MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಟಿ20 ವಿಶ್ವಕಪ್ ಗೆಲುವಿನಿಂದ ನಿವೃತ್ತಿಗೆ ಸಜ್ಜಾದ್ರಾ ಟೀಂ ಇಂಡಿಯಾದ ಐವರು ಕ್ರಿಕೆಟರ್ಸ್?

ಟಿ20 ವಿಶ್ವಕಪ್ ಗೆಲುವಿನಿಂದ ನಿವೃತ್ತಿಗೆ ಸಜ್ಜಾದ್ರಾ ಟೀಂ ಇಂಡಿಯಾದ ಐವರು ಕ್ರಿಕೆಟರ್ಸ್?

ಟಿ20 ವಿಶ್ವಕಪ್ ಗೆಲುವಿನಿಂದ ನಿವೃತ್ತಿಗೆ ಸಜ್ಜಾದ ಟೀಂ ಇಂಡಿಯಾದ ಐವರು ಕ್ರಿಕೆಟರ್ಸ್,  ಅದ್ಭುತ ಗೆಲುವಿನ ಸಂಭ್ರಮ ಇನ್ನೂ ಮುಗಿದಿಲ್ಲ, ಅಷ್ಟರಲ್ಲೇ ಕೆಲ ಪ್ರಮುಖ ಕ್ರಿಕೆಟಿಗರು ವಿದಾಯಕ್ಕೆ ಸಜ್ಜಾಗಿದ್ದಾರಾ?

3 Min read
Author : Chethan Kumar
Published : Mar 16 2026, 11:13 PM IST
Share this Photo Gallery
  • FB
  • TW
  • Linkdin
  • Whatsapp
16
ನಿವೃತ್ತಿ ಅಂಚಿನಲ್ಲಿರುವ ಟೀಮ್ ಇಂಡಿಯಾ ಆಟಗಾರರು..
Image Credit : AFP

ನಿವೃತ್ತಿ ಅಂಚಿನಲ್ಲಿರುವ ಟೀಮ್ ಇಂಡಿಯಾ ಆಟಗಾರರು..

ಟೀಮ್ ಇಂಡಿಯಾಗೆ 2026ರ ಟಿ20 ವಿಶ್ವಕಪ್ ಗೆಲುವು ತುಂಬಾನೇ ವಿಶೇಷ. ಈ ಹಿಂದೆ ಗೆದ್ದ ಎರಡು ವಿಶ್ವಕಪ್‌ಗಳು ವಿದೇಶಿ ನೆಲದಲ್ಲಾಗಿದ್ದವು. ಆದರೆ ಈ ಬಾರಿ ತವರಿನಲ್ಲೇ, ಸ್ವಂತ ಪ್ರೇಕ್ಷಕರ ಮುಂದೆ ಟ್ರೋಫಿ ಗೆದ್ದು ದಾಖಲೆ ಬರೆದಿದೆ . ಈ ಗೆಲುವು ಆಟಗಾರರಿಗೆ ಮಾತ್ರವಲ್ಲ, ಅಭಿಮಾನಿಗಳಿಗೂ ಸ್ಪೆಷಲ್. ಆದರೆ, ಇದೇ ವಿಶ್ವಕಪ್ ಕೆಲವು ಹಿರಿಯ ಆಟಗಾರರ  ಕೆರಿಯರ್‌ಗೆ ಬಹುತೇಕ ಫುಲ್‌ಸ್ಟಾಪ್ ಇಟ್ಟಿದೆ. ಯುವ ಆಟಗಾರರ ಸ್ಪರ್ಧೆ ಎದುರಿಸಲಾಗದೆ ಕೆಲವರು ನಿವೃತ್ತಿಗೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಈ ವಿಶ್ವಕಪ್ ಎಫೆಕ್ಟ್‌ನಿಂದ ನಿವೃತ್ತಿ ಪಡೆಯಬಹುದಾದ ಆಟಗಾರರು ಯಾರು ಅಂತ ನೋಡೋಣ.

26
1. ಮೊಹಮ್ಮದ್ ಶಮಿ...
Image Credit : Getty

1. ಮೊಹಮ್ಮದ್ ಶಮಿ...

