Asianet Suvarna News Asianet Suvarna News

ಹಾರ್ದಿಕ್ ಫಿಟ್ನೆಸ್ ಮೇಲೆ BCCI ಫುಲ್ ಫೋಕಸ್: 18 ವಾರ NCAನಲ್ಲೇ ಠಿಕಾಣಿ ಹೂಡಲಿದ್ದಾರೆ ಪಾಂಡ್ಯ..!

ವರ್ಲ್ಡ್‌ಕಪ್ ಫೈನಲ್ನಲ್ಲಿ ಮುಗ್ಗರಿಸಲು ಪ್ರಮುಖ ಕಾರಣನೇ ಪಾಂಡ್ಯ ಅಲಭ್ಯತೆ. ಪಾಂಡ್ಯ ಇಲ್ಲದ್ದಕ್ಕೆ ಬ್ಯಾಟಿಂಗ್‌ನಲ್ಲಿ 6ನೇ ಕ್ರಮಾಂಕದಲ್ಲಿ ಅನುಭವಿ ಬ್ಯಾಟರ್ ಕೊರತೆ ಕಾಡಿತ್ತು. ಅಲ್ಲದೇ ಬೌಲಿಂಗ್‌ನಲ್ಲಿ 6ನೇ ಬೌಲರ್ ಇಲ್ಲದೆ ಇದ್ದದ್ದು, ರೋಹಿತ್ ಶರ್ಮಾ ಪಡೆಗೆ ಪೆಟ್ಟು ನೀಡಿತ್ತು. ಈ ಸೋಲು ಟೀಂ ಇಂಡಿಯಾಗೆ ಹಾರ್ದಿಕ್ ಮುಖ್ಯ ಎಷ್ಟು ಮುಖ್ಯ ಅನ್ನೋದನ್ನ ಸಾರಿ ಹೇಳಿತ್ತು. ವಿಶ್ವಕಪ್ ನಂತರವೂ ಪಾಂಡ್ಯ ಇಂಜುರಿಯಿಂದ ಇನ್ನು ಚೇತರಿಸಿಕೊಂಡಿಲ್ಲ. 

Hardik Pandya out of competitive cricket for 18 weeks kvn
Author
First Published Dec 6, 2023, 2:51 PM IST

ಬೆಂಗಳೂರು(ಡಿ.06): ಏಕದಿನ ವಿಶ್ವಕಪ್ ಫೈನಲ್ ಮುಗಿದ ಹೋದ ಅಧ್ಯಾಯ. ಈಗೇನಿದ್ರು, ಟಿ20 ವಿಶ್ವಕಪ್ ಮೇಲೆ ಟೀಂ ಇಂಡಿಯಾದ ಮುಂದಿನ ಗುರಿ. ಆದ್ರೆ, ಈ ಗುರಿ ಮುಟ್ಟಬೇಕಾದ್ರೆ, ಈ ಆಟಗಾರ ಸೇಫ್ ಆಗಿರಬೇಕು. ಆದಷ್ಟು ಬೇಗ ಈ ಸ್ಟಾರ್ ಆಟಗಾರ ಇಂಜುರಿಯಿಂದ ಚೇತರಿಸಿಕೊಳ್ಳಬೇಕು. ಯಾರು ಆ ಆಟಗಾರ..? ಏನ್ ಕಥೆ..? ಈತ ತಂಡಕ್ಕೆ ಯಾಕೆ ಅಷ್ಟು ಮುಖ್ಯ ಅಂತ ಹೇಳ್ತೀವಿ, ಈ ಸ್ಟೋರಿ ನೋಡಿ.

