5 ವರ್ಷಕ್ಕೆ ಮೆಗಾ ಹರಾಜು, ಆರು ಆಟಗಾರರು ರೀಟೈನ್; ಬಿಸಿಸಿಐ ಮುಂದೆ ಐಪಿಎಲ್ ಫ್ರಾಂಚೈಸಿ ಡಿಮ್ಯಾಂಡ್..!
3 ವರ್ಷಕ್ಕೊಮ್ಮೆ ಮೆಗಾ ಹರಾಜು ನಡೆಸುವ ಬದಲು 5 ವರ್ಷಕ್ಕೊಮ್ಮೆ ನಡೆಸಬೇಕು. ಇದರಿಂದ ಅನ್‌ಕ್ಯಾಪ್ಡ್ ಹಾಗೂ ಯುವ ಆಟಗಾರರನ್ನು ಬೆಳೆಸಲು ಫ್ರಾಂಚೈಸಿಗಳಿಗೆ ಸಾಧ್ಯವಾಗುತ್ತದೆ. ಜೊತೆಗೆ, ತಂಡಗಳು ಹರಾಜಿಗೂ ಮುನ್ನ 4ರಿಂದ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಐಪಿಎಲ್‌ನ ಮೆಗಾ ಹರಾಜು ಪ್ರಕ್ರಿಯೆಯನ್ನು 5 ವರ್ಷಕ್ಕೊಮ್ಮೆ ನಡೆಸಬೇಕು, ಹರಾಜಿಗೂ ಮುನ್ನ 6 ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಅಥವಾ 8 ರೈಟ್ ಟು ಮ್ಯಾಚ್(ಆರ್‌ಟಿಎಂ) ಅವಕಾಶ ಕೊಡಬೇಕು ಎಂದು ಫ್ರಾಂಚೈಸಿಗಳು ಬಿಸಿಸಿಐಗೆ ಮನವಿ ಮಾಡಿವೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ಈ ಬಗ್ಗೆ ಫ್ರಾಂಚೈಸಿಗಳು ಬಿಸಿಸಿಐ ಸಭೆಯಲ್ಲಿ ಪ್ರಸ್ತಾಪಿಸಿದೆ. 3 ವರ್ಷಕ್ಕೊಮ್ಮೆ ಮೆಗಾ ಹರಾಜು ನಡೆಸುವ ಬದಲು 5 ವರ್ಷಕ್ಕೊಮ್ಮೆ ನಡೆಸಬೇಕು. ಇದರಿಂದ ಅನ್‌ಕ್ಯಾಪ್ಡ್ ಹಾಗೂ ಯುವ ಆಟಗಾರರನ್ನು ಬೆಳೆಸಲು ಫ್ರಾಂಚೈಸಿಗಳಿಗೆ ಸಾಧ್ಯವಾಗುತ್ತದೆ. ಜೊತೆಗೆ, ತಂಡಗಳು ಹರಾಜಿಗೂ ಮುನ್ನ 4ರಿಂದ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು. ಅಲ್ಲದಿದ್ದರೆ ಆರ್‌ಟಿಎಂ ಮೂಲಕ ಗರಿಷ್ಠ 8 ಆಟಗಾರರನ್ನು ಖರೀದಿಸಬಹುದಾದ ನಿಯಮ ರೂಪಿಸಬೇಕು ಎಂದು ಮನವಿ ಮಾಡಿವೆ. ಈ ಬಗ್ಗೆ ಬಿಸಿಸಿಐ ಮುಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
'ನಾನೇ ನಿಮ್ಮ ದೊಡ್ಡ...' ಯುಜುವೇಂದ್ರ ಚಹಲ್ ಬರ್ತ್‌ಡೇ ಸ್ಪಷೆಲ್ ವಿಶ್ ಮಾಡಿದ ಪತ್ನಿ ಧನಶ್ರೀ ವರ್ಮಾ..!
ಏನಿದು ಆರ್‌ಟಿಮ್?
ರೈಟ್ ಟು ಮ್ಯಾಚ್(ಆರ್‌ಟಿಎಂ) ಎಂದರೆ, ಫ್ರಾಂಚೈಸಿಗಳು ಆಟಗಾರರನ್ನು ಹರಾಜಿಗೂ ಮುನ್ನ ಕೈಬಿಟ್ಟರೂ ಹರಾಜಿನಲ್ಲಿ ಅವರನ್ನು ಖರೀದಿಸಲು ಸಿಗುವ ಅವಕಾಶ. ತಾನು ಕೈಬಿಟ್ಟ ಆಟಗಾರನನ್ನು ಬೇರೆ ಯಾವುದೇ ಫ್ರಾಂಚೈಸಿ ಹರಾಜಿನಲ್ಲಿ ಖರೀದಿಸಿದರೆ, ಅಷ್ಟೇ ಮೊತ್ತ ನೀಡಿ ಆ ಆಟಗಾರನನ್ನು ಆರ್‌ಟಿಎಂ ಬಳಸಿ ತನಗೆ ಖರೀದಿಸಬಹುದು.
ಐಪಿಎಲ್: ಹೊಸ ಕೋಚ್ ಹುಡುಕಾಟದಲ್ಲಿ ಪಂಜಾಬ್
ನವದೆಹಲಿ: ಕಳೆದೆರಡು ಆವೃತ್ತಿಗಳ ಐಪಿಎಲ್‌ನಲ್ಲಿ ಕ್ರಮವಾಗಿ 8 ಹಾಗೂ 9ನೇ ಸ್ಥಾನ ಪಡೆದ ಪಂಜಾಬ್ ಕಿಂಗ್ಸ್, 2025ರ ಐಪಿಎಲ್‌ಗೆ ಹೊಸ ಕೋಚ್‌ನ ಹುಡುಕಾಟ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಕಳೆದೆರಡು ವರ್ಷಗಳಿಂದ ಕೋಚ್ ಆಗಿದ್ದ ಟ್ರೆವರ್ ಬೈಲಿಸ್‌ರ ಗುತ್ತಿಗೆ ಅವಧಿ 2024ರ ಐಪಿಎಲ್ ಬಳಿಕ ಮುಕ್ತಾಯಗೊಂಡಿದ್ದು, ಅವರನ್ನು ಮುಂದುವರಿಸದೆ ಇರಲು ಫ್ರಾಂಚೈಸಿ ನಿರ್ಧರಿಸಿದೆ ಎನ್ನಲಾಗಿದೆ.
ಭಾರತೀಯ ಕೋಚ್ ನೇಮಕದ ಬಗ್ಗೆ ಫ್ರಾಂಚೈಸಿಯು ಒಲವು ತೋರುತ್ತಿದ್ದು, ಭಾರತ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್‌ರನ್ನು ಸಂಪರ್ಕಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.