ಎಂಎಸ್ ಧೋನಿ ಸದ್ಯ ಅಮೆರಿಕ ಪ್ರವಾಸದಲ್ಲಿದ್ದಾರೆ. ಆಪ್ತರು, ಗೆಳೆಯರ ಭೇಟಿ ಮಾಡಿ ಮಸ್ತಿ ಮಾಡುತ್ತಿದ್ದಾರೆ. ಅಮೆರಿಕದ ಸ್ನೇಹಿತರ ಜೊತೆ ತೆಗೆದ ಕೆಲ ಫೋಟೋಗಳು ಹರಿದಾಡುತ್ತಿದೆ. ಆದರೆ ವೈರಲ್ ಆಗಿದ್ದು ಧೋನಿ ನಿಂತಿರುವ ಫೋಟೋದ ಕಾರಿನ ನಂಬರ್ ಪ್ಲೇಟ್.

ನ್ಯೂಯಾರ್ಕ್ (ಆ.29) ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿಶ್ರಾಂತಿ ಜೀವನದಲ್ಲಿದ್ದಾರೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಗಾಯದ ಕಾರಣದಿಂದ ದೂರ ಉಳಿದಿದ್ದ ಧೋನಿ ಮುಂದಿನ ಐಪಿಎಲ್ ಆಡೋದು ಅನುಮಾನವಾಗಿದೆ. ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯುವ ಧೋನಿ ಸದ್ಯ ಅಮೆರಿಕ ಪ್ರವಾಸದಲ್ಲಿದ್ದಾರೆ. ಸ್ನೇಹಿತರ ಜೊತೆ, ಆಪ್ತರ ಜೊತೆ ಮಸ್ತಿ ಮಾಡುತ್ತಿದ್ದಾರೆ. ಅಮೆರಿಕ ಕೆಲವೆಡೆ ಆಪ್ತರ ಜೊತೆ ತೆಗೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಶೇಷ ಅಂದರೆ ಈ ಬಾರಿ ಧೋನಿ ಫೋಟೋಗಿಂತ ಕಾರಿನ ನಂಬರ್ ಪ್ಲೇಟ್ ಭಾರಿ ಸದ್ದು ಮಾಡುತ್ತಿದೆ.

ಧೋನಿ ತಮ್ಮ ಆಪ್ತ ಗೆಳೆಯರ ಜೊತೆ ಅಮೆರಿಕದಲ್ಲಿ ಸುತ್ತಾಡುತ್ತಿದ್ದಾರೆ. ಪ್ರಮುಖವಾಗಿ ದುಬೈ ಮೂಲಕ ಉದ್ಯಮಿ, ಧೋನಿ ಸ್ನೇಹಿತ ಹಿತೇಶ್ ಸಂಘ್ವಿ ಸೇರಿದಂತೆ ಪ್ರಮುಖರು ಮಾಹಿತ ಜೊತೆ ಸುತ್ತಾಡುತ್ತಿದ್ದಾರೆ. ಸುತ್ತಾಟದ ನಡುವೆ ಕೆಲ ಫೋಟೋಗಳನ್ನು ತೆಗೆದು ಆಪ್ತರು ಹಂಚಿಕೊಂಡಿದ್ದಾರೆ. ಈ ಪೈಕಿ ಹಿತೇಶ್ ಸಂಘ್ವಿ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ಯಾವದೇ ಕ್ಯಾಪ್ಶನ್ ಬೇಕಿಲ್ಲ, ಕೇವಲ ನಂಬರ್ ಪ್ಲೇಟ್ ಎಲ್ಲವನ್ನು ಹೇಳುತ್ತದೆ ಎಂದು ಬರೆದುಕೊಂಡಿದ್ದಾರೆ.

ಮಾಹಿ 007 ನಂಬರ್ ಪ್ಲೇಟ್ ವೈರಲ್

ಧೋನಿ ತನ್ನ ಆಪ್ತರ ಜೊತೆ ನಿಂತು ತೆಗೆದಿರುವ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಾರಿನ ಹಿಂಭಾಗದಲ್ಲಿ ನಿಂತು ಫೋಟೋ ತೆಗೆಯಲಾಗಿದೆ. ಕಾರಿನ ನಂಬರ್ ಪ್ಲೇಟ್ MAHI 007 ನಂಬರ್ ಇದೆ. ಧೋನಿ ಶಾರ್ಟ್ ನೇಮ್ ಮಾಹಿ, ಇನ್ನು 07 ಧೋನಿ ಜರ್ಸಿ ನಂಬರ್ ಹಾಗೂ ಧೋನಿ ಹುಟ್ಟು ಹಬ್ಬ ದಿನಾಂಕ. 007 ಜೇಮ್ಸ್ ಬಾಂಡ್ ಸಿನಿಮಾ ಟೈಟಲ್ ಕೂಡ ಹೌದು. ಕ್ರಿಕೆಟ್ ಜಗತ್ತಿನ ಜೇಮ್ಸ್ ಬಾಂಡ್ ಧೋನಿ ಕ್ರೇಜ್ ಅಮೆರಿಕದಲ್ಲೂ ಸದ್ದು ಮಾಡುತ್ತಿದೆ. ಇದೇ ಕಾರಣದಿಂದ ಈ ನಂಬರ್ ಪ್ಲೇಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ.

ಟೀಂ ಇಂಡಿಯಾ ಹಾಗೂ ಐಪಿಎಲ್ ಟೂರ್ನಿಗಳಲ್ಲಿ 7 ಜರ್ಸಿ ಮೂಲಕ ಧೋನಿ ಕಾಣಿಸಿಕೊಂಡಿದ್ದಾರೆ. ಇದೀಗ ಧೋನಿ ನಂಬರ್ ಅಮೆರಿಕದ ಕಾರಿನಲ್ಲಿ ಅದೂ ಕೂಡ ಮಾಹಿ ಸೀರಿಸ್ ಮೂಲಕ ಕಾಣಿಸಿಕೊಂಡಿದೆ. ಧೋನಿ ಆಪ್ತರ ಕಾರು ಇದೀಗ ಎಲ್ಲರ ಗಮನಸೆಳೆದಿದೆ.

ಧೋನಿ ಹಾಗೂ ಸಿಎಸ್‌ಕೆ ಜಟಾಪಟಿ

ಎಂಎಸ್ ಧೋನಿ ಐಪಿಎಲ್ ಟೂರ್ನಿಯಿಂದ 2023ರಲ್ಲೇ ವಿದಾಯ ಹೇಳಲು ಬಯಸಿದ್ದರು. ಆದರೆ ತಂಡದಲ್ಲಿ ಪಾಲು ಕೊಡುವುದಾಗಿ ಹೇಳಿ ಉಳಿಸಿಕೊಂಡಿದ್ದರು ಅನ್ನೋ ವರದಿಗಳು ಹರಿದಾಡುತ್ತಿದೆ. ಇದೀಗ ಧೋನಿ ಸಿಎಸ್‌ಕೆ ತಂಡದಲ್ಲಿ ಶೇಕಡಾ 25ರಷ್ಟು ಪಾಲು ಕೇಳಿದ್ದಾರೆ ಎಂದು ವರದಿಯಾಗಿದೆ. ಇದೇ ವಿಚಾರವಾಗಿ ಸಿಎಸ್‌ಕೆ ಹಾಗೂ ಧೋನಿ ನಡುವೆ ಮನಸ್ತಾಪವಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ.