Asianet Suvarna News Asianet Suvarna News

ಮಹಿಳಾ IAS ಅಧಿಕಾರಿಗೆ ಕಿರುಕುಳ, ಕ್ಯಾಪ್ಟನ್ ವಿರುದ್ಧ ಬಂಡಾಯ; ಪಂಜಾಬ್ ನೂತನ ಸಿಎಂ ಇತಿಹಾಸ!

  • ಪಂಜಾಬ್ ನೂತನ ಸಿಎಂ ಚರಣಜಿತ್ ಸಿಂಗ್ ಚನ್ನಿ ಪ್ರಮಾಣ ವಚನ ಸ್ವೀಕಾರ
  • ಚನ್ನಿ ರಾಜಕೀಯ ಇತಿಹಾಸದಲ್ಲಿ ಆರೋಪಗಳೇ ಹೆಚ್ಚುಕ್ಲೀನ್ ಇಮೇಜ್ ಇಲ್ಲ
  • ಕ್ಯಾಪ್ಟನ್ ವಿರುದ್ಧ ಮೊದಲು ಬಂಡಾಯ ಬಾವುಟ ಹಾರಿಸಿದ ನಾಯಕ
  • ಚರಣಜಿತ್ ಸಿಂಗ್ ಚನ್ನಿ ರಾಜಕೀಯ ಇತಿಹಾಸದ ಏಳು ಬೀಳು
MeToo allegations to rebell leader Punjab New CM Charanjit Singh Channi history of controversy ckm
Author
Bengaluru, First Published Sep 20, 2021, 4:45 PM IST
  • Facebook
  • Twitter
  • Whatsapp

ಪಂಜಾಬ್(ಸೆ.20): ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ಹಾಗೂ ನೂತನ ಸಿಎಂ ಚರಣಜಿತ್ ಸಿಂಗ್ ಚನ್ನಿ ಪ್ರಮಾಣ ವಚನದ ಬೆನ್ನಲ್ಲೇ ಪಂಜಾಬ್ ಕಾಂಗ್ರೆಸ್ ಹಗ್ಗಜಗ್ಗಾಟ, ವೈಮನಸ್ಸು, ಮುನಿಸು, ಗುದ್ದಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಆದರೆ ಇಲ್ಲಿಗೆ ಎಲ್ಲವೂ ಅಂತ್ಯವಾಯಿತು ಎಂದರ್ಥವಲ್ಲ. ಪಂಜಾಬ್ ರಾಜಕೀಯ ಇನ್ನು ರಂಗುಪಡೆದುಕೊಳ್ಳಲಿದೆ. ಇದರ ಮೊದಲ ಅಂಗವಾಗಿ ಪಂಜಾಬ್ ನೂತನ ಸಿಎಂ ಚರಣಜಿತ್ ಸಿಂಗ್ ಚನ್ನಿ ಮೇಲಿನ ಹಳೆ ಆರೋಪಗಳು ಮತ್ತೆ ಮುನ್ನಲೆಗೆ ಬಂದಿದೆ.

ಚನ್ನಿ ಪಂಜಾಬ್ ಸಿಎಂ ಆಗ್ತಿರೋದು ದಲಿತರಿಗೆ ಅವಮಾನ ಎಂದ ಬಿಜೆಪಿ!

ಕಾಂಗ್ರೆಸ್ ಹೈಕಮಾಂಡ್ ಪಂಜಾಬ್ ಸಿಎಂ ಆಗಿ ಚರಣಜಿತ್ ಸಿಂಗ್ ಚನ್ನಿ ಆಯ್ಕೆ ಮಾಡಿ ಹಲವರಿಗೆ ಅಚ್ಚರಿ ನೀಡಿದ್ದು ನಿಜ. ಆದರೆ ಅಚ್ಚರಿ ನೀಡಲು ಹೋಗಿ ಇಕ್ಕಟ್ಟಿಗೆ ಸಿಲುಕಿದ್ದು ಪಂಜಾಬ್ ಹಾಗೂ ಕಾಂಗ್ರೆಸ್ ಹೈಕಮಾಂಡ್. ಕಾರಣ ನೂತನ ಸಿಎಂ ಚರಣಜಿತ್ ಸಿಂಗ್ ಚನ್ನಿ ಮೇಲಿ 2018ರಲ್ಲಿ MeToo ಆರೋಪ ಭಾರಿ ಸದ್ದು ಮಾಡಿದೆ. ಈ ಆರೋಪಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ.

3 ವರ್ಷದ ಹಿಂದಿನ ಮೀಟೂ ಕೇಸ್ ಇದೀಗ ಮತ್ತೆ ಸದ್ದು ಮಾಡುತ್ತಿದೆ 2018ರಲ್ಲಿ ಚರಣಜಿತ್ ಸಿಂಗ್, ಮಹಿಳಾ ಐಎಎಸ್ ಅಧಿಕಾರಿಗೆ ಅಸಭ್ಯ ಸಂದೇಶ ಕಳುಹಿಸಿದ್ದಾರೆ. ಚರಣಜಿತ್ ಸಿಂಗ್ ಕಿರುಕುಳ ಅತಿಯಾಗುತ್ತಿದ್ದಂತೆ ಮಹಿಳಾ ಅಧಿಕಾರಿ ಸರ್ಕಾರಕ್ಕೆ ದೂರು ನೀಡಿದ್ದರು. 

