ಗೌತಮ್ ಗಂಭೀರ್‌ಗೂ ಮೊದಲು ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಹೆಡ್ ಕೋಚ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಣಣ್ ಹೆಸರು ಮೊದಲಿತ್ತು. ಆದರೆ ಕೊನೆಯ ಕ್ಷಣದಲ್ಲಿ ಲಕ್ಷ್ಮಣ್ ಬದಲು ಗಂಭೀರ್ ಕೋಚ್ ಆಗಿದ್ದು ಹೇಗೆ?
ಮುಂಬೈ (ಆ.09) ಟೀಂ ಇಂಡಿಯಾದ ಇತ್ತೀಚೆಗಿನ ಪ್ರವಾಸ, ಸತತ ಸೋಲುಗಳ ಬಳಿಕ ಕೋಚ್ ಕುರಿತು ಅಪಸ್ವರಗಳು ಕೇಳಿಬಂದಿದೆ. ಗೌತಮ್ ಗಂಭೀರ್ ಕೋಚ್ ಸ್ಥಾನದಿಂದ ಕಿತ್ತು ಹಾಕಿ ವಿವಿಎಸ್ ಲಕ್ಷ್ಮಣ್‌ಗೆ ಸ್ಥಾನ ನೀಡಬೇಕು ಅನ್ನೋ ಮಾತುಗಳು ಕೇಳಿಬಂದಿತ್ತು. ಅಸಲಿಗೆ ರಾಹುಲ್ ದ್ರಾವಿಡ್ ಅವಧಿ ಮುಗಿದ ಬಳಿಕ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಣಣ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಇಷ್ಟೇ ಅಲ್ಲ ಬಿಸಿಸಿಐ ಸಮಿತಿ ಮುಂದೆ ಲಕ್ಷ್ಮಣ್ ಹೆಸರೇ ಮುಂಚೂಣಿಯಲ್ಲಿತ್ತು. ಆದರೆ ಅಂತಿಮ ಕ್ಷಣದಲ್ಲಿ ಗೌತಮ್ ಗಂಭೀರ್ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದರು.
ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ದ ಹೀನಾಯ ಸೋಲು ಕಂಡರೆ, ಇತ್ತ ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ, ಜಿಂಬಾಂಬ್ವೆ ವಿರುದ್ದ 3-0 ಗೆಲುವು ದಾಖಲಿಸಿತ್ತು. ಹೀಗಾಗಿ ಲಕ್ಷ್ಮಣ್‌ಗೆ ಕೋಚ್ ಸ್ಥಾನ ನೀಡಿ ಅನ್ನೋ ಆಗ್ರಹ ಕೇಳಿಬಂದಿತ್ತು. ಆದರೆ ಗೌತಮ್ ಗಂಭೀರ್‌ಗೂ ಮೊದಲು ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಬಿಸಿಸಿಐ ವಿವಿಎಸ್ ಲಕ್ಷ್ಣಣ್ ಹೆಸರು ಅಂತಿಮಗೊಳಿಸಿತ್ತು.
ಲಕ್ಷ್ಮಣ್‌ಗೆ ಖುದ್ದು ಬಿಸಿಸಿಐ ನೀಡಿತ್ತು ಆಫರ್
ರಾಹುಲ್ ದ್ರಾವಿಡ್ ಅವಧಿ ಮುಗಿಯುತ್ತಿದ್ದಂತೆ ಮುಂದುವರಿಸಲು ನಿರಾಕರಿಸಿದ್ದರು. ಬ್ರೇಕ್ ಪಡೆಯುವುದುಕೊಳ್ಳುವುದಾಗಿ ದ್ರಾವಿಡ್ ಸ್ಪಷ್ಪಪಡಸಿದ್ದರು. ಈ ವೇಳೆ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಹೆಸರನ್ನು ಬಿಸಿಸಿಐ ಅಂತಿಮಗೊಳಿಸಿತ್ತು. ಅರ್ಜಿ ಆಹ್ವಾನಕ್ಕೂ ಮೊದಲೇ ಬಿಸಿಸಿಐ ಲಕ್ಷ್ಮಣ್ ಹೆಸರು ಫೈನಲ್ ಮಾಡಿತ್ತು. ಬಳಿಕ ಬಿಸಿಸಿಐ ನೇರವಾಗಿ ಲಕ್ಷ್ಮಣ್‌ಗೆ ಹೆಡ್ ಕೋಚ್ ಆಗುವಂತೆ ಆಹ್ವಾನ ನೀಡಿತ್ತು.
ಬಿಸಿಸಿಐ ಆಫರ್ ತಿರಸ್ಕರಿಸಿದ ವಿವಿಎಸ್ ಲಕ್ಷ್ಮಣ್
ಬಿಸಿಸಿಐ ಎಕ್ಸಲೆನ್ಸ್ ಅನುಭವ, ಫಿಟ್ನೆಸ್, ಯುವ ಕ್ರಿಕೆಟಿಗರ ಸಾಮರ್ಥ್ಯದ ಕುರಿತು ಸಂಪೂರ್ಣ ಅರಿವಿದ್ದ ವಿವಿಎಸ್ ಲಕ್ಷ್ಮಣ್ ನೇರವಾಗಿ ಬಿಸಿಸಿಐ ಆಫರ್ ತಿರಸ್ಕರಿಸಿದ್ದರು. ಟೀಂ ಇಂಡಿಯಾ ಮುಖ್ಯ ಕೋಚ್ ವರ್ಷದ 10 ರಿಂದ 11 ತಿಂಗಳು ತಂಡದ ಜೊತೆಗಿರಬೇಕು,ಪ್ರವಾಸ ಮಾಡಬೇಕು. ಆದರೆ ಕುಟುಂಬದ ಜೊತೆಗಿರಲು ಬಯಸಿದ ವಿವಿಎಸ್ ಲಕ್ಷ್ಣಣ್ ಆಫರ್ ತಿರಸ್ಕರಿಸಿದ್ದರು. ವಿವಿಎಸ್ ಲಕ್ಷ್ಮಣ್ ಆಫರ್ ತಿರಸ್ಕರಿಸಿದ ಬಳಿಕ ಬಿಸಿಸಿಐ ಗೌತಮ್ ಗಂಭೀರ್‌ಗೆ ಆಫರ್ ನೀಡಿತ್ತು.


