Asianet Suvarna News Asianet Suvarna News

ಭವಿಷ್ಯದಲ್ಲೂ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಕ್ಯಾಪ್ಟನ್ ಆಗಲ್ವಾ..?

ಹಾರ್ದಿಕ್ ಪಾಂಡ್ಯ ಫುಲ್ ಫಿಟ್ ಆಗಿ ಮೈದಾನಕ್ಕಿಳಿದ್ರೆ, ಅದ್ಭುತ ಪ್ಲೇಯರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​ ಹೀಗೆ ಮೂರು ವಿಭಾಗದಲ್ಲೂ ಟೀಂ ಇಂಡಿಯಾಗೆ ನೆರವಾಗ್ತಾರೆ. ಪಾಂಡ್ಯ ಟೀಮ್​ನಲ್ಲಿದ್ದಾನೆ ಅಂದ್ರೆ ಎದುರಾಳಿಗೆ ಜಯ ಸುಲಭವಲ್ಲ. ಯಾವಾಗ ಹೇಗೆ ಬೇಕಾದ್ರೂ ಮ್ಯಾಜಿಕ್ ಮಾಡಬಹುದು.

Will Hardik Pandya be the captain of Team India in the future here is why kvn
Author
First Published Dec 4, 2023, 5:08 PM IST

ಬೆಂಗಳೂರು(ಡಿ.04): ಹಾರ್ದಿಕ್ ಪಾಂಡ್ಯ ಕೆರಿಯರ್‌ಗೆ ಇಂಜುರಿ ಮಾರಕವಾಗ್ತಿದ್ಯಾ..? ಇಂಜುರಿಯಿಂದ ಯಾವುದೇ ಪದವಿ ಇಲ್ಲದೆ ಬರಿಗೈಯ್ಯಲ್ಲಿ ಇರುವಂತಾಗಿದೆ. ತಾನು ಮಾಡಿದ ಪಾಪವನ್ನ ತಾವೇ ಅನುಭವಿಸ್ತಿದ್ದಾರಾ..? ಟೀಮ್‌ಗೆ ವಾಪಾಸ್ ಆದ್ರೂ ಅವರಿಗೆ ಕ್ಯಾಪ್ಟನ್ಸಿ ಪಟ್ಟ ಸಿಗಲ್ವಾ..? ಈ ಎಲ್ಲದಕ್ಕೂ ಆನ್ಸರ್ ಇಲ್ಲಿದೆ ನೋಡಿ.

ಹಾರ್ದಿಕ್ ಪಾಂಡ್ಯ. ಕಪಿಲ್ ದೇವ್ ಬಳಿಕ ಭಾರತಕ್ಕೆ ಸಿಕ್ಕ ಅದ್ಭುತ ಆಲ್​ರೌಂಡರ್​. ಭಾರತದಲ್ಲಿ ಸಾಕಷ್ಟು ಆಲ್​ರೌಂಡರ್‌ಗಳಿದ್ದಾರೆ. ಆಡಿ ಸಕ್ಸಸ್ ಕಂಡಿದ್ದಾರೆ. ಆದ್ರೆ ವೇಗದ ಬೌಲರ್ ಕಮ್ ಬ್ಯಾಟರ್ಸ್ ಆಗಿ ಸಕ್ಸಸ್ ಕಂಡಿದ್ದು ಕಪಿಲ್ ದೇವ್ ಬಿಟ್ರೆ ಹಾರ್ದಿಕ್ ಪಾಂಡ್ಯ ಮಾತ್ರ. ಅದಕ್ಕಾಗಿ ಪಾಂಡ್ಯ ಟೀಂ ಇಂಡಿಯಾಗೆ ಎಕ್ಸ್ ಫ್ಯಾಕ್ಟರ್​. ಪಾಂಡ್ಯ ಆಡಿದ್ರೆ ತಂಡ ಉತ್ತಮ ಸಮತೋಲದಿಂದ ಕೂಡಿರುತ್ತೆ. ಆಕಸ್ಮಾತ್ ಅವರು ಪ್ಲೇಯಿಂಗ್-11ನಿಂದ ಹೊರಗುಳಿದ್ರೆ ಟೀಮ್ ಬ್ಯಾಲೆನ್ಸ್ ಇರಲ್ಲ. ಇದು ವಿಶ್ವಕಪ್ ಫೈನಲ್​ನಲ್ಲೂ ಸಾಬೀತಾಯ್ತು.

