಲದೇ ತಿರುಗಾಡುವುದು ನಿಮಗೆ ಏಕೆ ಮುಜುಗರ ಅನಿಸುತ್ತದೆ ಎಂಬುದನ್ನು ಆತನ ಗಮನಕ್ಕೆ ತನ್ನಿ. ಯಾವ ಸಂದರ್ಭಗಳಲ್ಲಿ ಧರಿಸಬಹುದು, ಯಾವಾಗ ಬೇಡ ಎಂಬ ಬಗ್ಗೆ ಒಪ್ಪಂದಕ್ಕೆ ಬನ್ನಿ.
ಕಾಲು ನೋವು ಕೀಲು ನೋವು ಅಂತ ಆಗಾಗ ಪೈನ್ ಕಿಲ್ಲರ್ ಮಾತ್ರೆ ತಿನ್ನೋರ ಗಮನಕ್ಕೆ!