Ind vs WI ಟೀಂ ಇಂಡಿಯಾ ಸೋಲಿಸಿದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ.! ಮಾಡಿದ ಎಡವಟ್ಟು ಒಂದೆರಡಲ್ಲ..!
ವೆಸ್ಟ್ ಇಂಡೀಸ್ ಎದುರು ಮೊದಲ ಟಿ20 ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ
ಟೀಂ ಇಂಡಿಯಾ ಸೋಲಿಗೆ ಪಾಂಡ್ಯ ತೆಗೆದುಕೊಂಡ ಕೆಲವು ನಿರ್ಧಾರಗಳೇ ಕಾರಣ
ಬಿಲ್ಡಪ್ ರಾಜನ ಎಡವಟ್ಟೇ ಭಾರತದ ಸೋಲಿಗೆ ಕಾರಣ..!
ಬೆಂಗಳೂರು(ಆ.05) ಈ ನಗರಕ್ಕೆ ಏನಾಗಿದೆ ಅನ್ನೋ ಜಾಹೀರಾತಿನ ಹಾಗೆ ಟೀಂ ಇಂಡಿಯಾಗೆ ಏನಾಗಿದೆ ಅನ್ನೋ ಪ್ರಶ್ನೆ ಕೇಳೋ ಪರಿಸ್ಥಿತಿ ಬಂದೋದಗಿದೆ. 2024ರ ಟಿ20 ವಿಶ್ವಕಪ್‌ಗೆ ಸೀನಿಯರ್ಸ್ ಕೈಬಿಟ್ಟು ಜೂನಿಯರ್ಸ್ ತಂಡವನ್ನ ಕಟ್ಟುತ್ತಿದೆ ಬಿಸಿಸಿಐ. ಅದಕ್ಕಾಗಿ ಎಲ್ಲಾ ಹಿರಿಯ ಆಟಗಾರರಿಗೆ ವಿಶ್ರಾಂತಿ ನೆಪದಲ್ಲಿ ಡ್ರಾಪ್ ಮಾಡಿ ಯುವ ಆಟಗಾರರಿಗೆ ಆಡಲು ಅವಕಾಶ ಕೊಟ್ಟಿದೆ. ಆ ಯಂಗ್ ಇಂಡಿಯಾಗೆ ಎಡಬಿಡಂಗಿ ಹಾರ್ದಿಕ್ ಪಾಂಡ್ಯ ನಾಯಕ.
ಪಾಂಡ್ಯ ಗುಜರಾತ್ ಟೈಟನ್ಸ್ಗೆ ಐಪಿಎಲ್ ಗೆಲ್ಲಿಸಿಕೊಟ್ಟಿರಬಹುದು. ಸದ್ಯ ಭಾರತ ಟಿ20 ನಾಯಕನಿರಬಹುದು. ಆದ್ರೆ ಈತ ಬಿಲ್ಡಪ್ ರಾಜ ಅನ್ನೋದು ಕ್ರಿಕೆಟ್ ಜಗತ್ತಿಗೆ ಗೊತ್ತಿದೆ. ತನಗೆ ತಾನೇ ಬಿಲ್ಡ್ ಅಪ್ ತೆಗೆದುಕೊಳ್ಳೋ ಪಾಂಡ್ಯ, ಫೀಲ್ಡಿಂಗ್ನಲ್ಲಿ ಮಾಡೋ ಮಿಸ್ಟೇಕ್ ಒಂದಾ ಎರಡಾ. ಐಪಿಎಲ್ ಫೈನಲ್ ಪಂದ್ಯದ ಫೈನಲ್ ಓವರ್ ಅನ್ನ ಉತ್ತಮವಾಗಿ ಮಾಡುತ್ತಿದ್ದ ಮೋಹಿತ್ ಶರ್ಮಾಗೆ ಕಿವಿ ಚುಚ್ಚಿ ಆತನಿಂದ ಕಳಪೆ ಬೌಲಿಂಗ್ ಮಾಡಿಸಿ ಮ್ಯಾಚ್ ಸೋಲಿಸಿದ್ರು.ಈಗ ನೋಡಿದ್ರೆ ವೆಸ್ಟ್ ಇಂಡೀಸ್ನಲ್ಲಿ ತನ್ನ ಎಡವಟ್ಟಿನಿಂದ ಫಸ್ಟ್ ಟಿ20 ಮ್ಯಾಚ್ ಸೋಲಿಸಿದ್ದಾರೆ.