ಹಾರ್ದಿಕ್ ಪಾಂಡ್ಯ..! ಸದ್ಯ ವಿಶ್ವ ಕ್ರಿಕೆಟ್‌ನ ಒನ್ ಆಫ್ ದಿ ಬೆಸ್ಟ್ ಆಲ್ರೌಂಡರ್. ಬ್ಯಾಟಿಂಗ್ ಅ್ಯಂಡ್ ಬೌಲಿಂಗ್ ಎರಡರಲ್ಲೂ ತಂಡಕ್ಕೆ ಗೆಲುವು ತಂದುಕೊಡಬಲ್ಲ ಮ್ಯಾಚ್ ವಿನ್ನರ್. ಆದ್ರೆ, ಇಂತಹ ಆಟಗಾರನಿಗೆ ಇಂಜುರಿ ಬಿಟ್ಟು ಬಿಡದೇ ಕಾಡ್ತಿದೆ. ಇಂಜುರಿಯಿಂದಾಗಿ ಪಾಂಡ್ಯ ಏಕದಿನ ವಿಶ್ವಕಪ್ ಟೂರ್ನಿಯ ಅರ್ಧದಲ್ಲೇ ಟೀಂ ಇಂಡಿಯಾದಿಂದ ಔಟಾದ್ರು. ಒಂದು ವೇಳೆ  ಪಾಂಡ್ಯ ಫುಲ್ ಫಿಟ್ ಆಗಿದ್ದು, ಫೈನಲ್ ಆಡಿದ್ದಿದ್ರೆ ಆ ಕಥೆಯೇ ಬೇರೆ ಇರ್ತಿತ್ತು. 

ಯೆಸ್, ವರ್ಲ್ಡ್‌ಕಪ್ ಫೈನಲ್ನಲ್ಲಿ ಮುಗ್ಗರಿಸಲು ಪ್ರಮುಖ ಕಾರಣನೇ ಪಾಂಡ್ಯ ಅಲಭ್ಯತೆ. ಪಾಂಡ್ಯ ಇಲ್ಲದ್ದಕ್ಕೆ ಬ್ಯಾಟಿಂಗ್‌ನಲ್ಲಿ 6ನೇ ಕ್ರಮಾಂಕದಲ್ಲಿ ಅನುಭವಿ ಬ್ಯಾಟರ್ ಕೊರತೆ ಕಾಡಿತ್ತು. ಅಲ್ಲದೇ ಬೌಲಿಂಗ್‌ನಲ್ಲಿ 6ನೇ ಬೌಲರ್ ಇಲ್ಲದೆ ಇದ್ದದ್ದು, ರೋಹಿತ್ ಶರ್ಮಾ ಪಡೆಗೆ ಪೆಟ್ಟು ನೀಡಿತ್ತು. ಈ ಸೋಲು ಟೀಂ ಇಂಡಿಯಾಗೆ ಹಾರ್ದಿಕ್ ಮುಖ್ಯ ಎಷ್ಟು ಮುಖ್ಯ ಅನ್ನೋದನ್ನ ಸಾರಿ ಹೇಳಿತ್ತು. ವಿಶ್ವಕಪ್ ನಂತರವೂ ಪಾಂಡ್ಯ ಇಂಜುರಿಯಿಂದ ಇನ್ನು ಚೇತರಿಸಿಕೊಂಡಿಲ್ಲ. 

Happy Birthday Ravindra Jadeja: ಯಾವ ಸಿನಿಮಾ ಸ್ಟೋರಿಗೂ ಕಮ್ಮಿಯಿಲ್ಲ ಜಡೇಜಾ-ರಿವಾಬಾ ಲವ್ ಸ್ಟೋರಿ..!

