- Home
- Sports
- Cricket
- Happy Birthday Ravindra Jadeja: ಯಾವ ಸಿನಿಮಾ ಸ್ಟೋರಿಗೂ ಕಮ್ಮಿಯಿಲ್ಲ ಜಡೇಜಾ-ರಿವಾಬಾ ಲವ್ ಸ್ಟೋರಿ..!
Happy Birthday Ravindra Jadeja: ಯಾವ ಸಿನಿಮಾ ಸ್ಟೋರಿಗೂ ಕಮ್ಮಿಯಿಲ್ಲ ಜಡೇಜಾ-ರಿವಾಬಾ ಲವ್ ಸ್ಟೋರಿ..!
ಬೆಂಗಳೂರು(ಡಿ.06): ಭಾರತ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ರವೀಂದ್ರ ಜಡೇಜಾ ಇಂದು ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಅಪಾರ ಅಭಿಮಾನಿಗಳಿಂದ ಜನ್ಮದಿನದ ಶುಭಹಾರೈಕೆಯ ಮಹಾಪೂರವೇ ಹರಿದು ಬರುತ್ತಿದೆ. ಅದೇ ರೀತಿ ಜಡ್ಡು ಪತ್ನಿ ಹಾಗೂ ಗುಜರಾತ್‌ನ ಬಿಜೆಪಿ ಶಾಸಕಿಯಾಗಿರುವ ರಿವಾಬಾ ಕೂಡಾ ಪತಿದೇವನಿಗೆ ಜನ್ಮದಿನದ ಶುಭಕೋರಿದ್ದಾರೆನಾವಿಂದು ರಿವಾಬಾ, ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ರವೀಂದ್ರ ಜಡೇಜಾರನ್ನು ಎಲ್ಲಿ ಹೇಗೆ ಭೇಟಿಯಾದರು ಎನ್ನುವುದನ್ನು ತಿಳಿಯೋಣ ಬನ್ನಿ. ಅಂದಹಾಗೆ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎನ್ನುವುದು ನಿಮಗೆ ಗೊತ್ತಿರಲಿ.

ಕ್ರಿಕೆಟಿಗ ರವೀಂದ್ರ ಜಡೇಜಾ ಮತ್ತು ರಿವಾಬಾ ಏಪ್ರಿಲ್ 17, 2016 ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಆದರೆ ಅವರ ಮದುವೆಯ ಸ್ಟೋರಿ ಸ್ವಲ್ಪ ಇಂಟ್ರೆಸ್ಟಿಂಗ್ ಆಗಿದೆ. ಜಡ್ಡು-ರಿವಾಬಾ ಲವ್ ಸ್ಟೋರಿ ತಿಳಿಸಿದರೆ ನೀವು ಖ್ಯಾತ ಸಿನಿಮಾ ನಿರ್ಮಾಪಕ ಸೂರಜ್ ಬರ್ಜಾತ್ಯಾ ಸಿನಿಮಾ ನೋಡುತ್ತಿದ್ದಿರೇನೋ ಎಂದೆನಿಸೋದು ಗ್ಯಾರಂಟಿ.
ರವೀಂದ್ರ ಜಡೇಜಾ ಕ್ರಿಕೆಟ್ ಆಡುವುದರಲ್ಲಿ ಯಾವಾಗಲೂ ಬ್ಯುಸಿಯಾಗಿದ್ದರು. ಅವರ ಕುಟುಂಬದವರು 2015ರಲ್ಲಿ ಜಡ್ಡುಗೆ ಮದುವೆ ಮಾಡಬೇಕೆಂದು ಬಯಸಿದ್ದರು. ಆದರೆ ಜಡೇಜಾ ಇನ್ನಷ್ಟು ಸಮಯದ ಬಳಿಕ ಮದುವೆಯಾಗಲು ಬಯಸ್ಸಿದ್ದರು. ಈ ಸಮಯದಲ್ಲಿ, ಜಡೇಜಾ ಸಹೋದರಿ ನೈನಾ ತನ್ನ ಸಹೋದರನ ಮದುವೆಯ ಜವಬ್ದಾರಿ ವಹಿಸಿಕೊಂಡರು ಮತ್ತು ಅದರಲ್ಲಿ ಯಶಸ್ವಿಯಾದರು.
