Brazil prison break story:ಬ್ರೆಜಿಲ್‌ನ ಕೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಳ್ಳಲು ಬರೋಬ್ಬರಿ 5 ವರ್ಷಗಳ ಕಾಲ ಸುರಂಗ ಕೊರೆದಿದ್ದಾನೆ. ಆದರೆ ಆತ ಕೊನೆಗೆ ತಲುಪಿದ್ದು ಎಲ್ಲಿಗೆ ಇಲ್ಲಿದೆ ಒಂದು ಇಂಟರೆಸ್ಟಿಂಗ್ ಸ್ಟೋರಿ
ನಿರಂತರ 5 ವರ್ಷ ಸುರಂಗ ಕೊರೆದ ಕೈದಿ ತಲುಪಿದ್ದು ಎಲ್ಲಿಗೆ
ತಪ್ಪು ಮಾಡಿ ಜೈಲಿಗೆ ಹೋದ ಮೇಲೆ ಅಲ್ಲಿಂದ ವಾಪಸ್ ಬರುವುದಕ್ಕೆ ಅನೇಕ ಕೈದಿಗಳು ಇನ್ನಿಲ್ಲದ ಸಾಹಸ ಮಾಡುತ್ತಾರೆ. ಕೆಲವರು ಸುರಂಗ ಕೊರೆಯುತ್ತಾರೆ. ಇನ್ನೂ ಕೆಲವರು ಕಾಂಪೌಂಡ್ ಹಾರುತ್ತಾರೆ. ಮತ್ತೂ ಕೆಲವರು ಹೊರಗೆ ಕೋರ್ಟ್‌ಗೆಂದು ಕರೆದುಕೊಂಡು ಬಂದಾಗಲೆಲ್ಲಾ ಎಸ್ಕೇಪ್ ಆಗುವುದಕ್ಕೆ ಪ್ರಯತ್ನಿಸುವುದು ಉಂಟು. ಅದೇ ರೀತಿ ಇಲ್ಲೊಬ್ಬ ಜೈಲಿನಿಂದ ಎಸ್ಕೇಪ್ ಆಗೋದಕ್ಕೆ ಪ್ರಯತ್ನಿಸಿ ಸಿಕ್ಕಿ ಬಿದ್ದಿದ್ದಾನೆ. ಆದರೆ ಆತ ಸಿಕ್ಕಿಬಿದ್ದಿದ್ದು ಹೇಗೆ ಎಂಬ ಸ್ವಾರಸ್ಯಕರವಾದ ಸ್ಠೋರಿ ಇಲ್ಲಿದೆ ನೋಡಿ...
ಅಂದಹಾಗೆ ಈ ಘಟನೆ ನಡೆದಿರೋದು ಬ್ರೆಜಿಲ್‌ನಲ್ಲಿ ಇಲ್ಲಿನ ಕಳ್ಳನೋರ್ವ ಜೈಲಿನಿಂದ ಎಸ್ಕೇಪ್ ಆಗುವುದಕ್ಕೆ ಬರೋಬ್ಬರಿ 5 ವರ್ಷಗಳ ಕಾಲ ಸುರಂಗ ಕೊರೆದಿದ್ದಾನೆ. ದೇಶದ ಬಹಳ ಮೋಸ್ಟ್ ನಟೋರಿಯಸ್ ಕೈದಿಗಳೇ ಇದ್ದ ಜೈಲಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆತ ಛಲ ಬಿಡದೇ ನಿರಂತರ 5 ವರ್ಷಗಳ ಕಾಲ ಸುರಂಗ ಕೊರೆದಿದ್ದಾನೆ. ಭಾರಿ ಭದ್ರತೆ ಇರುವ ಈ ಜೈಲಿನಿಂದ ತಪ್ಪಿಸಿಕೊಳ್ಳಲು ಧೈರ್ಯದಿಂದ ಪ್ರಯತ್ನಿಸಿದ ಅನೇಕರಲ್ಲಿ ಒಬ್ಬನೆಂದು ಈ ಕೈದಿಯನ್ನು ಗುರುತಿಸಲಾಗಿದೆ.
ವರದಿಯ ಪ್ರಕಾರ ಈತ ಜೈಲಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಜೈಲಿನ ಅಡಿಪಾಯದ ಮೂಲಕ ನಿರಂತರ ಸುರಂಗ ಕೊರೆದಿದ್ದಾನೆ. ಹೀಗೆ 5 ವರ್ಷಗಳ ಕಾಲ ನಿರಂತರ ಸುರಂಗ ಕೊರೆದ ಈತ ಬಂದು ತಲುಪಿದ್ದು ಮಾತ್ರ ಜೈಲಿನ ಅಧಿಕಾರಿಗಳ ಕೊಠಡಿಗೆ. ಬಂದ ದಾರಿಗೆ ಸುಂಕವಿಲ್ಲದಂತಾಗಿದೆ. ಈ ಘಟನೆಯೂ ಕೈದಿಗಳಿಂದ ಕಿಕ್ಕಿರಿದು ತುಂಬಿದ ಬ್ರೆಜಿಲ್‌ನ ಜೈಲು ವ್ಯವಸ್ಥೆಯ ಬಗ್ಗೆ ಗಮನ ಸೆಳೆದಿದೆ. ಇಲ್ಲಿ ಕೆಲವು ಕೈದಿಗಳು ತಮ್ಮ ಸ್ವಾತಂತ್ರ್ಯವನ್ನು ಮರಳಿ ಪಡೆಯಲು ಎಷ್ಟು ದೂರ ಹೋಗುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ದಯವಿಟ್ಟು ನನ್ನ ಬೆಳೆ ಖರೀದಿಸಿ... ನನ್ನ ಮಗಳ ಮದುವೆ ನಾಳೆ: ಮಾರುಕಟ್ಟೆಯಲ್ಲಿ ಅಳಲು ಶುರು ಮಾಡಿದ ರೈತ
ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಅನೇಕರು ಹಲವು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಜಸ್ಟ್ ಹೆಚ್‌ಆರ್ ಮುಂದೆ ಹೋಗಿ ತಲುಪೋದಕ್ಕೆ 5 ವರ್ಷದ ಸುರಂಗ ಕೊರೆದ್ನಲ್ಲಾ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಕೇಳಿ ನನಗೆ ತುಂಬಾ ಕೋಪ ಬರುತ್ತದೆ. ಶುದ್ಧ ನಿರಂತರ ಪ್ರಯತ್ನ ಮತ್ತು ಸ್ಥಿರತೆಗಾಗಿ ಅವರು ಅವನನ್ನು ಹೋಗಲು ಬಿಡಬೇಕಿತ್ತು ಎಂದು ಒಬ್ಬರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಬಹುಶಃ ಈತ ಪ್ರಿಸನ್ ಬ್ರೇಕ್ ಸಿನಿಮಾದಿಂದ ಪ್ರೇರಣೆ ಪಡೆದಿರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಚಾರ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ಕೈದಿಯ ನಿರಂತರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಸಂತಾನಹರಣ ಶಸ್ತ್ರಚಿಕಿತ್ಸೆಯ ನಂತರವೂ ಹುಟ್ಟಿದ ಕಂದ: ಇದು ಸರ್ಕಾರದ ಲೋಪ ಮಗು ಸಾಕಲು ಆರ್ಥಿಕ ನೆರವು ಬೇಕು ಎಂದ ದಂಪತಿ


