Asianet Suvarna News Asianet Suvarna News

ನಾನೊಬ್ಬ ಹೆಮ್ಮೆಯ ಮುಸ್ಲಿಂ, ನಾನು ಎಲ್ಲಿ ಬೇಕಿದ್ರೂ ಸಜ್ದಾ ಮಾಡ್ತೇನೆ, ಯಾರೂ ತಡೆಯೋರು?: ಶಮಿ ಖಡಕ್ ಮಾತು

ಈ ವಿಶ್ವಕಪ್ ಟೂರ್ನಿಯ ವೇಳೆಯಲ್ಲೇ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಮಿಂಚಿನ ದಾಳಿ ನಡೆಸಿದ್ದರು. ಈ ಪಂದ್ಯದಲ್ಲಿನ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಲಂಕಾ ಎದುರು ಶಮಿ 5 ವಿಕೆಟ್ ಕಬಳಿಸುತ್ತಿದ್ದಂತೆಯೇ ಮೈದಾನದಲ್ಲಿಯೇ ಮಂಡಿಯೂರಿದ್ದರು.

I am a proud Indian, a proud Muslim Mohammed Shami slams trolls over Sajda controversy in World Cup 2023 kvn
Author
First Published Dec 14, 2023, 12:26 PM IST

ಮುಂಬೈ(ಡಿ.14): ಇತ್ತೀಚೆಗಷ್ಟೇ ಜರುಗಿದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಮಾರಕ ದಾಳಿ ನಡೆಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿದ ಬೌಲರ್ ಆಗಿ ಹೊರಹೊಮ್ಮಿದ್ದರು. ಆರಂಭದ 4 ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ಶಮಿ, ಇದಾದ ಬಳಿಕ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿದ ಶಮಿ 5.26ರ ಸರಾಸರಿಯಲ್ಲಿ 24 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

ಇನ್ನು ಈ ವಿಶ್ವಕಪ್ ಟೂರ್ನಿಯ ವೇಳೆಯಲ್ಲೇ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಮಿಂಚಿನ ದಾಳಿ ನಡೆಸಿದ್ದರು. ಈ ಪಂದ್ಯದಲ್ಲಿನ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಲಂಕಾ ಎದುರು ಶಮಿ 5 ವಿಕೆಟ್ ಕಬಳಿಸುತ್ತಿದ್ದಂತೆಯೇ ಮೈದಾನದಲ್ಲಿಯೇ ಮಂಡಿಯೂರಿದ್ದರು. ಆಗ ಪಾಕಿಸ್ತಾನದ ಮಂದಿ ಸೋಷಿಯಲ್ ಮೀಡಿಯಾದಲ್ಲಿ ಶಮಿ ಭಾರತೀಯ ಮುಸ್ಲಿಂ ಆಗಿದ್ದರಿಂದ ಸಜ್ದಾ ಮಾಡಲು ಬಯಸಿದ್ದರು. ಆದರೆ ಅವರಿಗೆ ಭಾರತದಲ್ಲಿ ಸಜ್ದಾ ಮಾಡಿದರೆ ವಿವಾದವಾಗಬಹುದು ಎನ್ನುವ ಹೆದರಿಕೆಯಿಂದ ಹಾಗೆ ಮಾಡಲಿಲ್ಲ ಎಂದು ಆರೋಪಿಸಿ ಟ್ವೀಟ್ ಮಾಡಿದ್ದರು. ಇದು ಉಭಯ ದೇಶಗಳ ಸೋಷಿಯಲ್ ಮೀಡಿಯಾ ಮಂದಿಗಳ ನಡುವೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

Ind vs SA 3rd T20I: ಭಾರತಕ್ಕೆ ಸರಣಿ ಉಳಿಸಿಕೊಳ್ಳುವ ಗುರಿ

ಈ ವಿಚಾರದ ಕುರಿತಂತೆ India Today ಮಾಧ್ಯಮ ಸಂವಾದದಲ್ಲಿ ಅನುಭವಿ ಶಮಿ ಮನಬಿಚ್ಚಿ ಮಾತನಾಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. "ಸಜ್ದಾ ಮಾಡಲೇಬೇಕು ಎಂದು ಅನಿಸಿದರೆ ಯಾರು ಅದನ್ನು ತಡೆಯುತ್ತಾರೆ. ನಾನು ಸಜ್ದಾ ಮಾಡಲೇಬೇಕು ಅಂದ್ರೆ ಖಂಡಿತ ಮಾಡುತ್ತೇನೆ. ನಾನು ನಿಮ್ಮ ಧರ್ಮದ ಆಚರಣೆಯನ್ನು ತಡೆಯುವುದಿಲ್ಲ, ಅದೇ ರೀತಿ ನನ್ನ ಧರ್ಮದ ಆಚರಣೆಯನ್ನು ನೀವು ತಡೆಯುವುದಿಲ್ಲ.  ನಾನೊಬ್ಬ ಮುಸ್ಲಿಂ, ನಾನು ಮುಸ್ಲಿಂ ಎನ್ನುವುದಕ್ಕೆ ಹೆಮ್ಮೆಯಿದೆ. ಅದೇ ರೀತಿ ನಾನು ಭಾರತೀಯ ಕೂಡಾ. ಹಾಗಾಗಿ ನಾನು ಭಾರತೀಯ ಎನ್ನುವುದನ್ನು ಹೆಮ್ಮೆಯಿಂದ ಹೇಳುತ್ತೇನೆ. ಇದರಲ್ಲಿ ಏನೂ ಸಮಸ್ಯೆಯಿದೆ ಹೇಳಿ. ಒಂದು ವೇಳೆ ಭಾರತದಲ್ಲಿ ನನಗನಿಸಿದ್ದನ್ನು ಮಾಡಲು ಸಮಸ್ಯೆಯಿದೆ ಎಂದರೆ ನಾನಿಲ್ಲಿ  ಇರಲೇಬಾರದಿತ್ತು. ನಾನು ಸಜ್ದಾ ಮಾಡಲು ಬೇರೆಯವರ ಅನುಮತಿ ಪಡೆದುಕೊಳ್ಳಬೇಕು ಎಂದರೆ ನಾನಿಲ್ಲಿ ಯಾಕೆ ಇರುತ್ತಿದ್ದೆ. ನಾನು ಕೂಡಾ ಈ ವಿಚಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಆದ ಚರ್ಚೆಗಳನ್ನು ಗಮನಿಸಿದ್ದೇನೆ. ನಾನು ಸಜ್ದಾ ಮಾಡಲು ಬಯಸಿದ್ದೆ, ಆದರೆ ಮಾಡಲಿಲ್ಲ ಎಂದು ಹಲವರು ಟೀಕಿಸಿದ್ದಾರೆ. ನಾನು 5 ವಿಕೆಟ್ ಕಬಳಿಸಿದ್ದಾಗ ಈ ಹಿಂದೆ ಎಲ್ಲಾದರೂ ನಾನು ಸಜ್ದಾ ಮಾಡಿದ್ದೇನಾ? ಈ ಹಿಂದೆ ಕೂಡಾ ನಾನು 5 ವಿಕೆಟ್ ಪಡೆದಿದ್ದೆ ಅಲ್ಲವೇ?." 

