ವಾಹನ ಮಾಲೀಕರೇ ಎಚ್ಚರ, ಎಮಿಶನ್ ಟೆಸ್ಟ್ ಸರ್ಟಿಫಿಕೇಟ್ ಇಲ್ಲದಿದ್ರೆ 10 ಸಾವಿರ ರೂ ದಂಡ!
- ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದಿಂದ ಕಟ್ಟು ನಿಟ್ಟಿನ ಕ್ರಮ
- ಎಮಿಶನ್ ಟೆಸ್ಟ್ ಸರ್ಟಿಫಿಕೇಟ್ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ
- ದಂಡದ ಜೊತೆಗೆ 6 ತಿಂಗಳು ಜೈಲು, ಲೈಸೆನ್ಸ್ ರದ್ದು
ನವದೆಹಲಿ(ಸೆ.20): ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಭಾರತದಲ್ಲಿ ಈಗಾಗಲೇ ಬಿಎಸ್ 6 ಎಂಜಿನ್ ವಾಹನ ಮಾರಾಟಕ್ಕೆ ಮಾತ್ರ ಅವಕಾಶ ಮಾಡಿಕೊಟ್ಟಿದೆ. ಇನ್ನು ರಸ್ತೆಯಲ್ಲಿ ವಾಹನ ಓಡಿಸಲು ಹಲವು ದಾಖಲೆಗಳು ಕಡ್ಡಾಯವಾಗಿ ಇರಲಬೇಕು. ಇದರಲ್ಲಿ ಎಮಿಶನ್ ಟೆಸ್ಟ್( ಹೊಗೆ ತಪಾಸಣೆ) ಸರ್ಟಿಫಿಕೇಟ್ ಮುಖ್ಯವಾಗಿದೆ. ಇದೀಗ ಈ ಸರ್ಟಿಫಿಕೇಟ್ ಇಲ್ಲದಿದ್ದರೆ, ಅಥವಾ ಅವದಿ ಮುಗಿದಿದ್ದದರೆ ಬರೋಬ್ಬರಿ 10,000 ರೂಪಾಯಿ ದಂಡ ವಿಧಿಸುವ ಹೊಸ ನಿಯಮಕ್ಕೆ ದೆಹಲಿ ಸರ್ಕಾರ ಅಂಕಿತ ಹಾಕಿದೆ.
ಏಷ್ಯಾನೆಟ್ ಸುವರ್ಣನ್ಯೂಸ್ ಇಂಪಾಕ್ಟ್; ವಾಹನ ಟೋಯಿಂಗ್ ಹೊಸ ನಿಯಮ ಪ್ರಕಟಿಸಿದ ಗೃಹ ಸಚಿವದೆಹಲಿಯಲ್ಲಿ ವಾಯು ಮಾಲಿನ್ಯ ಅತೀ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ನಿಯಂತ್ರಣಕ್ಕೆ ಸರ್ಕಾರ ಎಮಿಶನ್ ಸರ್ಟಿಫಿಕೇಟ್ ನಿಯಮ ಬಿಗಿಗೊಳಿಸಿದೆ. ಸಾಮಾನ್ಯವಾಗಿ ಎಮಿಶನ್ ಟೆಸ್ಟ್ ಸರ್ಟಿಫಿಕೇಟ್ ಇಲ್ಲದಿದ್ದರೆ 1,000, 2000 ಹಾಗೂ ಘನವಾಹನಗಳಿಗೆ ಗರಿಷ್ಠ 5,000 ರೂಪಾಯಿ ವರೆಗೆ ದಂಡ ಹಾಕಲಾಗುತ್ತದೆ. ಆದರೆ ದೆಹಲಿಯಲ್ಲಿ ಕಾರು, ಬೈಕ್ ವಾಹನಗಳಿಗೆ 10,000 ರೂಪಾಯಿ ದಂಡ ಹಾಕಲು ಸರ್ಕಾರ ಮುಂದಾಗಿದೆ.
15 ಕೆಜಿ ತೂಕದ ಸೈಕಲ್ ಒಯ್ಯಲು 7.5 ಟನ್ ಟ್ರಕ್ ಬಳಸಿ ಟ್ರೋಲ್ ಆದ ಪೊಲೀಸ್!
ಎಮಿಶನ್ ನಿಯಮ ಉಲ್ಲಂಘಿಸಿದರೆ 6 ತಿಂಗಳು ಜೈಲು ಅಥವಾ 10,000 ರೂಪಾಯಿ ದಂಡ, ಪದೇ ಪದೆ ತಪ್ಪು ಮಾಡಿದರೆ 3 ತಿಂಗಳು ಲೈಸೆನ್ಸ್ ರದ್ದು ಮಾಡಲು ನಿರ್ಧರಿಸಲಾಗಿದೆ. ಸರ್ಕಾರ ಹೊಸ ನಿಯಮ ಜಾರಿಗೊಳಿಸುತ್ತಿದ್ದಂತೆ ದೆಹಲಿಯಲ್ಲಿ ಎಮಿಶನ್ ಟೆಸ್ಟ್ ಕೇಂದ್ರಗಳಲ್ಲಿ ಭಾರಿ ದಟ್ಟಣೆ ಎದುರಾಗಿದೆ.
ಈ ಎರಡು ಫೀಚರ್ಸ್ ನಿಮ್ಮ ಬೈಕ್, ಸ್ಕೂಟರ್‌ನಲ್ಲಿ ಇಲ್ಲದಿದ್ದರೆ ಬೀಳುತ್ತೆ ದಂಡ!
ದ್ವಿಚಕ್ರ ಹಾಗೂ ಮೂರು ಚಕ್ರದ ಪೆಟ್ರೋಲ್ ಹಾಗೂ ಸಿಎನ್‌ಜಿ ವಾಹನಗಳ ಎಮಿಶನ್ ಟೆಸ್ಟ್ ಬೆಲೆ 60 ರೂಪಾಯಿ, ಕಾರುಗಳಿಗೆ 80 ರೂಪಾಯಿ. ಇನ್ನು ಡೀಸೆಲ್ ವಾಹನಗಳಿಗೆ 100 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಕಡಿಮೆ ಕರ್ಚಿನಲ್ಲಿ ಆಗುವ ಎಮಿಶನ್ ಟೆಸ್ಟ್ ನಿರ್ಲಕ್ಷಿಸಿದರೆ ದುಬಾರಿ ಕಂಡ ಕಟ್ಟುವ ಅಪಾಯ ಎದುರಾಗಬಹುದು.