ಮಹಾರಾಜ ಟ್ರೋಫಿ ಟಿ20 ಹರಾಜು: ಯುವ ಬ್ಯಾಟರ್‌ ಚೇತನ್‌ಗೆ ಬಂಪರ್‌ ಬೆಲೆ; ಸಮಿತ್ ದ್ರಾವಿಡ್‌ ಮೈಸೂರು ಪಾಲು..!

ಗುರುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹರಾಜು ಪ್ರಕ್ರಿಯೆ ನಡೆಯಿತು. ಹರಾಜಿಗೆ ನೋಂದಾಯಿಸಿದ್ದ 240 ಮಂದಿ ಪೈಕಿ ಒಟ್ಟು 84 ಆಟಗಾರರು 6 ತಂಡಗಳಿಗೆ ಬಿಕರಿಯಾದರು. ಪ್ರತಿ ತಂಡಗಳು ಹರಾಜಿಗೂ ಮುನ್ನ ತಲಾ 4 ಆಟಗಾರರನ್ನು ರೀಟೈನ್‌ ಮಾಡಿಕೊಂಡಿದ್ದವು. ಹರಾಜಿನಲ್ಲಿ ಎಲ್ಲಾ ತಂಡಗಳು ತಲಾ 14 ಆಟಗಾರರನ್ನು ಖರೀದಿಸಿದವು.

Maharaja Trophy KSCA T20 auction Chethan most expensive player while Samit Dravid picked up by Mysuru kvn

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಲೀಗ್‌ನ ಆಟಗಾರರ ಹರಾಜಿನಲ್ಲಿ ರಾಜ್ಯದ ಯುವ ಬ್ಯಾಟರ್‌ ಎಲ್‌.ಆರ್‌.ಚೇತನ್‌ ಬೆಂಗಳೂರು ಬ್ಲಾಸ್ಟರ್ಸ್‌ ತಂಡಕ್ಕೆ ₹8.6 ಲಕ್ಷಕ್ಕೆ ಬಿಕರಿಯಾಗಿದ್ದಾರೆ. ಇದರೊಂದಿಗೆ ಈ ಬಾರಿ ಹರಾಜಿನ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್‌ ಮೂಲ ಬೆಲೆ 50 ಸಾವಿರಕ್ಕೆ ಮೈಸೂರು ತಂಡ ಸೇರಿಕೊಂಡಿದ್ದಾರೆ.

ಗುರುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹರಾಜು ಪ್ರಕ್ರಿಯೆ ನಡೆಯಿತು. ಹರಾಜಿಗೆ ನೋಂದಾಯಿಸಿದ್ದ 240 ಮಂದಿ ಪೈಕಿ ಒಟ್ಟು 84 ಆಟಗಾರರು 6 ತಂಡಗಳಿಗೆ ಬಿಕರಿಯಾದರು. ಪ್ರತಿ ತಂಡಗಳು ಹರಾಜಿಗೂ ಮುನ್ನ ತಲಾ 4 ಆಟಗಾರರನ್ನು ರೀಟೈನ್‌ ಮಾಡಿಕೊಂಡಿದ್ದವು. ಹರಾಜಿನಲ್ಲಿ ಎಲ್ಲಾ ತಂಡಗಳು ತಲಾ 14 ಆಟಗಾರರನ್ನು ಖರೀದಿಸಿದವು.

5 ವರ್ಷಕ್ಕೆ ಮೆಗಾ ಹರಾಜು, ಆರು ಆಟಗಾರರು ರೀಟೈನ್‌; ಬಿಸಿಸಿಐ ಮುಂದೆ ಐಪಿಎಲ್‌ ಫ್ರಾಂಚೈಸಿ ಡಿಮ್ಯಾಂಡ್..!

ತಾರಾ ಆಲ್ರೌಂಡರ್‌ ಶ್ರೇಯಸ್‌ ಗೋಪಾಲ್‌ ಮಂಗಳೂರು ಡ್ರ್ಯಾಗನ್ಸ್‌ ತಂಡಕ್ಕೆ ₹7.6 ಲಕ್ಷಕ್ಕೆ ಬಿಕರಿಯಾದರೆ, ಕೆ.ಗೌತಮ್‌ರನ್ನು ಮೈಸೂರು ವಾರಿಯರ್ಸ್‌ ತಂಡ 7.4 ಲಕ್ಷ ರು. ನೀಡಿ ಖರೀದಿಸಿತು. ಜೆ.ಸುಚಿತ್ ₹4.8 ಲಕ್ಷಕ್ಕೆ, ಫಿಟ್ನೆಸ್‌ ಸಮಸ್ಯೆ ಎದುರಿಸುತ್ತಿರುವ ವೇಗಿ ಪ್ರಸಿದ್ಧ್‌ ಕೃಷ್ಣ ₹1 ಲಕ್ಷಕ್ಕೆ ಮೈಸೂರು ತಂಡ ಸೇರ್ಪಡೆಗೊಂಡರು. ಹುಬ್ಬಳ್ಳಿ ಟೈಗರ್ಸ್‌ ತಂಡ ಕೆ.ಸಿ. ಕಾರ್ಯಪ್ಪ ಅವರನ್ನು ₹4.2 ಲಕ್ಷ ನೀಡಿ ಖರೀದಿಸಿದರೆ, ಗುಲ್ಬರ್ಗಾ ತಂಡ ಪ್ರವೀಣ್‌ ದುಬೆಯನ್ನು ₹6.8 ಲಕ್ಷ ನೀಡಿ ತನ್ನ ತೆಕ್ಕೆಗೆ ಪಡೆದುಕೊಂಡಿತು.

ಕಳೆದ ಬಾರಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಲುವ್‌ನೀತ್‌ ಸಿಸೋಡಿಯಾ(₹7.2 ಲಕ್ಷ) ಹಾಗೂ ಮೊಹಮದ್ ತಾಹಾ(₹6.6 ಲಕ್ಷ) ಕ್ರಮವಾಗಿ ಗುಲ್ಬರ್ಗಾ ಹಾಗೂ ಹುಬ್ಬಳ್ಳಿ ತಂಡ ಸೇರ್ಪಡೆಗೊಂಡರು. ಈ ಬಾರಿ ಟೂರ್ನಿ ಆ.15ರಿಂದ ಸೆ.1ರ ವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇಂದು ಮಹಾರಾಜ ಟ್ರೋಫಿ ಹರಾಜು: ಪ್ರಸಿದ್ಧ್‌, ಗೋಪಾಲ್‌, ಗೌತಮ್‌ ಆಕರ್ಷಣೆ

ದ್ರಾವಿಡ್‌ ಪುತ್ರ ಸಮಿತ್‌ ಮೈಸೂರು ತಂಡಕ್ಕೆ

ದಿಗ್ಗಜ ಕ್ರಿಕೆಟಿಗ, ಭಾರತ ತಂಡದ ಮಾಜಿ ನಾಯಕ ಹಾಗೂ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಪುತ್ರ ಸಮಿತ್‌ ದ್ರಾವಿಡ್‌ ಕೂಡಾ ಹರಾಜಿನಲ್ಲಿ ಪಾಲ್ಗೊಂಡರು. ಆಲ್ರೌಂಡರ್‌ ಆಗಿರುವ ಸಮಿತ್‌ರನ್ನು ಮೈಸೂರು ವಾರಿಯರ್ಸ್ ತಂಡ ಮೂಲಬೆಲೆ ₹50 ಸಾವಿರ ನೀಡಿ ಖರೀದಿಸಿತು. ಸಮಿತ್‌ ಈಗಾಗಲೇ ಕರ್ನಾಟಕ ಕಿರಿಯರ ತಂಡದಲ್ಲಿ ಆಡುತ್ತಿದ್ದಾರೆ.

ಮಹಿಳಾ ಏಷ್ಯಾಕಪ್‌: ಸೆಮೀಸಲ್ಲಿಂದು ಭಾರತಕ್ಕೆ ಬಾಂಗ್ಲಾ ಎದುರಾಳಿ

ದಾಂಬುಲಾ: 9ನೇ ಆವೃತ್ತಿ ಮಹಿಳಾ ಏಷ್ಯಾಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿಂದು ಭಾರತ ತಂಡಕ್ಕೆ ಬಾಂಗ್ಲಾದೇಶ ಸವಾಲು ಎದುರಾಗಲಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿವೆ. 

ಭಾರತ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದರೆ, ಪಾಕ್‌ 2ನೇ ಸ್ಥಾನ ಪಡೆದಿತ್ತು. ಬುಧವಾರ ‘ಬಿ’ ಗುಂಪಿನ ಕೊನೆ ಪಂದ್ಯದಲ್ಲಿ ಮಲೇಷ್ಯಾವನ್ನು 10 ವಿಕೆಟ್‌ಗಳಿಂದ ಸೋಲಿಸಿದ ಶ್ರೀಲಂಕಾ ಹ್ಯಾಟ್ರಿಕ್‌ ಜಯದೊಂದಿಗೆ ಅಗ್ರಸ್ಥಾನ ಪಡೆದುಕೊಂಡಿತು. ಮತ್ತೊಂದೆಡೆ ಮಲೇಷ್ಯಾವನ್ನು 114 ರನ್‌ಗಳಿಂದ ಮಣಿಸಿದ ಬಾಂಗ್ಲಾ ‘ಬಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆಯಿತು.

ಭಾರತ ಈ ವರೆಗೂ ಎಲ್ಲಾ ಆವೃತ್ತಿಗಳಲ್ಲೂ ಫೈನಲ್‌ ಪ್ರವೇಶಿಸಿದ್ದು, ಸತತ 9ನೇ ಬಾರಿಯೂ ಪ್ರಶಸ್ತಿ ಗೇರುವ ನಿರೀಕ್ಷೆಯಲ್ಲಿದೆ. ಅತ್ತ ಬಾಂಗ್ಲಾ 2018ರ ಬಳಿಕ ಮತ್ತೊಮ್ಮೆ ಫೈನಲ್‌ಗೇರಲು ಕಾಯುತ್ತಿದೆ.

Latest Videos
Follow Us:
Download App:
  • android
  • ios