Asianet Suvarna News Asianet Suvarna News

ನಾಟಕದ ಬಳಿಕ ವರಸೆ ಬದಲಿಸಿದ ಪಾಕಿಸ್ತಾನ; ಏಕದಿನ ವಿಶ್ವಕಪ್‌ಗೆ ಭಾರತಕ್ಕೆ ತಂಡ ಕಳುಹಿಸಲು ನಿರ್ಧಾರ!

ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ನಿರಾಕರಿಸಿದ ಕಾರಣ ಏಕದಿನ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ, ಭಾರತ ಪ್ರವಾಸ ಮಾಡುದಿಲ್ಲ ಎಂದು ಪಟ್ಟು ಹಿಡಿದಿತ್ತು. ಪಾಕ್ ಮಾತಿಗೆ ಯಾರೂ ಸೊಪ್ಪು ಹಾಕದ ಕಾರಣ ಇದೀಗ ವರಸೆ ಬದಲಿಸಿದೆ. ಭಾರತಕ್ಕೆ ತಂಡ ಕಳುಹಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.

Pakistan decide to send Team to India for ICC Odi World cup 2023 ckm
Author
First Published Aug 6, 2023, 8:21 PM IST

ನವದೆಹಲಿ(ಆ.06) ಭಾರತ ವಿರುದ್ದ ಒತ್ತಡ ಹೇರುವ ತಂತ್ರ ಮಾಡಿದ ಪಾಕಿಸ್ತಾನ ಕೊನೆಗೂ ತನ್ನ ನಾಟಕ ಬಂದ್ ಮಾಡಿದೆ. ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಪಾಕಿಸ್ತಾನ ಕಳುಹಿಸಿದ ಕಾರಣ, ಇದೇ ತಂತ್ರವನ್ನು ಏಕದಿನ ವಿಶ್ವಕಪ್ ಟೂರ್ನಿ ವೇಳೆ ಪಾಕಿಸ್ತಾನ ಪ್ರಯೋಗಿಸುವ ಲೆಕ್ಕಾಚಾರದಲ್ಲಿತ್ತು. ಆದರೆ ಪಾಕಿಸ್ತಾನದ ಮಾತಿಗೆ ಬಿಸಿಸಿಐ, ಐಸಿಸಿ ಸೊಪ್ಪು ಹಾಕಿಲ್ಲ. ಕೊನೆಗೆ ಪಾಕಿಸ್ತಾನ ತನ್ನ ವರಸೆ ಬದಲಿಸಿದೆ. ಭಾರತ ಆತಿಥ್ಯ ವಹಿಸುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಗೆ ತಂಡ ಕಳುಹಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ತಂಡವನ್ನು ಕಳುಹಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ವಿದೇಶಾಂಗ ಸಚಿವಾಲಯ ಈ ಕುರಿತು ಸ್ಪಷ್ಟನೆ ನೀಡಿದೆ. ಅಕ್ಟೋಬರ್ 5 ರಿಂದ ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಳ್ಳುತ್ತಿದೆ. ಅಕ್ಟೋಬರ್ 15ರಂದು ಅಹಮ್ಮದಾಬಾದ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮಖಿಯಾಗುತ್ತಿದೆ.

2019ರ ವಿಶ್ವಕಪ್ ಬಳಿಕ ಅತಿಹೆಚ್ಚು ರನ್ ಬಾರಿಸಿದ ಟಾಪ್ 5 ಬ್ಯಾಟರ್‌ಗಳಿವರು..! ಈ ಪಟ್ಟಿಯಲ್ಲಿ ಏಕೈಕ ಭಾರತೀಯನಿಗೆ ಸ್ಥಾನ

ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯವಹಿಸಿದೆ. ಆದರೆ ಪಾಕಿಸ್ತಾನ ಪ್ರವಾಸಕ್ಕೆ ಭಾರತ ನಿರಾಕರಿಸಿತ್ತು. ಭಾರತ ತಂಡ ಪಾಕ್ ಪ್ರವಾಸ ಮಾಡದಿದ್ದರೆ, ಏಕದಿನ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ, ಭಾರತ ಪ್ರವಾಸ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿತ್ತು. ಆದರೆ ಬಿಸಿಸಿಐ ತನ್ನ ನಿರ್ಧಾರ ಪ್ರಕಟಿಸಿತ್ತು. ಪಾಕಿಸ್ತಾನ ಪ್ರವಾಸಕ್ಕೆ ಭಾರತ ತಂಡ ಕಳುಹಿಸಲು ಸಾಧ್ಯವಿಲ್ಲ ಎಂದಿತ್ತು. ಇಷ್ಟೇ ಅಲ್ಲ ಟೀಂ ಇಂಡಿಯಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸುವಲ್ಲಿ ಭಾರತ ಯಶಸ್ವಿಯಾಗಿತ್ತು.