ರೈತರ ವಿದ್ಯುತ್ , ನೀರಿನ ಬಿಲ್ ಮನ್ನಾ: ಸಿಎಂ ಆದ ಬೆನ್ನಲ್ಲೇ ಚನ್ನಿ ಮಹತ್ವದ ಘೋಷಣೆ!

ಪಂಜಾಬ್ ಮಹಿಳಾ ಆಯೋಗ ಮುಖ್ಯಸ್ಥೆ ಮನೀಶಾ ಗುಲಾಟಿ ಈ ಕುರಿತು ಸರ್ಕಾರದಿಂದ ವರದಿ ಕೇಳಿದ್ದರು. ವರದಿ ನೀಡಲು  ಹಿಂದೇಟು ಹಾಕಿದ ಪಂಜಾಬ್ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. 

2018ರಲ್ಲಿ ಮೀಟೂ ಕೇಸ್ ಭಾರಿ ಸಂಚಲನ ಸೃಷ್ಟಿಸಿತ್ತು. ಹಲವು ಪ್ರಮುಖರ ಅಸಲಿ ಮುಖವಾಡ ಕಳಚಿಬಿದ್ದಿತ್ತು. ಇದರಲ್ಲಿ ಚರಣಜಿತ್ ಸಿಂಗ್ ಚನ್ನಿ ಕೂಡ ಸೇರಿದ್ದಾರೆ. ಪ್ರಕರಣ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸರ್ಕಾರಕ್ಕೆ ಅತೀ ದೊಡ್ಡ ಹಿನ್ನಡೆ ತಂದಿತ್ತು. ಹೀಗಾಗಿ ತಕ್ಷಣ ಮಧ್ಯಪ್ರವೇಶಿಸಿದ ಅಂದಿನ ಸಿಎಂ ಅಮರಿಂದರ್ ಸಿಂಗ್, ಪರಿಸ್ಥಿತಿ ತಿಳಿಗೊಳಿಸಿದರು. 

5 ತಿಂಗಳ ವಿದ್ಯ​ಮಾ​ನ, ಅಮ​ರೀಂದರ್‌ ಬೇಸ​ರ: ರಾಜೀನಾಮೆಗೂ ಮುನ್ನ ಸೋನಿಯಾಗೆ ಪತ್ರ!

ಚರಣಜಿತ್ ಸಿಂಗ್, ಮಹಿಳಾ ಅಧಿಕಾರಿ ಬಳಿ ಕ್ಷಮೆ ಕೇಳಿದ್ದಾರೆ ಎಂದು ಅಮರಿಂದರ್ ಸಿಂಗ್ ಮೀಟೂ ಕೇಸ್‌ಗೆ ಅಂತ್ಯಹಾಡಿದ್ದರು. ಈ ಪ್ರಕರಣ ತಣ್ಣಗಾದ ಬಳಿಕ ಚರಣಜಿತ್ ಸಿಂಗ್ ಬಂಡಾಯ ನಾಯಕರಾಗಿ ಕಾಣಿಸಿಕೊಂಡರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧವೇ ಬಂಡಾಯವೆದ್ದ ನಾಯಕರಲ್ಲಿ ಮೊದಲಿಗರಾಗಿದ್ದಾರೆ.

ಆರೋಪ, ಕಿರುಕುಳ, ಬಂಡಾಯದ ಕಾರಣದಿಂದ ಪಂಜಾಬ್ ನೂತನ ಸಿಎಂ ರೇಸ್‍ನಲ್ಲಿ ಚರಣಜಿತ್ ಸಿಂಗ್ ಹೆಸರು ಕೇಳಿಬಂದಿರಲಿಲ್ಲ. ಚರಣಜಿತ್ ಸಿಂಗ್ ಹೆಸರು ಪ್ರಸ್ತಾಪವಾದೊಡನೆ ಪಂಜಾಬ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ತಕ್ಷಣ ಒಕೆ ಎಂದಿದ್ದಾರೆ. ಕಾರಣ ತನ್ನ ಬದ್ಧವೈರಿ ಅಮರಿಂದರ್ ವಿರುದ್ಧ ಬಂಡಾಯವೆದ್ದ ನಾಯಕ, ತನ್ನ ಆಪ್ತರ ಪಟ್ಟಿಯಲ್ಲಿರುವ ನಾಯಕ ಅನ್ನೋ ಕಾರಣಕ್ಕೆ ಸಿಧು ಗ್ರೀನ್ ಸಿಗ್ನಲ್ ನೀಡಿದ್ದಾರೆ. 

ಚರಣಜಿತ್ ಸಿಂಗ್ ಮೇಲಿನ ಆರೋಪಗಳು ಇದೀಗ ಸದ್ದು ಮಾಡುತ್ತಿದೆ. ಈ ಆರೋಪಗಳು ಮತ್ತೆ ಬಲಗೊಂಡರೆ ಸಿಎಂ ಸ್ಥಾನಕ್ಕೆ ಕುತ್ತುಬರವು ಸಾಧ್ಯತೆ ಇದೆ.

Follow Us:
Download App:
  • android
  • ios