ಹಾರ್ದಿಕ್ ಪಾಂಡ್ಯ ಫುಲ್ ಫಿಟ್ ಆಗಿ ಮೈದಾನಕ್ಕಿಳಿದ್ರೆ, ಅದ್ಭುತ ಪ್ಲೇಯರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​ ಹೀಗೆ ಮೂರು ವಿಭಾಗದಲ್ಲೂ ಟೀಂ ಇಂಡಿಯಾಗೆ ನೆರವಾಗ್ತಾರೆ. ಪಾಂಡ್ಯ ಟೀಮ್​ನಲ್ಲಿದ್ದಾನೆ ಅಂದ್ರೆ ಎದುರಾಳಿಗೆ ಜಯ ಸುಲಭವಲ್ಲ. ಯಾವಾಗ ಹೇಗೆ ಬೇಕಾದ್ರೂ ಮ್ಯಾಜಿಕ್ ಮಾಡಬಹುದು. ಹಾಗಾಗಿಯೇ ಅವರು ಟಿ20 ಕ್ಯಾಪ್ಟನ್​ ಆಗಿದ್ದು. ಒನ್​ಡೇಯಲ್ಲಿ ವೈಸ್ ಕ್ಯಾಪ್ಟನ್ಸಿ ಪಟ್ಟ ಅವರಿಗೆ ಸಿಕ್ಕಿದ್ದು. ಆದ್ರೆ ಸಿಕ್ಕ ಪದವಿಯನ್ನು ದುರುಪಯೋಗ ಪಡಿಸಿಕೊಂಡ್ರೆ ಏನಾಗುತ್ತೆ ಅನ್ನೋದಕ್ಕೆ ಪಾಂಡ್ಯಗಿಂತ ಬೆಸ್ಟ್ ಎಕ್ಸಾಂಪಲ್ ಬೇಕಿಲ್ಲ.

ಕ್ಯಾಮರೋನ್ ಗ್ರೀನ್ ಟ್ರೇಡ್ ಮಾಡಿದ್ದು RCB ಕೆಟ್ಟ ತೀರ್ಮಾನವೆಂದ ಆಸೀಸ್ ಮಾಜಿ ಕ್ರಿಕೆಟಿಗ..!

ಟಿ20 ಕ್ಯಾಪ್ಟನ್ಸಿ ಸಿಕ್ಕದ ಮೇಲೆ ಸುಮ್ಮನಿರೋದು ಬಿಟ್ಟು ಕೊಹ್ಲಿ, ರೋಹಿತ್, ರಾಹುಲ್​​​ರನ್ನ ಟಿ20 ಟೀಮ್​ನಿಂದ ಕಿಕೌಟ್ ಮಾಡಿಸೋ ಪ್ಲಾನ್ ಮಾಡಿದ್ರು. ಇನ್ನು ಒನ್​ಡೇಯಲ್ಲಿ ರಾಹುಲ್ ಬಳಿಯಿದ್ದ ವೈಸ್ ಕ್ಯಾಪ್ಟನ್ಸಿಯನ್ನ ಬಲವಂತವಾಗಿ ಕಿತ್ತುಕೊಂಡ್ರು. ಆದ್ರೆ ದರ್ಬಾರ್ ಎಷ್ಟು ದಿನ ನಡೆಯುತ್ತೆ ಹೇಳಿ. ಈಗ ಅವರೇ ಇಂಜುರಿಯಾಗಿ ಒನ್​ಡೇ-ಟಿ20ಯಿಂದ ಹೊರಬಿದ್ದಿದ್ದಾರೆ. ವರ್ಲ್ಡ್​ಕಪ್​ನಲ್ಲಿ ಪಾಂಡ್ಯ  ಇಂಜುರಿಯಾಗಿದ್ದೇ ಬಂತು. ಅವರ ಟಿ20 ಕ್ಯಾಪ್ಟನ್ಸಿಯೂ ಹೋಯ್ತು.. ಒನ್​ಡೇ ವೈಸ್ ಕ್ಯಾಪ್ಟನ್ಸಿಯೂ ಹೋಯ್ತು.