ಬಿಸಿಸಿಐ ಈ ನಿರ್ಧಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಪಾಕಿಸ್ತಾನ ಸರ್ಕಾರವನ್ನು ಕೆರಳಿಸಿತ್ತು. ಹೀಗಾಗಿ ಭಾರತ ಆತಿಥ್ಯ ವಹಿಸುವ ಏಕದಿನ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಕಳುಹಿಸಲು ಸಾಧ್ಯವಿಲ್ಲ ಎಂದು ಪಿಸಿಬಿ ಪಟ್ಟು ಹಿಡಿದಿತ್ತು. ಆದರೆ ಭಾರತ ಪಾಕಿಸ್ತಾನ ವಾದಕ್ಕೆ ಸೊಪ್ಪು ಹಾಕಿಲ್ಲ. ಕೊನೆಗೆ ಪಾಕಿಸ್ತಾನ ತಂಡ ಪಟ್ಟು ಸಡಿಲಿಸಿದೆ. ಭಾರತ ಪ್ರವಾಸಕ್ಕೆ ಪಾಕಿಸ್ತಾನ ತಂಡ ಕಳುಹಿಸಲು ಶೆಹಬಾಜ್ ಷರೀಫ್ ಸರ್ಕಾರ ಒಪ್ಪಿಗೆ ಸೂಚಿಸಿದೆ.

Ind vs WI ಟೀಂ ಇಂಡಿಯಾ ಸೋಲಿಸಿದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ.! ಮಾಡಿದ ಎಡವಟ್ಟು ಒಂದೆರಡಲ್ಲ..!

ಏಷ್ಯಾಕಪ್ ಟೂರ್ನಿ  ಆ.30ರಿಂದ ಸೆ.17ರ ವರೆಗೆ ನಡೆಯಲಿದೆ. ಪಾಕಿಸ್ತಾನದ ಮುಲ್ತಾನ್‌, ಲಾಹೋರ್‌ ಒಟ್ಟು 4 ಪಂದ್ಯ, ಶ್ರೀಲಂಕಾದ ಕ್ಯಾಂಡಿ ಹಾಗೂ ಕೊಲಂಬೊ ಫೈನಲ್‌ ಸೇರಿ 9 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಟೂರ್ನಿಯ ಉದ್ಘಾಟನಾ ಪಂದ್ಯ ಮುಲ್ತಾನ್‌ನಲ್ಲಿ ನಡೆಯಲಿದ್ದು, ಪಾಕ್‌-ನೇಪಾಳ ಮುಖಾಮುಖಿಯಾಗಲಿವೆ. ಒಂದು ವೇಳೆ ಭಾರತ-ಪಾಕ್‌ ಸೂಪರ್‌-4 ಹಂತಕ್ಕೇರಿದರೆ ಉಭಯ ತಂಡಗಳ ಪಂದ್ಯ ಸೆ.10ರಂದು ಕೊಲಂಬೊದಲ್ಲಿ ನಡೆಯಲಿದೆ.

6 ತಂಡಗಳನ್ನು ತಲಾ 3 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ, ನೇಪಾಳ ‘ಎ’ ಗುಂಪಿನಲ್ಲಿದ್ದು, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ‘ಬಿ’ ಗುಂಪಿನಲ್ಲಿವೆ. ಗುಂಪು ಹಂತದಲ್ಲಿ ಪ್ರತಿ ತಂಡ ಇನ್ನುಳಿದ 2 ತಂಡದ ವಿರುದ್ಧ ಒಮ್ಮೆ ಸೆಣಸಲಿದೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆವ ತಂಡಗಳು ಸೂಪರ್‌-4 ಹಂತಕ್ಕೇರಲಿವೆ. ಸೂಪರ್‌-4ನಲ್ಲಿ ಪ್ರತಿ ತಂಡ ಇನ್ನುಳಿದ 3 ತಂಡದ ವಿರುದ್ಧ ಒಮ್ಮೆ ಆಡಲಿದ್ದು, ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಫೈನಲ್‌ಗೇರಲಿವೆ.

Follow Us:
Download App:
  • android
  • ios