ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯು ಮತ್ತಷ್ಟು ನಿಖರತೆ ಹಾಗೂ ರೋಚಕತೆಯಿಂದ ಕೂಡಿರಲು ಬಿಸಿಸಿಐ ಮಾಸ್ಟರ್ ಪ್ಲಾನ್ ರೂಪಿಸಿದೆ. ಹೌದು, ಈ ಬಾರಿ ಐಪಿಎಲ್‌ನಲ್ಲಿ ಅಂಪೈರ್ ತೀರ್ಪು ಮೇಲ್ಮನವಿ ವ್ಯವಸ್ಥೆ(ಡಿಆರ್‌ಎಸ್)ಯನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ಬಿಸಿಸಿಐ ಯೋಜನೆ ರೂಪಿಸಿದ್ದು, ಟೂರ್ನಿಯಲ್ಲಿ ಸ್ಮಾರ್ಟ್ ರಿವ್ಯೂ ವ್ಯವಸ್ಥೆ ಜಾರಿಗೊಳಿಸಲಿದೆ.
ನವದೆಹಲಿ(ಮಾ.20): 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಮಾರ್ಚ್ 22ರಿಂದ 17ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುವುದರೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದೆ.
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯು ಮತ್ತಷ್ಟು ನಿಖರತೆ ಹಾಗೂ ರೋಚಕತೆಯಿಂದ ಕೂಡಿರಲು ಬಿಸಿಸಿಐ ಮಾಸ್ಟರ್ ಪ್ಲಾನ್ ರೂಪಿಸಿದೆ. ಹೌದು, ಈ ಬಾರಿ ಐಪಿಎಲ್‌ನಲ್ಲಿ ಅಂಪೈರ್ ತೀರ್ಪು ಮೇಲ್ಮನವಿ ವ್ಯವಸ್ಥೆ(ಡಿಆರ್‌ಎಸ್)ಯನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ಬಿಸಿಸಿಐ ಯೋಜನೆ ರೂಪಿಸಿದ್ದು, ಟೂರ್ನಿಯಲ್ಲಿ ಸ್ಮಾರ್ಟ್ ರಿಪ್ಲೆ ವ್ಯವಸ್ಥೆ ಜಾರಿಗೊಳಿಸಲಿದೆ. ಇದು ವೇಗದ ಜೊತೆಗೆ ನಿಖರವಾಗಿ ತೀರ್ಪನ್ನು ಪ್ರಕಟಿಸಲು ಸಹಕಾರಿಯಾಗಲಿದೆ. ಸ್ಮಾರ್ಟ್ ರಿಪ್ಲೆನಲ್ಲಿ ಹಾಕ್-ಐ ವ್ಯವಸ್ಥೆ ನೋಡಿಕೊಳ್ಳುವವರು ಟಿವಿ ಅಂಪೈರ್‌ಗಳಿಂದ ನೇರವಾಗಿ ಮಾಹಿತಿ ಪಡೆದುಕೊಳ್ಳಲಿದ್ದಾರೆ.
WPL ಕಪ್ ಗೆದ್ದ RCB ವನಿತೆಯರಿಗೆ ಪುರುಷ ತಂಡದ ಗಾರ್ಡ್ ಆಫ್ ಹಾನರ್!
ಇದಷ್ಟೇ ಅಲ್ಲದೆ ಮೈದಾನದ ವಿವಿಧೆಡೆ 8 ಹೈ ಸ್ಪೀಡ್ ಕ್ಯಾಮರಾಗಳನ್ನು ಅಳವಡಿಸಲಿದ್ದು, ಅದರಲ್ಲಿ ಸೆರೆ ಹಿಡಿಯಲಾದ ಫೋಟೋಗಳನ್ನು ಪರಿಶೀಲಿಸಿ ಕ್ಯಾಚ್, ಎಲ್‌ಬಿಡಬ್ಲ್ಯು, ಸ್ಟಂಪ್ ಔಟ್‌ಗಳ ತೀರ್ಪುಗಳನ್ನು ನೀಡಲಿದ್ದಾರೆ.
ಸ್ಟಾರ್ ಸ್ಟೋರ್ಟ್ಸ್ ವಾಹಿನಿಯಲ್ಲಿ ತಾರೆಯರಿಂದ ಕನ್ನಡದಲ್ಲಿ ಐಪಿಎಲ್ ಕಾಮೆಂಟರಿ!
ಮುಂಬೈ: 17ನೇ ಆವೃತ್ತಿಯ ಐಪಿಎಲ್ ಪಂದ್ಯಗಳನ್ನು ಟೀವಿಯಲ್ಲಿ ಪ್ರಸಾರ ಮಾಡಲಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಕರ್ನಾಟಕದ ತಾರಾ ಕ್ರಿಕೆಟಿಗರು ಕನ್ನಡದಲ್ಲಿ ವೀಕ್ಷಕ ವಿವರಣೆ ನೀಡಲಿದ್ದಾರೆ.
ಕನ್ನಡ, ತೆಲುಗು, ತಮಿಳು ಸೇರಿ ಅನೇಕ ಭಾಷೆಗಳಲ್ಲಿ ಕಾಮೆಂಟರಿ ಇರಲಿದೆ. ದಿಗ್ಗಜ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯ ಕಾಮೆಂಟರಿ ತಂಡದಲ್ಲಿ ಇರಲಿದ್ದು, ಮಾಜಿ ಕ್ರಿಕೆಟಿಗರಾದ ವಿಜಯ್ ಭಾರದ್ವಾಜ್, ವಿನಯ್ ಕುಮಾರ್, ಜಿ.ಕೆ.ಅನಿಲ್ ಕುಮಾರ್, ಬಾಲಚಂದ್ರ ಅಖಿಲ್, ಪವನ್ ದೇಶಪಾಂಡೆ, ಎನ್.ಸಿ.ಅಯ್ಯಪ್ಪ ಜೊತೆ ಕ್ರಿಕೆಟ್‌ನಲ್ಲಿ ಇನ್ನೂ ಸಕ್ರಿಯರಾಗಿರುವ ಜೆ.ಸುಚಿತ್ ಸಹ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.
BWF Rankings ಲಕ್ಷ್ಯ ಸೇನ್ ವಿಶ್ವ ನಂ.13 ಆಟಗಾರ
ಮಾ.22ರಿಂದ ಐಪಿಎಲ್ 17ನೇ ಆವೃತ್ತಿ ಆರಂಭಗೊಳ್ಳಲಿದ್ದು, ಪಂದ್ಯಗಳನ್ನು ಟೀವಿಯಲ್ಲಿ ಪ್ರಸಾರ ಮಾಡಲು ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಹಕ್ಕು ಪಡೆದಿದೆ. ಹಲವು ವರ್ಷಗಳಿಂದ ಕನ್ನಡದಲ್ಲಿ ಕಾಮೆಂಟ್ರಿ ನಡೆಸಲಾಗುತ್ತಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್‌ಗೆ ರಿಷಭ್ ಪಂತ್ ನಾಯಕ
ನವದೆಹಲಿ: 2024ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂತ್ ಮುನ್ನಡೆಸಲಿದ್ದಾರೆ. 2023ರ ಡಿಸೆಂಬರ್‌ನಲ್ಲಿ ಕಾರು ಅಪಘಾತಕ್ಕೀಡಾಗಿ 14 ತಿಂಗಳು ಕ್ರಿಕೆಟ್‌ನಿಂದ ಪಂತ್ ದೂರವಿದ್ದರು. ಕಳೆದ ವರ್ಷ ಐಪಿಎಲ್‌ನಲ್ಲಿ ತಂಡವನ್ನು ಡೇವಿಡ್ ವಾರ್ನರ್ ಮುನ್ನಡೆಸಿದ್ದರು.