ಇನ್ನೊಂದು ಆರು ತಿಂಗಳಲ್ಲಿ ಟಿ20 ವಿಶ್ವಕಪ್ ಸಮರ ನಡೆಯಲಿದೆ. ಏಕದಿನ ವಿಶ್ವಕಪ್ ಮಿಸ್ ಆಗಿದ್ದರಿಂದ ಟಿ20 ವಿಶ್ವಕಪ್ ಗೆಲ್ಲಲೇಬೇಕು ಅಂತ ಬಿಸಿಸಿಐ ಪಣ ತೊಟ್ಟಿದೆ. ಹೀಗಾಗಿ ಪಾಂಡ್ಯ ಆದಷ್ಟು ಬೇಗ ಇಂಜುರಿಯಿಂದ ಗುಣ ಮುಖರಾಗಬೇಕಿದೆ. ಈ ಹಿನ್ನೆಲೆಯಲ್ಲಿ BCCI, ಹಾರ್ದಿಕ್ ಇಂಜುರಿ ಮೇಲೆ  ಸ್ಪೆಷಲ್ ಫೋಕಸ್ ಹರಿಸಿದೆ. ಮಾರ್ಚ್‌ನೊಳಗೆ ಪಾಂಡ್ಯ ಸಂಪೂರ್ಣ ಫಿಟ್ ಆಗಿರುವಂತೆ ಪ್ಲಾನ್ ರೂಪಿಸಿದೆ. 

BCCI ಪ್ಲಾನ್  ಪ್ರಕಾರ ಪಾಂಡ್ಯ 18 ವಾರಗಳ NCA ರಿಹ್ಯಾಬ್ನಲ್ಲಿ ಭಾಗಿಯಾಗಲಿದ್ದಾರೆ. ಬಿಸಿಸಿಐ ಮೆಡಿಕಲ್ ಟೀಮ್ ಪಾಂಡ್ಯ ಫಿಟ್ನೆಸ್ನ ಪ್ರತಿಯೊಂದು ಅಪ್ಡೇಟ್ನಾ ಬಿಸಿಸಿಐ ಅಧಿಕಾರಿಗಳಿಗೆ ನೀಡಲಿದ್ದಾರೆ ಎನ್ನಲಾಗಿದೆ.  T20 ವಿಶ್ವಕಪ್ ಮಾತ್ರವಲ್ಲ, 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯೂ ನಡೆಯಲಿದೆ. ಅಲ್ಲದೇ ಅದೇ ವರ್ಷ WTC ಫೈನಲ್ ಕೂಡ ನಿಗದಿಯಾಗಿದೆ. ಇದ್ರಿಂದ ಪಾಂಡ್ಯ ಫಿಟ್ನೆಸ್ ಟೀಂ ಇಂಡಿಯಾಗೆ ಕ್ರೂಶಿಯಲ್ ಆಗಿದೆ.

ಭವಿಷ್ಯದಲ್ಲೂ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಕ್ಯಾಪ್ಟನ್ ಆಗಲ್ವಾ..?

IPLನಲ್ಲಿ ಕಣಕ್ಕಿಳಿಯಲಿದ್ದಾರೆ ಹಾರ್ದಿಕ್..!

ಯೆಸ್, ಇಂಜುರಿಯಿಂದಾಗಿ ಪಾಂಡ್ಯ ಸೌತ್ ಆಫ್ರಿಕಾ ಟೂರ್ನಿಂದ ಹೊರಗುಳಿದಿದ್ದಾರೆ. ತವರಿನಲ್ಲಿ ಅಪ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಪಾಂಡ್ಯ ಅಲಭ್ಯರಾಗಲಿದ್ದಾರೆ. ಆದ್ರೆ, ಮಾರ್ಚ್ ಮೂರನೇ ವಾರದಿಂದ ಆರಂಭವಾಗಲಿರೋ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲಿದ್ದಾರೆ. 

ಅದೇನೆ ಇರಲಿ, ಆದಷ್ಟು ಬೇಗ ಪಾಂಡ್ಯ ಇಂಜುರಿಯಿಂದ ಚೇತರಿಸಿಕೊಳ್ಳಲಿ. ಐಪಿಎಲ್ನಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಲಿ ಅನ್ನೋದೆ ಅಭಿಮಾನಿಗಳ ಆಶಯ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Follow Us:
Download App:
  • android
  • ios