RCB ನಾಯಕ ವಿರಾಟ್ ಕೊಹ್ಲಿ ಇಂದು ಕೆಕೆಆರ್ ಮಣಿಸುವ ವಿಶ್ವಾಸದಲ್ಲಿದ್ದಾರೆ. ರೋಚಕ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಇತ್ತ ಪಂಜಾಬ್ ಹೊಸ ಮುಖ್ಯಮಂತ್ರಿ ರೈತರಿಗೆ ಭರ್ಜರಿ ಕೂಡುಗೆ ನೀಡಿದ್ದಾರೆ. ಚಿನ್ನದ ದರ ದಾಖಲೆಯ ಕುಸಿತ ಕಂಡಿದೆ. ಸಿದ್ದರಾಮಯ್ಯರನ್ನು ಶೀಘ್ರವೇ ಬಿಜೆಪಿ​ಗೆ ಕರೆ ತರುವೆ, ಸೈಮಾ ಪ್ರಶಸ್ತಿ ವಿವರ ಸೇರಿದಂತೆ ಸೆಪ್ಟೆಂಬರ್ 20ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ರೈತರ ವಿದ್ಯುತ್ , ನೀರಿನ ಬಿಲ್ ಮನ್ನಾ: ಸಿಎಂ ಆದ ಬೆನ್ನಲ್ಲೇ ಚನ್ನಿ ಮಹತ್ವದ ಘೋಷಣೆ!

 ಚರಣಜಿತ್ ಸಿಂಗ್ ಚನ್ನಿ ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ರಾಜ್ಯಪಾಲ ಬಿಎಲ್ ಪುರೋಹಿತ್ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದ್ದಾರೆ.

ತಾಲಿಬಾನ್ ಪ್ರೀತಿ: ಪಾಕ್ ಮರ್ಯಾದೆಯನ್ನೇ ಹರಾಜು ಹಾಕಿದ ಇಮ್ರಾನ್ ಖಾನ್

ಅಫ್ಘಾನಿಸ್ತಾನಲ್ಲಿ ತಾಲಿಬಾನ್ ಯಾವಾಗ ಎಂಟ್ರಿ ಆಯ್ತೋ, ಅದೇ ತಲಿಬಾನ್ ಜೊತೆ ಪಾಕ್ ಕೂಡಾ ಪರೋಕ್ಷವಾಗಿ ಎಂಟ್ರಿಯಾಗಿತ್ತು. ತಮಗೂ ತಾಲಿಬಾನ್‌ಗೂ ಸಂಬಂಧ ಇಲ್ಲ ಎನ್ನುತ್ತಿದ್ದ ಪಾಕ್, ಜಗತ್ತಿನ ಮುಂದೆ ಬೆತ್ತಲಾಗಿದೆ. ಅದರಲ್ಲೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಾಲಿಬಾನ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.

IPL 2021: ಆರ್‌ಸಿಬಿ ಕುರಿತಂತೆ ಮುತ್ತಿನಂಥ ಮಾತನಾಡಿದ ಕಿಂಗ್‌ ಕೊಹ್ಲಿ..!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಮುಕ್ತಾಯದ ಬಳಿಕ ಭಾರತ ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ಕಳೆದ ಮೂರು ದಿನಗಳ ಹಿಂದಷ್ಟೇ ಘೋಷಿಸಿದ್ದರು.ಇದಾಗಿ ಕೆಲವೇ ದಿನಗಳ ಅಂತರದಲ್ಲಿ ಆರ್‌ಸಿಬಿ ತಂಡದ ನಾಯಕತ್ವದಿಂದಲೂ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ

ಚಿನ್ನದ ಹುಡುಗ ನೀರಜ್‌ ಚೋಪ್ರಾ ಹೊಸ ಜಾಹೀರಾತು: ವೈರಲ್‌!

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದು, ಅದರ ವಿಡಿಯೋ ವೈರಲ್‌ ಆಗಿದೆ.

ಸೈಮಾ 2021: ಯಾರು ಯಾರಿಗೆ ಯಾವ ಪ್ರಶಸ್ತಿ ಬಂದಿದೆ ನೋಡಿ....

ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ಅವಾರ್ಡ್‌ ಕಾರ್ಯಕ್ರಮ ಸೈಮಾ 2020 ಹೈದರಾಬಾದ್‌ನಲ್ಲಿ ನಡೆದಿದೆ. ಕನ್ನಡ ಚಿತ್ರರಂಗದಲ್ಲಿ ಯಾರಿಗೆ ಯಾವ ಪ್ರಶಸ್ತಿ ಬಂದಿದೆ ಇಲ್ಲಿ ನೋಡಿ 

ಚಿನ್ನದ ದರದಲ್ಲಿ ದಾಖಲೆಯ ಕುಸಿತ, ಖರೀದಿದಾರರಿಗೆ ಸಂತಸ

ಕೊರೋನಾ ಹಾವಳಿ ಕೊಂಚ ಕಡಿಮೆಯಾಗಿದೆ. ಅತ್ತ ಗಣೇಶ ಚತುರ್ಥಿ, ಗೌರಿ ಹಬ್ಬದ ಸಂಭ್ರಮವೂ ಮುಗಿದೆ. ಹೀಗಿರುವಾಗ ಇತ್ತ ಚಿನ್ನದ ದರವೂ ಇಳಿಕೆ ಕಂಡಿದೆ.