ಇತ್ತೀಚೆಗೆ ಮೊಹಮ್ಮದ್ ಶಮಿ ನಿವೃತ್ತಿ ಬಗ್ಗೆ ಸಾಕಷ್ಟು ಸುದ್ದಿಗಳು ಕೇಳಿಬರುತ್ತಿವೆ. ಈ ಟಿ20 ವಿಶ್ವಕಪ್ ನಂತರ ಈ ಚರ್ಚೆ ಮತ್ತಷ್ಟು ಜೋರಾಗಿದೆ. ಗಂಭೀರ ಗಾಯಗಳು, ಫಾರ್ಮ್ ಕೊರತೆಯಿಂದ ಅವರು ಕಷ್ಟಪಡುತ್ತಿದ್ದಾರೆ. ವೈಯಕ್ತಿಕ ಸಮಸ್ಯೆಗಳೂ ಅವರನ್ನು ಕಾಡುತ್ತಿವೆ. 2025ರ ಚಾಂಪಿಯನ್ಸ್ ಟ್ರೋಫಿ ನಂತರ ಅವರು ಯಾವುದೇ ಅಂತರರಾಷ್ಟ್ರೀಯ ಪಂದ್ಯ ಆಡಿಲ್ಲ. ಇನ್ನು ಮುಂದೆ ಅವರು ಮೈದಾನದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. 2026ರ ವಿಶ್ವಕಪ್ ಗೆಲುವಿನಿಂದ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಯುವ ತಂಡದ ಮೇಲೆ ನಂಬಿಕೆ ಹೆಚ್ಚಾಗಿದೆ. ಹೀಗಾಗಿ, 2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್, ಕೊಹ್ಲಿಯಂತಹ ಕೆಲವರನ್ನು ಬಿಟ್ಟು ಉಳಿದಂತೆ ಯುವಕರಿಗೇ ಮಣೆ ಹಾಕುವ ಯೋಚನೆಯಲ್ಲಿದೆ. ಹಾಗಾಗಿ, ಶಮಿ ತಂಡಕ್ಕೆ ಮರಳುವುದು ಕಷ್ಟ. ಇದೇ ಕಾರಣಕ್ಕೆ ಅವರು ಗೌರವಯುತವಾಗಿ ನಿವೃತ್ತಿ ಘೋಷಿಸಬಹುದು ಎನ್ನಲಾಗುತ್ತಿದೆ.

Related Articles

Related image1
ಟಿ20 ವಿಶ್ವಕಪ್ ವೇಳೆ ಕ್ಯಾಪ್ಟನ್ ಮೇಲೆ ಸಿಟ್ಟಾಗಿದ್ದ ಸ್ಟಾರ್ ಕ್ರಿಕೆಟಿಗ! ಕೊನೆಗೂ ತಪ್ಪಾಯ್ತು ಅಂತ ಕ್ಷಮೆ ಕೇಳಿದ ಸೂರ್ಯಕುಮಾರ್ ಯಾದವ್!
Related image2
ಟಿ20 ವಿಶ್ವಕಪ್‌ ಗೆದ್ದ ಪ್ಲೇಯರ್‌ಗೆ ಸಿಗದ ವಿಮಾನ ಟಿಕೆಟ್‌, ರೈಲಿನಲ್ಲಿ ರಹಸ್ಯವಾಗಿ ಪ್ರಯಾಣ ಬೆಳೆಸಿದ ಸ್ಟಾರ್‌ ಆಟಗಾರ!
36
2. ಇಶಾಂತ್ ಶರ್ಮಾ
Image Credit : Getty