2024ರ ಟಿ20 ವರ್ಲ್ಡ್ಕಪ್ ಟೂರ್ನಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ನಡೆಯಲಿದೆ. ಹೀಗಾಗಿ ಸದ್ಯ ನಡೆಯುತ್ತಿರುವ ಟಿ20 ಸಿರೀಸ್ ಟೀಂ ಇಂಡಿಯಾ ಪಾಲಿಗೆ ವೆರಿವೆರಿ ಇಂಪಾಡೆಂಟ್. ಆದ್ರೆ ಈ ಸಿರೀಸ್ ಅನ್ನ ಸೀರಿಯಸ್ಸಾಗಿ ತೆಗೆದುಕೊಳ್ಳದ ಬಿಲ್ಡಪ್ ರಾಜ ಹಾರ್ದಿಕ್ ಪಾಂಡ್ಯ, ಈ ಸರಣಿಯಲ್ಲೂ ಎಡವಟ್ಟು ಮಾಡ್ತಿದ್ದಾರೆ. ಮೊದಲ ಪಂದ್ಯದ ಸೋಲಿಗೆ ಪಾಂಡ್ಯ ಮಾಡಿದ ಮಿಸ್ಟೇಕೇ ಕಾರಣ. ಒಂದು ಮಿಸ್ಟೇಕ್ ಅಲ್ಲ. ಮೂರು ಬಿಗ್ ಮಿಸ್ಟೇಕ್ ಮಾಡಿ ಮುಗ್ಗರಿಸಿದೆ ಟೀಂ ಇಂಡಿಯಾ.
ಬ್ಯಾಟಿಂಗ್ ಆರ್ಡರ್ ಚೇಂಜ್ ಮಾಡಿ ಪಂದ್ಯ ಸೋತ ಪಾಂಡ್ಯ..!
ಹೌದು, ಮೊದಲ ಟಿ20 ಪಂದ್ಯದ ಸೋಲಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಮಾಡಿದ ಬದಲಾವಣೆಗಳೇ ಕಾರಣ. ಒಬ್ಬರ ಬ್ಯಾಟಿಂಗ್ ಆರ್ಡರ್ ಚೇಂಜ್ ಮಾಡಿದ್ರೆ ನೋ ಪ್ರಾಬ್ಲಂ. ಆದ್ರೆ ಮೂವರ ಬ್ಯಾಟಿಂಗ್ ಕ್ರಮಾಂಕ ಬದಲಿಸಿದ್ರೆ ಇಡೀ ತಂಡ ಬ್ಯಾಲೆನ್ಸ್ ತಪ್ಪುತ್ತೆ. ಹಾರ್ದಿಕ್ ಪಾಂಡ್ಯ ಮಾಡಿದ ಬಿಗ್ ಮಿಸ್ಟೇಕ್ ಅದೇ. 150 ರನ್ಗಳ ಸಾಧಾರಣ ಮೊತ್ತ ಚೇಸ್ ಮಾಡಿ ಗೆಲ್ಲಲಾಗಲಿಲ್ಲ ಅಂತ ನಾವು ನೀವು ಬೈಯ್ದುಕೊಳ್ತಿವಿ. ಆದ್ರೆ ಫಿಕ್ಸ್ ಇರುವ ಬ್ಯಾಟಿಂಗ್ ಸ್ಲಾಟ್ಗಳನ್ನ ಚೇಂಜ್ ಮಾಡಿದ್ರೆ ಆ ಬ್ಯಾಟರ್ಗಳು ಸಹ ಏನ್ ಮಾಡ್ತಾರೆ ಹೇಳಿ.
ಸಂಜು-ಸೂರ್ಯ-ತಿಲಕ್ ಬ್ಯಾಟಿಂಗ್ ಆರ್ಡರ್ ಚೇಂಜ್..!
