ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಎಲಿಮಿನೇಟರ್ ಹಾಗೂ ಮೊದಲ ಕ್ವಾಲಿಫೈಯರ್ ಪಂದ್ಯವು ನಡೆಯಲಿದೆ. ಮೇ 21 ಹಾಗೂ ಮೇ 22ರಂದು ಕ್ರಮವಾಗಿ ಎಲಿಮಿನೇಟರ್ ಹಾಗೂ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಇನ್ನು ಎರಡನೇ ಕ್ವಾಲಿಫೈಯರ್ ಪಂದ್ಯ ಹಾಗೂ ಫೈನಲ್ ಪಂದ್ಯವು ಕ್ರಮವಾಗಿ ಮೇ 24 ಹಾಗೂ 26ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿದೆ.
ಮುಂಬೈ(ಮಾ.25): 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಸಂಪೂರ್ಣ ಟೂರ್ನಿಯು ಭಾರತದಲ್ಲೇ ನಡೆಯಲಿದೆ. ಲೋಕಸಭಾ ಚುನಾವಣೆಯ ಹೊರತಾಗಿಯೂ 17ನೇ ಆವೃತ್ತಿಯ ಸಂಫೂರ್ಣ ಐಪಿಎಲ್ ಟೂರ್ನಿಯು ಭಾರತದಲ್ಲೇ ನಡೆಯಲಿದೆ.
ಈ ಮೊದಲು ಬಿಸಿಸಿಐ 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ 21 ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿತ್ತು. ಇದೀಗ ಲೋಕಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಬಿಸಿಸಿಐ ಸಾಕಷ್ಟು ಅಳೆದುತೂಗಿ ಎರಡನೇ ಹಂತದಲ್ಲಿ ಸಾಕಷ್ಟು ಅಳೆದುತೂಗಿ 2024ನೇ ಸಾಲಿನ ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಿದೆ.
ನೀನು ಬೌಂಡರಿ ಗೆರೆಯಲ್ಲಿ ಫೀಲ್ಡಿಂಗ್ ಮಾಡು...! ರೋಹಿತ್ ಶರ್ಮಾಗೆ ಶಾಕ್ ಕೊಟ್ಟ ಹಾರ್ದಿಕ್ ಪಾಂಡ್ಯ..! ನೆಟ್ಟಿಗರು ಗರಂ
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಎಲಿಮಿನೇಟರ್ ಹಾಗೂ ಮೊದಲ ಕ್ವಾಲಿಫೈಯರ್ ಪಂದ್ಯವು ನಡೆಯಲಿದೆ. ಮೇ 21 ಹಾಗೂ ಮೇ 22ರಂದು ಕ್ರಮವಾಗಿ ಎಲಿಮಿನೇಟರ್ ಹಾಗೂ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಇನ್ನು ಎರಡನೇ ಕ್ವಾಲಿಫೈಯರ್ ಪಂದ್ಯ ಹಾಗೂ ಫೈನಲ್ ಪಂದ್ಯವು ಕ್ರಮವಾಗಿ ಮೇ 24 ಹಾಗೂ 26ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿದೆ.
ಈ ಮೊದಲು ಬಿಸಿಸಿಐ ಏಪ್ರಿಲ್ 07ರವರೆಗಿನ ಐಪಿಎಲ್ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿತ್ತು. ಇದೀಗ ಇನ್ನುಳಿದ ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಂಡಿದೆ. ಎರಡನೇ ಹಂತದ ವೇಳಾಪಟ್ಟಿಯಲ್ಲಿ ಒಟ್ಟು 11 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ವೈಜಾಗ್ ಮೈದಾನವನ್ನು ತನ್ನ ತವರನ್ನಾಗಿಸಿಕೊಂಡಿದೆ. ಇನ್ನುಳಿದಂತೆ ಧರ್ಮಶಾಲಾ ಹಾಗೂ ಗುವಾಹಟಿಯಲ್ಲಿ ತಲಾ ಎರಡೆರಡು ಪಂದ್ಯಗಳು ನಡೆಯಲಿವೆ. ಪಂಜಾಬ್ ಕಿಂಗ್ಸ್ ತಂಡವು ಮೇ 09ರಂದು ಧರ್ಮಶಾಲಾದಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದೆ.
ಪಂಜಾಬ್ ಎದುರಿನ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿಂದು ಮೇಜರ್ ಚೇಂಜ್..! ಇಲ್ಲಿದೆ ಸಂಭಾವ್ಯ ತಂಡ
ಹೀಗಿದೆ ನೋಡಿ ಸಂಪೂರ್ಣ ಐಪಿಎಲ್ ವೇಳಾಪಟ್ಟಿ