ಜಡೇಜಾಗೆ ರಿವಾಬಾರನ್ನು ಭೇಟಿಯಾಗಲು ಸಹೋದರಿ ನೈನಾ ಸಹಾಯ ಮಾಡಿದ್ದು ಹೇಗೆ?
ರಿವಾಬಾ, ರವೀಂದ್ರ ಜಡೇಜಾ ಅವರ ಸಹೋದರಿ ನೈನಾ ಅವರ ಆಪ್ತ ಗೆಳತಿ. ನೈನಾ ತನ್ನ ಅತ್ತಿಗೆಯನ್ನು ಶೀಘ್ರವಾಗಿ ಮನೆಗೆ ಸ್ವಾಗತಿಸಲು ಉತ್ಸುಕರಾಗಿದ್ದರು. ರವೀಂದ್ರ ಜಡೇಜಾರನ್ನು ಒಂದು ಪಾರ್ಟಿಗೆ ಕರೆದೊಯ್ದರು. ಅಲ್ಲಿ ರಿವಾಬಾ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿಸಿದರು.
ಜಡೇಜಾ-ರಿವಾಬಾ ಮೊದಲ ಭೇಟಿಯಲ್ಲೇ ಪ್ರೇಮಾಂಕುರ:
ಇನ್ನೂ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಳ್ಳುವ ಮೊದಲೇ ಇಬ್ಬರು ಮೊದಲ ನೋಟದಲ್ಲೇ ಇಷ್ಟಪಟ್ಟರು. ಈ ಸುಂದರ ಲವ್ ಸ್ಟೋರಿಯಾಗಲು ಕಾರಣ ಕ್ರಿಕೆಟಿಗ ಮುದ್ದಿನ ಸಹೋದರಿ ನೈನಾ.
ರವೀಂದ್ರ ಮತ್ತು ರಿವಾಬಾ ಮೂರು ತಿಂಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದರು. ಅಷ್ಟರಲ್ಲಾಗಲೇ ಅವರಿಬ್ಬರು ತಮ್ಮ ಮುಂದಿನ ಜೀವನವನ್ನು ಒಟ್ಟಾಗಿ ಕಳೆಯಲು ಇದಕ್ಕಿಂತ ಒಳ್ಳೆಯ ಲೈಫ್ ಪಾರ್ಟ್ನರ್ ಮತ್ತೊಬ್ಬರಿಲ್ಲ ಎನ್ನುವ ತೀರ್ಮಾನಕ್ಕೆ ಬಂದರು. ಅವರಿಬ್ಬರು ಫೆಬ್ರವರಿ 5, 2016 ರಂದು ನಿಶ್ಚಿತಾರ್ಥ ಮಾಡಿಕೊಂಡರು.
ಪತ್ನಿ ರಿವಾಬಾ, ರವೀಂದ್ರ ಜಡೇಜಾರ ಜೊತೆಯಿರುವುದು ಮಾತ್ರವಲ್ಲದೆ, ಅವರ ಎಲ್ಲಾ ಯಶಸ್ಸನ್ನು ಸಂಭ್ರಮಿಸುತ್ತಾ, ಹುರಿದುಂಬಿಸುತ್ತಾ ಬಂದಿದ್ದಾರೆ. ಜಡೇಜಾ ಭಾರತ ಅಥವಾ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಪಂದ್ಯಗಳನ್ನು ಆಡುತ್ತಿರುವಾಗ ರಿವಾಬಾ ಯಾವಾಗಲೂ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಜತೆಗೆ ರಿವಾಬಾ ಮೈದಾನದಲ್ಲಿ ತಮ್ಮ ಗಂಡನ ದೊಡ್ಡ ಅಭಿಮಾನಿಯಾಗಿದ್ದಾರೆ.