ಪತ್ನಿ – ಮಗನನ್ನು ಮಿಸ್ ಮಾಡಿಕೊಳ್ತಿದ್ದಾರಾ ಹಾರ್ದಿಕ್? ನತಾಶಾ ಪೋಸ್ಟಿಗೆ ಕ್ಯೂಟ್ ಕಮೆಂಟ್
ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಬೇರೆಯಾಗಿದ್ದಾರೆ. ಈಗಾಗಲೇ ಈ ಬಗ್ಗೆ ಹಾರ್ದಿಕ್ ಸ್ಪಷ್ಟನೆ ನೀಡಿದ್ದಾರೆಯಾದ್ರೂ ಮಗನ ಜೊತೆ ಭಾರತ ಬಿಟ್ಟಿರುವ ಪತ್ನಿಯನ್ನು ಪಾಂಡ್ಯ ಮಿಸ್ ಮಾಡಿಕೊಳ್ತಿರುವಂತಿದೆ. ಪತ್ನಿ ಫೋಟೋಕ್ಕೆ ಕಮೆಂಟ್ ಮಾಡಿ ಈಗ ಸುದ್ದಿಯಾಗಿದ್ದಾರೆ.
ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವೃತ್ತಿ ಹಾಗೂ ವೈಯಕ್ತಿಕ ಎರಡೂ ಜೀವನದಲ್ಲಿ ನೋವು ತುಂಬಿದೆ. ಟಿ20 ವಿಶ್ವಕಪ್ ನಲ್ಲಿ ಹೀರೋ ಆದ್ರೂ ನಾಯಕತ್ವ ಸಿಗಲಿಲ್ಲ ಎನ್ನುವ ಬೇಸರ ಒಂದು ಕಡೆಯಾದ್ರೆ ಇನ್ನೊಂದು ಕಡೆ, ಇಂಥ ಸಮಯದಲ್ಲೂ ಅವರ ಕುಟುಂಬ ಅವರ ಜೊತೆಗಿಲ್ಲ. ಪತ್ನಿ ನತಾಶಾ ಸ್ಟಾಂಕೋವಿಕ್ ಹಾಗೂ ಪಾಂಡ್ಯಾ ವಿಚ್ಛೇದನ ಪಡೆಯೋದು ಅಧಿಕೃತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬೇರೆಯಾಗ್ತಿರುವ ಪೋಸ್ಟ್ ಹಾಕಿದ್ದ ಪಾಂಡ್ಯ, ಈಗ ಪತ್ನಿಯ ಹೊಸ ಪೋಸ್ಟ್ ಗೆ ಕಮೆಂಟ್ ಮಾಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಸದ್ಯ ನತಾಶಾ ಸ್ಟಾಂಕೋವಿಕ್ (Natasha Stankovit) ಭಾರತ ತೊರೆದು ತಮ್ಮ ದೇಶವಾದ ಸೆರ್ಬಿಯಾಕ್ಕೆ ತೆರಳಿದ್ದಾರೆ. ಅಲ್ಲಿ ಮಗ ಅಗಸ್ತ್ಯನ ಜೊತೆ ಸಮಯ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ (Instagram) ನಲ್ಲಿ ನತಾಶಾ ಒಂದಿಷ್ಟು ಫೋಟೋಗಳನ್ನು ಹಂಚಿಕೊಳ್ತಿದ್ದಾರೆ. ನತಾಶಾ ಅವರ ಹೊಸ ಪೋಸ್ಟ್ ಗೆ ಪಾಂಡ್ಯಾ (Pandya) ರಿಯಾಕ್ಷನ್ ನೀಡಿದ್ದಾರೆ.
'ನಾನೇ ನಿಮ್ಮ ದೊಡ್ಡ...' ಯುಜುವೇಂದ್ರ ಚಹಲ್ ಬರ್ತ್‌ಡೇ ಸ್ಪಷೆಲ್ ವಿಶ್ ಮಾಡಿದ ಪತ್ನಿ ಧನಶ್ರೀ ವರ್ಮಾ..!
