Asianet Suvarna News Asianet Suvarna News

BWF Rankings ಲಕ್ಷ್ಯ ಸೇನ್‌ ವಿಶ್ವ ನಂ.13 ಆಟಗಾರ

ಎಚ್‌.ಎಸ್‌.ಪ್ರಣಯ್‌ 9ನೇ ಸ್ಥಾನದಲ್ಲೇ ಮುಂದುವರಿದಿದ್ದು, ಕಿದಂಬಿ ಶ್ರೀಕಾಂತ್‌ 27ನೇ ಸ್ಥಾನದಲ್ಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು 11ನೇ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.

Lakshya Sen jumps five places to reach world number 13 kvn
Author
First Published Mar 20, 2024, 10:40 AM IST

ನವದೆಹಲಿ: ಭಾರತದ ತಾರಾ ಶಟ್ಲರ್‌ ಲಕ್ಷ್ಯ ಸೇನ್‌ ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್‌ ರ್‍ಯಾಂಕಿಂಗ್‌ನಲ್ಲಿ 5 ಸ್ಥಾನ ಮೇಲೇರಿ 13ನೇ ಸ್ಥಾನ ಪಡೆದಿದ್ದಾರೆ. ಏಪ್ರಿಲ್‌-ಮೇ ಅಂತ್ಯಕ್ಕೆ ರ್‍ಯಾಂಕಿಂಗ್‌ನಲ್ಲಿ ಅಗ್ರ-16ರಲ್ಲಿರುವ ಆಟಗಾರರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಸೇನ್‌ ಪ್ರಗತಿ ಮಹತ್ವದ್ದಾಗಿದೆ.

ಎಚ್‌.ಎಸ್‌.ಪ್ರಣಯ್‌ 9ನೇ ಸ್ಥಾನದಲ್ಲೇ ಮುಂದುವರಿದಿದ್ದು, ಕಿದಂಬಿ ಶ್ರೀಕಾಂತ್‌ 27ನೇ ಸ್ಥಾನದಲ್ಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು 11ನೇ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.

ಇಂದು ಬೆಂಗಳೂರಿನ ಅಂಜು ಬಾಬಿ ಜಾರ್ಜ್‌ ಅಕಾಡೆಮಿಯಲ್ಲಿ 3ನೇ ರಾಷ್ಟ್ರೀಯ ಜಂಪ್ಸ್‌ ಕೂಟ

ಬೆಂಗಳೂರು: 3ನೇ ರಾಷ್ಟ್ರೀಯ ಜಂಪ್ಸ್‌ (ನೆಗೆತ/ಜಿಗಿತ) ಚಾಂಪಿಯನ್‌ಶಿಪ್‌ ಬುಧವಾರ ನಡೆಯಲಿದೆ. ಮಾಜಿ ಅಥ್ಲೀಟ್‌ ಅಂಜು ಬಾಬಿ ಜಾರ್ಜ್‌ ಅವರ ಅಕಾಡೆಮಿ ಈ ಕೂಟಕ್ಕೆ ಆತಿಥ್ಯ ವಹಿಸಲಿದ್ದು, ಹೈಜಂಪ್‌, ಲಾಂಗ್‌ ಜಂಪ್‌, ಟ್ರಿಪಲ್‌ ಜಂಪ್‌ ಹಾಗೂ ಪೋಲ್‌ ವಾಲ್ಟ್‌ ಸ್ಪರ್ಧೆಗಳು ನಡೆಯಲಿವೆ.

ಹಿರಿಯ ಪುರುಷ, ಮಹಿಳೆಯರು, ಅಂಡರ್‌-20 ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಕರ್ನಾಟಕ ಸೇರಿ ಹಲವು ರಾಜ್ಯಗಳ ಒಟ್ಟು 42 ಅಥ್ಲೀಟ್‌ಗಳು ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

WPL ಕಪ್‌ ಗೆದ್ದ RCB ವನಿತೆಯರಿಗೆ ಪುರುಷ ತಂಡದ ಗಾರ್ಡ್ ಆಫ್‌ ಹಾನರ್‌!

ಜೆಸ್ಸಿ ಸಂದೇಶ್‌, ಪಾವನಾ ನಾಗರಾಜ್‌ ಕರ್ನಾಟಕದ ಸವಾಲು ಮುನ್ನಡೆಸಲಿದ್ದು, ಅಂತಾರಾಷ್ಟ್ರೀಯ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಟ್ರಿಪಲ್‌ ಜಂಪ್‌ ಪಟು ಎಲ್ಡೋಸ್‌ ಪೌಲ್‌, ಲಾಂಗ್‌ಜಂಪ್‌ ಪಟುಗಳಾದ ನಯನಾ ಜೇಮ್ಸ್‌, ಶೈಲಿ ಸಿಂಗ್‌, ಪೋಲ್‌ ವಾಲ್ಟ್‌ ಪಟು ಪವಿತ್ರಾ ವೆಂಕಟೇಶ್‌ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.

ಪೋಲಿಶ್‌ ಗ್ರ್ಯಾನ್‌ ಪ್ರಿ: 6 ಪದಕ ಗೆದ್ದ ಭಾರತ

ನವದೆಹಲಿ: ಪೋಲೆಂಡ್‌ನಲ್ಲಿ ನಡೆದ ಪೋಲಿಶ್‌ ಗ್ರ್ಯಾನ್‌ ಪ್ರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಶೂಟರ್‌ಗಳು 6 ಪದಕಗಳನ್ನು ಗೆದ್ದು ಅಭಿಯಾನ ಕೊನೆಗೊಳಿಸಿದ್ದಾರೆ. ಅಖಿಲ್‌ ಶೊರೇನ್‌ ಪುರುಷರ 50 ಮೀ. ರೈಫಲ್ 3-ಪೊಸಿಷನ್‌ನಲ್ಲಿ, ಅನೀಶ್‌ ಭನ್ವಾಲಾ ಪುರುಷರ 25 ಮೀ. ರ್‍ಯಾಪಿಡ್‌ ಫೈರ್ ಪಿಸ್ತೂಲ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಆಶಿ ಚೋಕ್ಸಿ ಮಹಿಳೆಯರ 3 ಪೊಸಿಷನ್‌ನಲ್ಲಿ ಬೆಳ್ಳಿ, ಶ್ರಿಯಾಂಕಾ ಕಂಚು ಪಡೆದರು. ನೀರಜ್‌ ಕುಮಾರ್‌ 2 ವಿಭಾಗಗಳಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

Follow Us:
Download App:
  • android
  • ios