Asianet Suvarna News Asianet Suvarna News

ಸಿದ್ದರಾಮಯ್ಯರನ್ನು ಶೀಘ್ರವೇ ಬಿಜೆಪಿ​ಗೆ ಕರೆ ತರುವೆ: ಅಚ್ಚರಿ ಮೂಡಿಸಿದ ಶಾಸಕನ ಹೇಳಿಕೆ

* ಸಿದ್ದರಾಮಯ್ಯರನ್ನು ಶೀಘ್ರವೇ ಬಿಜೆಪಿ​ಗೆ ಕರೆ ತರುವೆ ಎಂದ ಬಿಜೆಪಿ ಶಾಸಕ
* ರಾಜ್ಯ ರಾಜಕೀಯದಲ್ಲಿ ಅಚ್ಚರಿ ಮೂಡಿಸಿದ ಶಾಸಕನ ಹೇಳಿಕೆ
* ವಿಧಾನಸೌಧದಲ್ಲಿ ಇಂದು (ಸೆ.20) ರಾಜೂಗೌಡ ಅಚ್ಚರಿ ಮಾತು

trying to bring Siddaramaiah to BJP Says MLA Raju Gowda rbj
Author
Bengaluru, First Published Sep 20, 2021, 3:29 PM IST
  • Facebook
  • Twitter
  • Whatsapp

ಬೆಂಗಳೂರು, (ಸೆ.20): ಸಿದ್ದರಾಮಯ್ಯರನ್ನು ಶೀಘ್ರವೇ ಬಿಜೆಪಿ​ಗೆ ಕರೆ ತರುವೆ. ಅದರಲ್ಲಿ ನಾನು ಯಶಸ್ವಿ ಆಗುವೆ ಎಂದು ಸುರಪುರ ಶಾಸಕ ರಾಜೂಗೌಡ ಹೇಳಿಕೆ ನೀಡಿದ್ದು, ರಾಜ್ಯ ರಾಜಕೀಯದಲ್ಲಿ ಅಚ್ಚರಿ ಮೂಡಿಸಿದೆ.

ವಿಧಾನಸೌಧದಲ್ಲಿ ಇಂದು (ಸೆ.20) ಮಾತನಾಡಿದ ರಾಜೂಗೌಡ, ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆತರಲು ಪ್ರಯತ್ನಿಸುತ್ತಿದ್ದೇನೆ. ಅವರನ್ನು ನಮ್ಮ ಪಕ್ಷಕ್ಕೆ ಕರದುಕೊಂಡು ಬರುವಲ್ಲಿ ಯಶಸ್ವಿ ಆಗುತ್ತೇನೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಎಸ್‌ವೈ

ಕಾಂಗ್ರೆಸ್​​ನವರೇ ನಮ್ಮ ಪಕ್ಷಕ್ಕೆ ಬರುತ್ತೇವೆ ಎನ್ನುತ್ತಿದ್ದಾರೆ. ಇಲ್ಲಿ ಇದ್ದೋರಿಗೇ ಅವಕಾಶ ಸಿಗುತ್ತಿಲ್ಲ, ಅದಕ್ಕೆ ನಾವೇ ಬೇಡ ಅಂತಿದ್ದೇವೆ ಎಂದರು.

ಕಾಂಗ್ರೆಸ್​ಗೆ ಬರುವಂತೆ ನನ್ನನ್ನು ಡಿಕೆಶಿ ಭೇಟಿ ಮಾಡಿಲ್ಲ. ನಾನು ಮೂಲ ಬಿಜೆಪಿಗ. ನಾನು ಕಾಂಗ್ರೆಸ್​ಗೆ ಹೋಗಲ್ಲ. ಆದರೂ ಪದೇಪದೆ ನನ್ನ ಹೆಸರನ್ನು ಯಾಕೆ ತರುತ್ತಿದ್ದಾರೋ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕ ಎಂ.ಪಿ. ಕುಮಾರಸ್ವಾಮಿ, ನಾನೂ ಕಾಂಗ್ರೆಸ್​​ಗೆ ಹೋಗಲ್ಲ, ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ನಮ್ಮ ಪಕ್ಷದಲ್ಲಿ ನಮ್ಮವರೇ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.

Follow Us:
Download App:
  • android
  • ios