ನತಾಶಾ ತನ್ನ ಮಗ ಅಗಸ್ತ್ಯನೊಂದಿಗೆ ಸಣ್ಣ ಟ್ರಿಪ್ ಹೋಗಿ ಬಂದಿದ್ದಾರೆ. ಅಲ್ಲಿನ ವಿಜ್ಞಾನ ಮತ್ತು ವನ್ಯಜೀವಿ ಮ್ಯೂಸಿಯಂನಲ್ಲಿ ನತಾಶಾ ಮತ್ತು ಅಗಸ್ತ್ಯ ಓಡಾಡುತ್ತಿದ್ದು, ಡೈನೋಸಾರ್ ಡಮ್ಮಿ ಮಧ್ಯೆ ಅಗಸ್ತ್ಯ ಫೋಟೋಗೆ ಪೋಸ್ ನೀಡಿದ್ದಾನೆ. ಮಗ ಅಗಸ್ತ್ಯನ ಸಂತಸವನ್ನು ಕಂಡು ಹಾರ್ದಿಕ್ ಕೂಡ ಖುಷಿಯಾಗಿದ್ದಾರೆ. ನತಾಶಾ ಹಂಚಿಕೊಂಡ ಪೋಸ್ಟ್‌ಗೆ ಹಾರ್ದಿಕ್ ಏನೂ ಬರೆದಿಲ್ಲ ಆದ್ರೆ ಮೂರು ವಿಶೇಷ ಎಮೋಜಿಗಳನ್ನು ಹಾಕಿದ್ದಾರೆ. ಈ ಮೂಲಕ ಅವರ ಖುಷಿಯನ್ನು ಹಾರ್ದಿಕ್ ಪಾಂಡ್ಯ ಎಂಜಾಯ್ ಮಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ದೃಷ್ಟಿ ಬೀಳಬಾರದು ಎನ್ನುವ ಕಾರಣಕ್ಕೆ ಮೊದಲ ಎಮೋಜಿ ಹಾಕಿದ್ದಾರೆ. ಯಾರ ಕಣ್ಣು ಇವರ ಮೇಲೆ ಬೀಳದಿರಲಿ ಎನ್ನುವುದು ಇದ್ರ ಅರ್ಥ. ನಂತ್ರ ನಗು ಹಾಗೂ ಸೂಪರ್ ಎನ್ನುವ ಎರಡು ಎಮೋಜಿಗಳನ್ನು ಹಾರ್ದಿಕ್ ಪಾಂಡ್ಯ ಹಾಕಿದ್ದಾರೆ.
ಹಾರ್ದಿಕ್ ಪಾಂಡ್ಯಾ ಈ ಕಮೆಂಟ್ ನೋಡಿದ ನಂತ್ರ ಅನೇಕರು ಪಾಂಡ್ಯಾ ಪರ ಬ್ಯಾಟ್ ಬೀಸಿದ್ದಾರೆ. ಇದೇ ವೇಳೆ ನತಾಶಾ ಪರ ಮಾತನಾಡಿದವರ ಸಂಖ್ಯೆಯೂ ಸಾಕಷ್ಟಿದೆ. ವಿಚ್ಛೇದನ ನೀಡಿದ್ರೂ ಅನೇಕರು ಮಕ್ಕಳಿಗಾಗಿ ಒಂದಾಗಿರ್ತಾರೆ. ಒಟ್ಟಿಗೆ ಪ್ರವಾಸಕ್ಕೆ ಹೋಗ್ತಾರೆ. ಅದಕ್ಕೆ ಹೃತಿಕ್ ರೋಷನ್, ಅಮೀರ್ ಖಾನ್ ಉದಾಹರಣೆ. ಅವರಂತೆ ಹಾರ್ದಿಕ್ ಹಾಗೂ ನತಾಶಾ ಇರ್ತಾರಾ ಎನ್ನುವ ಪ್ರಶ್ನೆ ಈ ಪೋಸ್ಟ್ ನಂತ್ರ ಎದ್ದಿದೆ.
ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಬೇರೆಯಾಗಿದ್ದಾರೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಹರಿದಾಡುತ್ತಿತ್ತು. ನತಾಶಾ ಅನೇಕ ಪೋಸ್ಟ್ ನಲ್ಲಿ ಈ ಬಗ್ಗೆ ಸುಳಿವು ನೀಡಿದ್ದರು. ಕೆಲ ದಿನಗಳ ಹಿಂದಷ್ಟೆ ಹಾರ್ದಿಕ್ ಪಾಂಡ್ಯ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ನಾವಿಬ್ಬರು ಬೇರೆಯಾಗ್ತಿದ್ದೇವೆಂದು ಅಧಿಕೃತವಾಗಿ ಹೇಳಿದ್ದರು. ಇದಾದ್ಮೇಲೆ ನತಾಶಾ ದೇಶ ಬಿಟ್ಟಿದ್ದರು.
ಈ ಮಧ್ಯೆ ಹಾರ್ದಿಕ್ ಪಾಂಡ್ಯಾ ಬಾಲಿವುಡ್ ನಟಿ ಅನನ್ಯಾ ಪಾಂಡೆ ಜೊತೆ ಡೇಟ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಕೂಡ ಹಬ್ಬಿದೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆ ಸಮಾರಂಭದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ಇದಕ್ಕೆ ಕಾರಣ.
ಸದ್ಯ ಹಾರ್ದಿಕ್ ಪಾಂಡ್ಯ ಭಾರತ ತಂಡದ ಜೊತೆ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಜುಲೈ 27 ರಿಂದ ಆರಂಭವಾಗಲಿರುವ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಅವರು ಆಡಲಿದ್ದಾರೆ. ಆದ್ರೆ ನಂತ್ರ ನಡೆಯುವ ಏಕದಿನ ಪಂದ್ಯಕ್ಕೆ ಹಾರ್ದಿಕ್ ಗೈರಾಗಲಿದ್ದಾರೆ. ವಿಶ್ರಾಂತಿ ರಜೆ ಕೇಳಿದ್ದ ಕಾರಣ ಏಕದಿನ ಪಂದ್ಯದಿಂದ ಅವರನ್ನು ಹೊರಗಿಡಲಾಗಿದೆ.