ಭುವನೇಶ್ವರ ಕುಮಾರ್‍‌ ಎಲ್ಲ ಅವಕಾಶ ಇದ್ದರೂ, ಕೌಶಲ್ಯ ತೋರ್ಪಡಿಸಿದರೂ, ಕೆಲ ಹೆದರಿಕೆ ಇನ್ನು ಇದ್ದೆ ಇದೆ. ಇಲ್ಲಿ ಬಿಸಿಸಿಐ ಅವಕಾಶವಾದಿ ಆಟ ಆಡ್ತೀದೆಯಾ? ಇಗಿನ ಮಟ್ಟಿಗೆ ಎದ್ದಿರುವ ಕೂತುಹಲ ಹಲವಾರು ಪ್ರಶ್ನೆಗಳ ಸೃಷ್ಟಿಗೆ ನಾಂದಿ ಹಾಡಿದೆ.

ಭುವನೇಶ್ವರ ಕುಮಾರ್‍‌ ಎಲ್ಲ ಅವಕಾಶ ಇದ್ದರೂ, ಕೌಶಲ್ಯ ತೋರ್ಪಡಿಸಿದರೂ, ಕೆಲ ಹೆದರಿಕೆ ಇನ್ನು ಇದ್ದೆ ಇದೆ. ಇಲ್ಲಿ ಬಿಸಿಸಿಐ ಅವಕಾಶವಾದಿ ಆಟ ಆಡ್ತೀದೆಯಾ? ಇಗಿನ ಮಟ್ಟಿಗೆ ಎದ್ದಿರುವ ಕೂತುಹಲ ಹಲವಾರು ಪ್ರಶ್ನೆಗಳ ಸೃಷ್ಟಿಗೆ ನಾಂದಿ ಹಾಡಿದೆ. ಅಷ್ಟಕ್ಕೂ ಕ್ಕಬಿಸಿಸಿಐ ಮಾಡಿದ್ದೇನು? ಕಾಡುವ ಆ ಭಯವೇನು? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಕೈ ಕೊಟ್ಟ ಟೀಂ ಇಂಡಿಯಾ ಬೌಲರ್‍ಸ್!

ಹೌದು ಕಳೆದ 4 ಟಿ-20 ಪಂದ್ಯಗಳಲ್ಲಿ ನೋಡಿದಂತೆ ಟೀಂ ಇಂಡಿಯಾ ಬೌಲಿಂಗ್‌ನಲ್ಲಿ ಚೇತರಿಕೆ ಕಂಡಿಲ್ಲ ಎನ್ನುವುದಕ್ಕೆ ಭುವಿ ಎಂಟ್ರಿ ನಮಗೆ ಹಿಡಿದ ಕನ್ನಡಿಯಾಗಿದೆ. ಆದ್ದರಿಂದ ಆಯ್ಕೆ ಸಮಿತಿ ಗೋಜಲು ನಿರ್ಮಾಣವಾದಾಗ ಈ ಭುವನೇಶ್ವರ ಕುಮಾರ್‍‌ ಅವರನ್ನು ಕರೆಸಿದ್ದಾರೆ. ಆದರೆ ಎದುರಾಗಿರುವ ಭಯವೇನು?

ಕೀವಿಸ್‌ ಪ್ರವಾಸಕ್ಕೆ ಇಂಡಿಯನ್‌ ಟೀಂ ಘೋಷಣೆ!

ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಭಾರತೀಯ ತಂಡ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಒಂದು ದೊಡ್ಡ ನಿರ್ಧಾರ ಬೆಳಕಿಗೆ ಬಂದಿದೆ. ಅನುಭವಿ ವೇಗಿ, ಸ್ವಿಂಗ್‌ ಮಾಸ್ಟರ್‍‌ ಭುವನೇಶ್ವರ್ ಕುಮಾರ್ ಅವರನ್ನು ಪ್ರವಾಸಕ್ಕಾಗಿ ಏಕದಿನ ತಂಡದಲ್ಲಿ ಸೇರಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಇಲ್ಲಿ ಬಳಿಸಿಕೊಂಡು ಏಕದಿನದಲ್ಲಿ ಕೈ ಬಿಡುವ ಚಾನ್ಸ್ ಈಗ ಕ್ರಿಕೆಟ್‌ ವಲಯದಲ್ಲಿ ಮನೆಮಾಡಿದೆ.

ಏಕದಿನ ಫಾಮ್ರ್ಯಾಟ್‌ನಿಂದ ದೂರ!

ವೆಸ್ಟ್ ಇಂಡೀಸ್ ವಿರುದ್ಧದ ಕೊನೆ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಟಿ20 ತಂಡಕ್ಕೆ ಮರಳಿದ್ದರೂ, ಅವರನ್ನು ಒಂಡೇ ಫಾಮ್ರ್ಯಾಟ್‌ನಿಂದ ಅಂದರೆ, 50 ಓವರ್‌ಗಳ ