ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವು ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಪಾಕಿಸ್ತಾನದ ಬ್ಯಾಟಿಂಗ್ ಮತ್ತು ಬೌಲಿಂಗ್ ವೈಫಲ್ಯದಿಂದ ಹೀನಾಯ ಸೋಲಾಯಿತು. ಪಾಕಿಸ್ತಾನಿ ಮಾಧ್ಯಮಗಳು ಭಾರತದ ಗೆಲುವಿಗೆ ವಾಮಾಚಾರ ಕಾರಣವೆಂದು ಆಧಾರವಿಲ್ಲದ ಆರೋಪಿಸಿವೆ. ಭಾರತವು ಪಂಡಿತರನ್ನು ಕಳುಹಿಸಿ ಏಕಾಗ್ರತೆ ಭಂಗ ಮಾಡಿತೆಂದು ದೂರಿದ್ದಾರೆ. ಭಾರತದ ಶ್ರೇಯಸ್ ಅಯ್ಯರ್ ಅರ್ಧಶತಕ ಮತ್ತು ಕೊಹ್ಲಿಯ ಶತಕದಿಂದ ಗೆಲುವು ಸಾಧಿಸಿತು.
ಕರಾಚಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ಎದುರು ಭಾರತ ತಂಡವು 6 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಚಾಂಪಿಯನ್ಸ್ ಟ್ರೋಫಿ ಗೆಲ್ಲದಿದ್ದರೂ ಭಾರತ ಎದುರು ಸೋಲಬಾರದು ಅಂದುಕೊಂಡಿದ್ದ ಪಾಕಿಸ್ತಾನಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ದಯನೀಯ ವೈಫಲ್ಯ ಅನುಭವಿಸಿದ ಮೊಹಮ್ಮದ್ ರಿಜ್ವಾನ್ ಪಡೆ ಹೀನಾಯ ಸೋಲು ಅನುಭವಿಸಿದೆ. ಇನ್ನು ಇದೆಲ್ಲದರ ನಡುವೆ ಪಾಕಿಸ್ತಾನ ಮಾಧ್ಯಮಗಳು ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದು, ಪಾಕಿಸ್ತಾನ ತಂಡ ಸೋಲಲು ಬ್ಲಾಕ್ ಮ್ಯಾಜಿಕ್(ವಾಮಾಚಾರ) ನಡೆದಿದೆ ಎಂದು ಆಧಾರರಹಿತ ಆರೋಪ ಮಾಡಿ ಜಗತ್ತಿನ ಮುಂದೆ ನಗೆಪಾಟಲಿಗೀಡಾಗಿವೆ.
ಡಿಸ್ಕವರ್ ಪಾಕಿಸ್ತಾನ ಎನ್ನುವ ಪಾಕಿಸ್ತಾನ ಚಾನೆಲ್‌ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವಿಶ್ಲೇಷಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕ್ರಿಕೆಟ್ ವಿಶ್ಲೇಷಕರೊಬ್ಬರು ಭಾರತ ತಂಡದ ಗೆಲುವಿಗೆ ಪೂಜೆ, ಪ್ರಾರ್ಥನೆ, ವಾಮಾಚಾರ ನಡೆದಿದೆ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಮೊದಲ ಸಲ ತಮ್ಮ ವೀಕ್‌ನೆಸ್ ಏನೆಂದು ಬಾಯ್ಬಿಟ್ಟ ವಿರಾಟ್ ಕೊಹ್ಲಿ!
ಭಾರತವು ತನ್ನ 22 ಪಂಡಿತರನ್ನು ದುಬೈಗೆ ತಂದು ಇಳಿಸಿದೆ. ಪ್ರತಿಯೊಬ್ಬ ಆಟಗಾರನಿಗೆ ತಲಾ ಇಬ್ಬರು ಪಂಡಿತರಿದ್ದಾರೆ. ಅವರ ಕೆಲಸ ಪಾಕಿಸ್ತಾನದ ಆಟಗಾರರ ಏಕಾಗ್ರತೆ ಭಂಗ ಮಾಡುವುದೇ ಆಗಿದೆ. ಈ ಕಾರಣಕ್ಕಾಗಿಯೇ ಭಾರತ ತಂಡವು ಪಾಕಿಸ್ತಾನ ಪ್ರವಾಸ ಮಾಡಲು ಹಿಂದೇಟು ಹಾಕಿತು. ಯಾಕೆಂದರೆ ಅವರಿಗೂ ಗೊತ್ತಿತ್ತು ಪಾಕಿಸ್ತಾನಕ್ಕೆ ಅವರ ಪಂಡಿತರನ್ನು ಕಳಿಸಿಕೊಡಲು ಸಾಧ್ಯವಿಲ್ಲವೆಂದು ಎಂದು ಪಾಕ್ ವಿಶ್ಲೇಷಕನೊಬ್ಬ ಆಧಾರರಹಿತ ಆರೋಪ ಮಾಡಿದ್ದಾರೆ.
ಇನ್ನು ಇದನ್ನು ಕೇಳುತ್ತಾ ಕುಳಿತಿದ್ದ ಮತ್ತೊಮ್ಮ ವಿಶ್ಲೇಷಕ, 'ಇತ್ತೀಚಿಗಿನ ದಿನಗಳಲ್ಲಿ ಅವರು ಎಲ್ಲಾ ಕಡೆ ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಇದೆಲ್ಲಾ ಹೇಗೆ ಸಾಧ್ಯ ನೀವೇ ಹೇಳಿ? ಇಂತಹ ಒಂದಷ್ಟು ತಂತ್ರಗಾರಿಕೆಯಿಂದಲೇ ಹೀಗೆ ಆಗುತ್ತಿದೆ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ. ಭಾರತದ ಇಂತಹ ತಂತ್ರಗಾರಿಕೆಯನ್ನು ಮಟ್ಟಹಾಕಲು ನಾವು ದೇವರಲ್ಲಿ ಮತ್ತಷ್ಟು ಪ್ರಾರ್ಥನೆ ಮಾಡಬೇಕು ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಇದನ್ನೂ ಓದಿ: ತಂಡ ಸೋಲುತ್ತಿರುವಾಗ ನಿನಗೆ ಈ ಹುಚ್ಚಾಟ ಬೇಕಿತ್ತಾ? ಪಾಕ್ ಬೌಲರ್‌ಗೆ ತಪರಾಕಿ ಕೊಟ್ಟ ವಾಸೀಂ ಅಕ್ರಂ!
ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು ಸೌದ್ ಶಕೀಲ್ ಆಕರ್ಷಕ ಅರ್ಧಶತಕ ಹಾಗೂ ಮೊಹಮ್ಮದ್ ರಿಜ್ವಾನ್ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 241 ರನ್‌ಗಳಿಗೆ ಸರ್ವಪತನ ಕಂಡಿತು. ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕ ಹಾಗೂ ವಿರಾಟ್ ಕೊಹ್ಲಿ ಬಾರಿಸಿದ ಅಜೇಯ ಶತಕದ ನೆರವಿನಿಂದ ಇನ್ನೂ 45 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತು.