ಸಂಜು ಸ್ಯಾಮ್ಸನ್ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ನಂಬರ್ 3 ಸ್ಲಾಟ್ನಲ್ಲಿ ಬ್ಯಾಟಿಂಗ್ ಮಾಡಿ, ರನ್ ಹೊಳೆಯನ್ನೇ ಹರಿಸಿದ್ದಾರೆ. ಅವರನ್ನ ಅದೇ ಕ್ರಮಾಂಕದಲ್ಲಿ ಆಡಿಸಬೇಕಿತ್ತು. ಅದನ್ನ ಬಿಟ್ಟು ಮೊನ್ನೆ ಅವರನ್ನ 6ನೇ ಕ್ರಮಾಂಕದಲ್ಲಿ ಆಡಿಸಲಾಯ್ತು. ಅವರಿಂದ ಮ್ಯಾಚ್ ಫಿನಿಶ್ ಮಾಡಲಾಗಲಿಲ್ಲ. 12 ರನ್ ಗಳಿಸಿ ಔಟಾದ್ರು. ಇನ್ನು ಕೊಹ್ಲಿ-ರೋಹಿತ್ ಕ್ಯಾಪ್ಟನ್ ಆಗಿದ್ದಾಗ ಸೂರ್ಯಕುಮಾರ್ ಯಾದವ್ 4ನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಅದೇ ಸ್ಲಾಟ್ನಲ್ಲಿ ಅವರು ಎರಡು ಶತಕ ಹೊಡೆದಿದ್ದಾರೆ. ಐಪಿಎಲ್ನಲ್ಲೂ ಮುಂಬೈ ಇಂಡಿಯನ್ಸ್ನಲ್ಲಿ ಸೂರ್ಯಗೆ ನಂ. 4 ಸ್ಲಾಟ್ ಫಿಕ್ಸ್. ಆದ್ರೆ ಮೊನ್ನೆ ವಿಂಡೀಸ್ ವಿರುದ್ಧ ಸೂರ್ಯಕುಮಾರ್ ಆಡಿದ್ದು 3ನೇ ಕ್ರಮಾಂಕದಲ್ಲಿ. 21 ರನ್ ಗಳಿಸಿ ಸೂರ್ಯ ಮುಳುಗಿತು.
ವಿಶ್ವಕಪ್‌ಗೆ ಕ್ಷಣಗಣನೆ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದ ಸ್ಟಾರ್ ಕ್ರಿಕೆಟಿಗ..!
ಇನ್ನು ತಿಲಕ್ ವರ್ಮಾ, ಮೊನ್ನೆ ಟಿ20 ಕ್ರಿಕೆಟ್‌ಗೆ ಡೆಬ್ಯು ಮಾಡಿದ್ರು. ಅವರು ಟೀಂ ಇಂಡಿಯಾಗೆ ಆಯ್ಕೆಯಾಗಿದ್ದೇ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಮ್ಯಾಚ್ ಫಿನಿಶರ್ ಅನ್ನೋ ಕಾರಣಕ್ಕೆ. ಮುಂಬೈ ಪರ 5ನೇ ಸ್ಲಾಟ್ನಲ್ಲಿ ಆಡೋ ತಿಲಕ್, ಹಲವಾರು ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಆದ್ರೆ ಮೊನ್ನೆ ಅವರು ಆಡಿದ್ದು ನಂಬರ್ 4 ಸ್ಲಾಟ್. ಆದ್ರೂ 39 ರನ್ ಗಳಿಸಿ ಔಟಾದ್ರು.
ಸಂಜು ನಂ. 3, ಸೂರ್ಯ ನಂ.4, ತಿಲಕ್ ನಂ.5 ಸ್ಲಾಟ್ನಲ್ಲಿ ಆಡಿದ್ದರೆ ಮೊದಲ ಪಂದ್ಯವನ್ನ ಭಾರತ ಸೋಲುತ್ತಿರಲಿಲ್ಲ. ಆದ್ರೆ ಈ ಮೂವರು ಸ್ಲಾಟ್ ಅನ್ನ ಅದಲು ಬದಲು ಮಾಡಿದ ನಾಯಕ ಪಾಂಡ್ಯ, ಸೋಲಿಗೆ ಕಾರಣರಾದ್ರು. ಉಳಿದ ಪಂದ್ಯಗಳಲ್ಲಾದ್ರೂ ಪಾಂಡ್ಯ ತನ್ನ ತಪ್ಪು ತಿದ್ದಿಕೊಂಡ್ರೆ ಭಾರತಕ್ಕೆ ಗೆಲುವು ದಕ್ಕಲಿಲ್ಲ. ಇದೇ ಮಿಸ್ಟೇಕ್ ಕಂಟ್ಯುನ್ಯೂ ಮಾಡಿದ್ರೆ ಮತ್ತದೆ ಸೋಲು ಕಟ್ಟಿಟ್ಟ ಬುತ್ತಿಯಾಗಲಿದೆ.