2023ರ ಐಪಿಎಲ್ ಟೂರ್ನಿಯಲ್ಲಿ ಯಶ್ ದಯಾಳ್, ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಕೋಲ್ಕತಾ ನೈಟ್ ರೈಡರ್ಸ್‌ ಎದುರಿನ ಪಂದ್ಯದಲ್ಲಿ ಯಶ್ ದಯಾಳ್ ಎದುರು ಕೆಕೆಆರ್ ಬ್ಯಾಟರ್ ರಿಂಕು ಸಿಂಗ್ ಒಂದೇ ಓವರ್‌ನಲ್ಲಿ 5 ಸಿಕ್ಸರ್ ಚಚ್ಚಿದ್ದರು. ಈ ಮೂಲಕ ಯಶ್ ದಯಾಳ್ ಬೇಡದ ದಾಖಲೆಗೆ ಪಾತ್ರರಾಗಿದ್ದರು.

ಬೆಂಗಳೂರು(ಮಾ.26): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ವೀಕ್ಷಕ ವಿವರಣೆಗಾರ ಮುರಳಿ ಕಾರ್ತಿಕ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ವೇಗಿ ಯಶ್ ದಯಾಳ್ ಬಗ್ಗೆ ನಾಲಿಗೆ ಹರಿಬಿಟ್ಟು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಎಡಗೈ ವೇಗಿ ಯಶ್ ದಯಾಳ್ ಅವರನ್ನು ಕಸಕ್ಕೆ ಹೋಲಿಸಿದ್ದಕ್ಕೆ ನೆಟ್ಟಿಗರು ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಮುಟ್ಟಿನೋಡಿಕೊಳ್ಳುವಂತ ಉತ್ತರ ನೀಡಿದ್ದಾರೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿತ್ತು. ಈ ಪಂದ್ಯದ ವೇಳೆ ಮೊದಲ ಮೂರು ಓವರ್‌ನಲ್ಲಿ ಶಿಸ್ತುಬದ್ಧ ದಾಳಿ ನಡೆಸಿದ್ದ ಆರ್‌ಸಿಬಿ ವೇಗಿ ಯಶ್ ದಯಾಳ್ ಕೇವಲ 10 ರನ್ ನೀಡಿದ್ದರು. ಈ ಸಂದರ್ಭದಲ್ಲಿ ವೀಕ್ಷಕ ವಿವರಣೆಗಾರಿಕೆ ಮಾಡುತ್ತಿದ್ದ ಮುರಳಿ ಕಾರ್ತಿಕ್, ಯಶ್ ದಯಾಳ್ ಅವರನ್ನು ಉದ್ದೇಶಿಸಿ, "ಒಬ್ಬರ ಪಾಲಿನ ಕಸ, ಮತ್ತೊಬ್ಬರ ಪಾಲಿಗೆ ನಿಧಿ" ಎಂದು ಲೇವಡಿ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.

2023ರ ಐಪಿಎಲ್ ಟೂರ್ನಿಯಲ್ಲಿ ಯಶ್ ದಯಾಳ್, ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಕೋಲ್ಕತಾ ನೈಟ್ ರೈಡರ್ಸ್‌ ಎದುರಿನ ಪಂದ್ಯದಲ್ಲಿ ಯಶ್ ದಯಾಳ್ ಎದುರು ಕೆಕೆಆರ್ ಬ್ಯಾಟರ್ ರಿಂಕು ಸಿಂಗ್ ಒಂದೇ ಓವರ್‌ನಲ್ಲಿ 5 ಸಿಕ್ಸರ್ ಚಚ್ಚಿದ್ದರು. ಈ ಮೂಲಕ ಯಶ್ ದಯಾಳ್ ಬೇಡದ ದಾಖಲೆಗೆ ಪಾತ್ರರಾಗಿದ್ದರು. ಇದಾದ ಬಳಿಕ ಯಶ್ ದಯಾಳ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದರ ಬೆನ್ನಲ್ಲೇ 2024ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಯಶ್ ದಯಾಳ್ ಅವರನ್ನು ತಂಡದಿಂದ ರಿಲೀಸ್ ಮಾಡಿತ್ತು. 

IPL 2024 ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿ..! ವಿಡಿಯೋ ವೈರಲ್

ಇನ್ನು ಕಳೆದ ಡಿಸೆಂಬರ್‌ 19ರಂದು ದುಬೈನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 5 ಕೋಟಿ ರುಪಾಯಿ ನೀಡಿ ಯಶ್ ದಯಾಳ್ ಅವರನ್ನು ತನ್ನ ತೆಕ್ಜೆಗೆ ಸೆಳೆದುಕೊಂಡಿತ್ತು. ಇನ್ನು ಪಂಜಾಬ್ ಎದುರಿನ ಪಂದ್ಯದ ವೇಳೆಯಲ್ಲಿ ಯಶ್ ದಯಾಳ್ ಉತ್ತಮ ಪ್ರದರ್ಶನ ತೋರಿದ ಬೆನ್ನಲ್ಲೇ ಮುರಳಿ ಕಾರ್ತಿಕ್, "ಒಬ್ಬರ ಕಸ, ಮತ್ತೊಬ್ಬರ ನಿಧಿ" ಎಂದು ಹೇಳಿದ್ದಾರೆ.

ಇನ್ನು ಮುರಳಿ ಕಾರ್ತಿಕ್ ಅವರ ಈ ಕಾಮೆಂಟ್‌ಗೆ ಆರ್‌ಸಿಬಿ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸೋಷಿಯಲ್ ಮೀಡಿಯಾ ಮೂಲಕವೇ ಗ್ರಾಚಾರ ಬಿಡಿಸಿದ್ದಾರೆ. ಆರ್‌ಸಿಬಿ ಇನ್‌ಸೈಡರ್ ಕಾರ್ಯಕ್ರಮ ನಡೆಸಿಕೊಡುವ ಮಿಸ್ಟರ್ ನ್ಯಾಗ್ಸ್ ಖ್ಯಾತಿಯ ಡ್ಯಾನಿಶ್ ಶೇಟ್, "ನೀವು ಅದ್ಹೇಗೆ ಒಬ್ಬರ ಕಸ, ಮತ್ತೊಬ್ಬರ ಸಂಪತ್ತು ಎಂದಿರಿ? ನೀವು ಈಗಷ್ಟೇ ಯಶ್ ದಯಾಳ್ ಅವರನ್ನು ಕಸ ಎಂದು ಕರೆದಿರಿ. ಹಾಗಂದ್ರೆ ಏನು?" ಎಂದು ಸೋಷಿಯಲ್ ಮೀಡಿಯವಾದ ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.

IPL 2024 Full Schedule: ಸಂಪೂರ್ಣ ವೇಳಾಪಟ್ಟಿ ಪ್ರಕಟ, ಫೈನಲ್‌ಗೆ ಚೆನ್ನೈ ಆತಿಥ್ಯ

Scroll to load tweet…

ಪ್ರಜ್ವಲ್ ಎನ್ನುವ ಇನ್ನೋರ್ವ ಆರ್‌ಸಿಬಿ ಅಭಿಮಾನಿ, "ಯಶ್ ದಯಾಳ್ ಕುರಿತಾಗಿ ಮುರಳಿ ಕಾರ್ತಿಕ್ ಏನು ಹೇಳಿದ್ದಾರೋ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಒಬ್ಬರನ್ನು ಅದು ಹೇಗೆ ಕಸಕ್ಕೆ ಹೋಲಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

Scroll to load tweet…

ತವರಿನಲ್ಲಿ ಶುಭಾರಂಭ ಮಾಡಿದ ಆರ್‌ಸಿಬಿ:

ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಆಘಾತಕಾರಿ ಸೋಲು ಅನುಭವಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಇದೀಗ ತವರಿನಲ್ಲಿ ಗೆಲುವಿನ ಹಳಿಗೆ ಮರಳಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಬಾರಿಸಿತ್ತು. 

Scroll to load tweet…

ಇನ್ನು ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ಆರಂಭಿಕ ಆಘಾತದ ಹೊರತಾಗಿಯೂ ವಿರಾಟ್ ಕೊಹ್ಲಿ ಬಾರಿಸಿದ ಆಕರ್ಷಕ ಅರ್ಧಶತಕ ಹಾಗೂ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಮಹಿಪಾಲ್ ಲೋಮ್ರೊರ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ತಂಡವು ಇನ್ನೂ 4 ಎಸೆತ ಬಾಕಿ ಇರುವಂತೆಯೇ 4 ವಿಕೆಟ್ ರೋಚಕ ಜಯ ಸಾಧಿಸಿದೆ.