"ಒಂದು ವೇಳೆ ನನಗೆ ಸಜ್ದಾ ಮಾಡಬೇಕು ಎಂದು ಅನಿಸಿದರೆ, ಎಲ್ಲಿ ಸಜ್ದಾ ಮಾಡಬೇಕು ಎನ್ನುವುದು ನನಗೆ ಗೊತ್ತಿದೆ. ನಾನು ಭಾರತದಲ್ಲಿ ಎಲ್ಲಿ ಬೇಕಿದ್ದರೂ ಸಜ್ದಾ ಮಾಡುತ್ತೇನೆ. ಯಾರಾದರೂ ಪ್ರಶ್ನೆ ಮಾಡಿ ನೋಡಿ. ಈ ಜನರಿಗೆಲ್ಲಾ ನಮ್ಮನ್ನು ಎಲ್ಲಿ ಡಿಸ್ಬರ್ಬ್ ಮಾಡಬೇಕು ಎನ್ನುವುದರ ಕಡೆಗೆ ಗಮನವಿರುತ್ತದೆ. ಅವರೆಲ್ಲರೂ ನಿಮ್ಮ ಜತೆಗೂ ಇಲ್ಲ, ನನ್ನ ಜತೆಗೂ ಇಲ್ಲ. ಇವರು ಯಾರನ್ನೂ ಪ್ರೀತಿಸುವುದಿಲ್ಲ. ಇವರು ಬೇರೆಯವರ ಕಾಲೆಳೆಯುವುದರಲ್ಲೇ ಖುಷಿ ಪಡುತ್ತಾರೆ" ಎಂದಿದ್ದಾರೆ.

IPL Auction ಹಿಂದೆ ಮಾಡಿದ ತಪ್ಪುಗಳಿಂದ ಈ ಬಾರಿ ಪಾಠ ಕಲಿಯುತ್ತಾ RCB..? ಪೂಜಾರಗೆ 3.22 ಕೋಟಿ ನೀಡಿದ್ದ ಬೆಂಗಳೂರು

'ನಾನು 5ನೇ ವಿಕೆಟ್ ಪಡೆದಾಗ ಅದು ಬಹುಶಃ ನಾನು ಎಸೆದ 6ನೇ ಓವರ್ ಆಗಿತ್ತು. ನಾನು ಆಗ ಶಕ್ತಿಮೀರಿ ಬೌಲಿಂಗ್ ಮಾಡುತ್ತಿದ್ದೆ. ಮೊದಲೇ ನಾನು 3 ವಿಕೆಟ್ ಕಬಳಿಸಿದ್ದೆ. ಇನ್ನುಳಿದ 3-4 ಓವರ್‌ನಲ್ಲಿ ನಾನು ಹೇಗಾದರೂ ಮಾಡಿ 5 ವಿಕೆಟ್ ಪೂರೈಸಲೇಬೇಕು ಎಂದು ಮನಸ್ಸಿನಲ್ಲಿ ಓಡುತ್ತಿತ್ತು. ಹಾಗಾಗಿ ನಾನು 100 ಅಲ್ಲ 200% ಪ್ರಯತ್ನ ಪಟ್ಟು ಬೌಲಿಂಗ್ ಮಾಡುತ್ತಿದ್ದೆ. ನಾನು ಆಗ ದಣಿದು ಹೋಗಿದ್ದೆ, ಮತ್ತೊಂದು ಕಡೆ ವಿಕೆಟ್ ಬೀಳುತ್ತಿರಲಿಲ್ಲ. 5ನೇ ವಿಕೆಟ್ ಉರುಳಿಸಿದಾಗ ಸುಸ್ತಾಗಿ ಮಂಡಿಯೂರಿದೆಯಷ್ಟೇ. ಜನರು ಅದಕ್ಕೆ ಬೇರೆಯದ್ದೇ ಕಥೆ ಕಟ್ಟಿದರು. ಜಗತ್ತಿನ ಕೆಲವು ಜನರಿಗೆ ಬೇರೆ ಕೆಲಸವೇ ಇಲ್ಲವೇನೋ ಎಂದೆನಿಸುತ್ತದೆ" 

Follow Us:
Download App:
  • android
  • ios