ವಾಹನ ಮಾಲೀಕರೇ ಎಚ್ಚರ, ಎಮಿಶನ್ ಟೆಸ್ಟ್ ಸರ್ಟಿಫಿಕೇಟ್ ಇಲ್ಲದಿದ್ರೆ 10 ಸಾವಿರ ರೂ ದಂಡ!

ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಭಾರತದಲ್ಲಿ ಈಗಾಗಲೇ ಬಿಎಸ್ 6 ಎಂಜಿನ್ ವಾಹನ ಮಾರಾಟಕ್ಕೆ ಮಾತ್ರ ಅವಕಾಶ ಮಾಡಿಕೊಟ್ಟಿದೆ. ಇನ್ನು ರಸ್ತೆಯಲ್ಲಿ ವಾಹನ ಓಡಿಸಲು ಹಲವು ದಾಖಲೆಗಳು ಕಡ್ಡಾಯವಾಗಿ ಇರಲಬೇಕು. ಇದರಲ್ಲಿ ಎಮಿಶನ್ ಟೆಸ್ಟ್( ಹೊಗೆ ತಪಾಸಣೆ) ಸರ್ಟಿಫಿಕೇಟ್ ಮುಖ್ಯವಾಗಿದೆ. ಇದೀಗ ಈ ಸರ್ಟಿಫಿಕೇಟ್ ಇಲ್ಲದಿದ್ದರೆ, ಅಥವಾ ಅವದಿ ಮುಗಿದಿದ್ದದರೆ ಬರೋಬ್ಬರಿ 10,000 ರೂಪಾಯಿ ದಂಡ ವಿಧಿಸುವ ಹೊಸ ನಿಯಮಕ್ಕೆ ದೆಹಲಿ ಸರ್ಕಾರ ಅಂಕಿತ ಹಾಕಿದೆ

ಸಿದ್ದರಾಮಯ್ಯರನ್ನು ಶೀಘ್ರವೇ ಬಿಜೆಪಿ​ಗೆ ಕರೆ ತರುವೆ: ಅಚ್ಚರಿ ಮೂಡಿಸಿದ ಶಾಸಕನ ಹೇಳಿಕೆ

ಸಿದ್ದರಾಮಯ್ಯರನ್ನು ಶೀಘ್ರವೇ ಬಿಜೆಪಿ​ಗೆ ಕರೆ ತರುವೆ. ಅದರಲ್ಲಿ ನಾನು ಯಶಸ್ವಿ ಆಗುವೆ ಎಂದು ಸುರಪುರ ಶಾಸಕ ರಾಜೂಗೌಡ ಹೇಳಿಕೆ ನೀಡಿದ್ದು, ರಾಜ್ಯ ರಾಜಕೀಯದಲ್ಲಿ ಅಚ್ಚರಿ ಮೂಡಿಸಿದೆ.

ಮಹಿಳಾ IAS ಅಧಿಕಾರಿಗೆ ಕಿರುಕುಳ, ಕ್ಯಾಪ್ಟನ್ ವಿರುದ್ಧ ಬಂಡಾಯ; ಪಂಜಾಬ್ ನೂತನ ಸಿಎಂ ಇತಿಹಾಸ!

ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ಹಾಗೂ ನೂತನ ಸಿಎಂ ಚರಣಜಿತ್ ಸಿಂಗ್ ಚನ್ನಿ ಪ್ರಮಾಣ ವಚನದ ಬೆನ್ನಲ್ಲೇ ಪಂಜಾಬ್ ಕಾಂಗ್ರೆಸ್ ಹಗ್ಗಜಗ್ಗಾಟ, ವೈಮನಸ್ಸು, ಮುನಿಸು, ಗುದ್ದಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಆದರೆ ಇಲ್ಲಿಗೆ ಎಲ್ಲವೂ ಅಂತ್ಯವಾಯಿತು ಎಂದರ್ಥವಲ್ಲ. ಪಂಜಾಬ್ ರಾಜಕೀಯ ಇನ್ನು ರಂಗುಪಡೆದುಕೊಳ್ಳಲಿದೆ. ಇದರ ಮೊದಲ ಅಂಗವಾಗಿ ಪಂಜಾಬ್ ನೂತನ ಸಿಎಂ ಚರಣಜಿತ್ ಸಿಂಗ್ ಚನ್ನಿ ಮೇಲಿನ ಹಳೆ ಆರೋಪಗಳು ಮತ್ತೆ ಮುನ್ನಲೆಗೆ ಬಂದಿದೆ.

ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬಾಂಬ್ ಸಿಡಿಸಿದ ಯಡಿಯೂರಪ್ಪ

ವಿಧಾನಸಭೆ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಬಾಕಿ. ಆದ್ರೆ, ರಾಜಕೀಯ ಪಕ್ಷಗಳ ಆಗಲೇ ಚುನಾವಣೆಗೆ ತಯಾರಿ ನಡೆಸಿವೆ.