2. ಇಶಾಂತ್ ಶರ್ಮಾ

ಟೀಮ್ ಇಂಡಿಯಾದ ಹಿರಿಯ ಬೌಲರ್ ಇಶಾಂತ್ ಶರ್ಮಾ ಅವರ ಅಂತರರಾಷ್ಟ್ರೀಯ ಕೆರಿಯರ್‌ಗೂ ಈ ಟಿ20 ವಿಶ್ವಕಪ್ ಫುಲ್‌ಸ್ಟಾಪ್ ಇಟ್ಟಿದೆ ಎನ್ನಬಹುದು. ಈ ವೇಗದ ಬೌಲರ್ ಹಿಂದೆ ಭಾರತ ತಂಡಕ್ಕೆ ಅನೇಕ ಗೆಲುವುಗಳನ್ನು ತಂದುಕೊಟ್ಟಿದ್ದರು. ಆದರೆ ಸದ್ಯ ಗಾಯಗಳು ಮತ್ತು ಫಾರ್ಮ್ ಕೊರತೆಯಿಂದ ತಂಡದಿಂದ ದೂರ ಉಳಿದಿದ್ದಾರೆ. 2021ರಿಂದ, ಅಂದರೆ ಸುಮಾರು ಐದು ವರ್ಷಗಳಿಂದ ಅವರು ತಂಡದಿಂದ ಹೊರಗಿದ್ದಾರೆ. ಕೇವಲ ಐಪಿಎಲ್ ಮಾತ್ರ ಆಡುತ್ತಿದ್ದಾರೆ. 2027ರ ಏಕದಿನ ವಿಶ್ವಕಪ್‌ವರೆಗೆ ಆಡಿ, ನಂತರ ನಿವೃತ್ತಿ ಘೋಷಿಸುವ ಯೋಚನೆಯಲ್ಲಿದ್ದರು ಎನ್ನಲಾಗಿದೆ. ಆದರೆ ಯುವ ತಂಡದ ಅದ್ಭುತ ಪ್ರದರ್ಶನದಿಂದಾಗಿ, ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವ ಅವರ ಆಸೆ ಕಮರಿದೆ. ಹೀಗಾಗಿ ಇಶಾಂತ್ ಶರ್ಮಾ ಶೀಘ್ರದಲ್ಲೇ ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ.
46
ಅಜಿಂಕ್ಯ ರಹಾನೆ..
Image Credit : Getty

ಅಜಿಂಕ್ಯ ರಹಾನೆ..

ಟೀಮ್ ಇಂಡಿಯಾದ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಕೂಡ ನಿವೃತ್ತಿ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಹಲವು ಯುವ ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಟಿ20 ವಿಶ್ವಕಪ್ ಪ್ರದರ್ಶನವೇ ಇದಕ್ಕೆ ಸಾಕ್ಷಿ. ಆಯ್ಕೆಗಾರರು ಕೂಡ ತಂಡದ ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರರ ಕಡೆಗೇ ಒಲವು ತೋರುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ರಹಾನೆಗೆ ಮತ್ತೆ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟ. ಹಾಗಾಗಿ, ಅವರೇ ಗೌರವಯುತವಾಗಿ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಇದೆ. ಅಜಿಂಕ್ಯ ರಹಾನೆ ಭಾರತ ತಂಡದ ಪರ ಮೂರೂ ಮಾದರಿಗಳಲ್ಲಿ ಒಟ್ಟು 8,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 85 ಪಂದ್ಯಗಳಿಂದ 12 ಶತಕಗಳೊಂದಿಗೆ 5,077 ರನ್, ಏಕದಿನದಲ್ಲಿ 90 ಪಂದ್ಯಗಳಿಂದ 3 ಶತಕಗಳೊಂದಿಗೆ 2,962 ರನ್ ಗಳಿಸಿದ್ದಾರೆ. 20 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 375 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ರಹಾನೆ 198 ಪಂದ್ಯಗಳನ್ನು ಆಡಿ 2 ಶತಕ ಮತ್ತು 33 ಅರ್ಧಶತಕಗಳೊಂದಿಗೆ 5,032 ರನ್ ಕಲೆಹಾಕಿದ್ದಾರೆ.
56
ಭುವನೇಶ್ವರ್ ಕುಮಾರ್...
Image Credit : Getty

ಭುವನೇಶ್ವರ್ ಕುಮಾರ್...

ಟೀಮ್ ಇಂಡಿಯಾ ಬೌಲರ್ ಭುವನೇಶ್ವರ್ ಕುಮಾರ್ 2022ರಿಂದ ತಂಡದಿಂದ ಹೊರಗಿದ್ದಾರೆ. ಆದರೆ 2027ರ ಏಕದಿನ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದರು. ಆದರೆ, 2026ರ ಟಿ20 ವಿಶ್ವಕಪ್‌ನಲ್ಲಿ ಯುವ ಭಾರತ ತಂಡದ ಗೆಲುವು ಅವರ ಆಸೆಗೆ ತಣ್ಣೀರೆರಚಿದೆ. ಹೀಗಾಗಿ, ಅವರು ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಐಪಿಎಲ್‌ನಲ್ಲಿ ಭುವನೇಶ್ವರ್ ಆಟ ಮುಂದುವರಿಸಲಿದ್ದಾರೆ.
66
ಸೂರ್ಯಕುಮಾರ್ ಯಾದವ್...
Image Credit : Getty

ಸೂರ್ಯಕುಮಾರ್ ಯಾದವ್...

ಎಂ.ಎಸ್. ಧೋನಿ ಮತ್ತು ರೋಹಿತ್ ಶರ್ಮಾ ನಂತರ ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ತಂದುಕೊಟ್ಟ ಕೀರ್ತಿ ಸೂರ್ಯಕುಮಾರ್ ಯಾದವ್ ಅವರದ್ದು. ಆದರೆ, ಇದೇ ಅವರ ಕೊನೆಯ ವಿಶ್ವಕಪ್ ಆಗಿರಬಹುದು ಮತ್ತು ಅವರು ಶೀಘ್ರದಲ್ಲೇ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಸೂರ್ಯ ಈ ನಿವೃತ್ತಿ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಆದರೂ, ಭವಿಷ್ಯದ ದೃಷ್ಟಿಯಿಂದ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಸೂರ್ಯಕುಮಾರ್ ಅವರನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅವರು ಆಡಲು ಬಯಸಿದರೂ, ಆಡಿಸದೇ ಇರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮೇಲೆ ಒತ್ತಡ ಹೇರಿ ನಿವೃತ್ತಿ ಘೋಷಿಸುವಂತೆ ಮಾಡಲಾಗಿತ್ತು. ಅದೇ ಪರಿಸ್ಥಿತಿ ಸೂರ್ಯಕುಮಾರ್ ಯಾದವ್‌ಗೂ ಬರಬಹುದು ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಟೀಮ್ ಇಂಡಿಯಾ
ಕ್ರಿಕೆಟ್
ವಿಶ್ವಕಪ್
Latest Videos
Recommended Stories
Recommended image1
ವೆಡ್ಡಿಂಗ್ ಆ್ಯನಿವರ್ಸರಿಗೆ ಎರಡು ಪದದಲ್ಲಿ ಶುಭಕೋರಿದ ಜಸ್ಪ್ರೀತ್ ಬುಮ್ರಾ! ಕಿಡ್ನಿಗೆ ಟಚ್ ಆಯ್ತು ಎಂದ ಸಂಜನಾ!
Recommended image2
ಅವನಿಂದ ಅವಳಾದ ಅನನ್ಯಾ ಬಂಗಾರ್‌ಗೆ ಯಶಸ್ವಿ ಲಿಂಗ ದೃಢೀಕರಣ ಸರ್ಜರಿ, ಏನಿದು ವ್ಯಜಿನೋಪ್ಲಾಸ್ಟಿ?
Recommended image3
ಅತಿಹೆಚ್ಚು ಐಪಿಎಲ್ ಮ್ಯಾಚ್ ಆಡಿಯೂ ಒಂದೂ ಕಪ್ ಗೆಲ್ಲದ ಟಾಪ್ 6 ದಿಗ್ಗಜ ಕ್ರಿಕೆಟಿಗರಿವರು!
Related Stories
Recommended image1
ಟಿ20 ವಿಶ್ವಕಪ್ ವೇಳೆ ಕ್ಯಾಪ್ಟನ್ ಮೇಲೆ ಸಿಟ್ಟಾಗಿದ್ದ ಸ್ಟಾರ್ ಕ್ರಿಕೆಟಿಗ! ಕೊನೆಗೂ ತಪ್ಪಾಯ್ತು ಅಂತ ಕ್ಷಮೆ ಕೇಳಿದ ಸೂರ್ಯಕುಮಾರ್ ಯಾದವ್!
Recommended image2
ಟಿ20 ವಿಶ್ವಕಪ್‌ ಗೆದ್ದ ಪ್ಲೇಯರ್‌ಗೆ ಸಿಗದ ವಿಮಾನ ಟಿಕೆಟ್‌, ರೈಲಿನಲ್ಲಿ ರಹಸ್ಯವಾಗಿ ಪ್ರಯಾಣ ಬೆಳೆಸಿದ ಸ್ಟಾರ್‌ ಆಟಗಾರ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved