ಜೋಹಾನ್ಸ್‌ಬರ್ಗ್(ಡಿ.09):  ಸೌತ್ ಆಫ್ರಿಕಾದ MSL ಲೀಗ್ ಟೂರ್ನಿ ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸುತ್ತಿದೆ. ಪರ್ಲ್ ರಾಕ್ಸ್ ಹಾಗೂ ನೆಲ್ಸನ್ ಮಂಡೇಲಾ ಬೇ ಗೈಂಟ್ಸ್  ನಡುವಿನ ಪಂದ್ಯಕ್ಕಿಂತ ಹೆಚ್ಚು ಸುದ್ದಿಯಾಗಿರುವುದು ಟಾಸ್. ಪರ್ಲ್ ರಾಕ್ಸ್ ತಂಡದ ನಾಯಕ ಫಾಪ್ ಡುಪ್ಲೆಸಿಸ್ ಟಾಸ್ ಬಳಿಕ ತಂಡದಲ್ಲಿನ ಬದಲಾವಣೆ ಕುರಿತು ನೀಡಿದ ಹೇಳಿಕೆ ಇದೀಗ ವೈರಲ್ ಆಗಿದೆ.

ಇದನ್ನೂ ಓದಿ:  MSL 2019: ಐಪಿಎಲ್‌ಗೂ ಮುನ್ನ ಎಬಿಡಿ ಭರ್ಜರಿ ಫಾರ್ಮ್; 360 ಡಿಗ್ರಿ ಪರ್ಫಾಮೆನ್ಸ್!

ಟಾಸ್ ಬಳಿಕ ನಿರೂಪಕ ತಂಡದ ಬದಲಾವಣೆ ಕುರಿತು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ಡುಪ್ಲೆಸಿಸ್, ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಹಾರ್ಡಸ್ ವಿಲ್ಜೋನ್ ಆಡುತ್ತಿಲ್ಲ. ಕಾರಣ ಆತ ನನ್ನ ತಂಗಿ ಜೊತೆ ಮಲಗಿದ್ದಾನೆ,  ನಿನ್ನೆ ಅವರಿಬ್ಬರು ಮದುವೆಯಾಗಿದ್ದಾರೆ ಎಂದು ಉತ್ತರಿಸಿದ್ದಾರೆ.

 

ಇದನ್ನೂ ಓದಿ:  ವಿಕೆಟ್ ಕಬಳಿಸಿ ಮ್ಯಾಜಿಕ್ ಮಾಡಿದ RCB ಮಾಜಿ ಸ್ಪಿನ್ನರ್!.

ಡುಪ್ಲೆಸಿಸ್ ತಂಗಿ ರೆಮಿ ರೈನರ್ಸ್ ಹಾಗೂ ಸೌತ್ ಆಫ್ರಿಕಾ ಕ್ರಿಕೆಟಿಗ ಹಾರ್ಡಸ್ ವಿಲ್ಜೋನ್ ಬಹಳ ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. 2016ರಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಪದಾರ್ಪಣೆ ಮಾಡಿರುವ ವಿಲ್ಜೋನ್, ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಆಲಿಸ್ಟೈರ್ ಕುಕ್ ವಿಕೆಟ್ ಕಬಳಿಸಿ ಮಿಂಚಿದ್ದರು.

 MSL ಲೀಗ್ ಟೂರ್ನಿಯಲ್ಲಿ  ಡುಪ್ಲೆಸಿಸ್ ಹಾಗೂ ವಿಲ್ಜೋನ್ ಒಂದೇ ತಂಡದ ಪರ ಆಡುತ್ತಿದ್ದಾರೆ. ಬಹುಕಾಲದ ಗೆಳತಿ ರೆಮಿ ರೈನರ್ಸ್ ಮದುವೆಯಾದ ಕಾರಣ ವಿಲ್ಜೋನ್ ತಂಡದಿಂದ  ಹೊರಗುಳಿದಿದ್ದರು.