ಆಟಗಾರನಾಗಿ ಕಮ್​ಬ್ಯಾಕ್ ಮಾಡ್ಬೇಕಿದೆ ಪಾಂಡ್ಯ

ಸದ್ಯ ಇಂಜುರಿಯಾಗಿ ರೆಸ್ಟ್​ನಲ್ಲಿರುವ ಹಾರ್ದಿಕ್ ಪಾಂಡ್ಯ, ಐಪಿಎಲ್​ವರೆಗೂ ಫಿಟ್ ಆಗಲ್ಲ ಅನ್ನಲಾಗ್ತಿದೆ. ಅಲ್ಲಿಗೆ ಅವರು ಆಫ್ರಿಕಾ, ಐರ್ಲೆಂಡ್, ನ್ಯೂಜಿಲೆಂಡ್ ಸರಣಿಗಳನ್ನ ಮಿಸ್ ಮಾಡಿಕೊಳ್ಳಲಿದ್ದಾರೆ. ನೇರ ಐಪಿಎಲ್​ನಲ್ಲಿ ಕಣಕ್ಕಿಳಿಯೋ ಪಾಂಡ್ಯ, ಅಲ್ಲಿ ಉತ್ತಮ ಪ್ರದರ್ಶನ ನೀಡಿ ಫಿಟ್ನೆಸ್ ಸಾಬೀತುಪಡಿಸಬೇಕು. ಆಗ ಮಾತ್ರ ಅವರು ಟಿ20 ತಂಡಕ್ಕೆ ಮರಳಲು ಸಾಧ್ಯ. ಅದು ಆಟಗಾರನಾಗಿ ಮಾತ್ರ ಟೀಮ್​ಗೆ ಕಮ್​ಬ್ಯಾಕ್ ಮಾಡ್ತಾರೆ. ವಾಪಾಸ್ ಟೀಮ್​ಗೆ ಬಂದಾಗ ಅವರಿಗೆ ಕ್ಯಾಪ್ಟನ್ಸಿ, ವೈಸ್ ಕ್ಯಾಪ್ಟನ್ಸಿ ಯಾವುದು ಸಿಗುವುದಿಲ್ಲ.

ಪ್ರತಿ ಐಪಿಎಲ್ ತಂಡದ ಪರ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳಿವರು..! 2 ಟೀಂನಲ್ಲಿ ರಾಹುಲ್ ಟಾಪ್ ಸ್ಕೋರರ್

ಭವಿಷ್ಯದಲ್ಲೂ ಪಾಂಡ್ಯ ಕ್ಯಾಪ್ಟನ್ ಆಗಲ್ವಾ..?

ಇಂಜುರಿ ಅನ್ನೋ ಭೂತ ಪಾಂಡ್ಯ ಕೆರಿಯರ್​ ಅನ್ನೇ ಬಲಿ ಪಡೆಯುತ್ತಿದೆ. ಹೀಗೆ ಪದೇ ಪದೆ ಇಂಜುರಿಯಾಗೋ ಆಟಗಾರನಿಗೆ ಕ್ಯಾಪ್ಟನ್ಸಿ ಕೊಡುವುದು ತುಂಬಾ ವಿರಳ. ಕೊಟ್ಟರೂ ಮೇನ್ ಪ್ಲೇಯರ್ಸ್ ಇಂಜುರಿಯಾದಾಗ ಮಾತ್ರ. ಅಲ್ಲಿಗೆ ಹಾರ್ದಿಕ್ ಪಾಂಡ್ಯಗೆ ಮತ್ತೆ ನಾಯಕತ್ವ ಸಿಗೋದು ಅನುಮಾನವೇ. ಅವರಿಗೆ ಇಂಜುರಿಯೇ ಮುಳುವಾಗಿದೆ. ಒಟ್ನಲ್ಲಿ ಕ್ರಿಕೆಟ್​ನಲ್ಲಿ ಆಟ ಅಷ್ಟೇ ಮುಖ್ಯವಲ್ಲ, ಆಟಿಟ್ಯೂಡ್, ಫಿಟ್ನೆಸ್ ಸಹ ಮುಖ್ಯ ಅನ್ನೋದು ಪಾಂಡ್ಯ ನೋಡಿ ಕಲಿಯಬೇಕಿದೆ.

ಸ್ಪೋರ್ಟ್ಸ್​ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Follow Us:
Download App:
  • android
  • ios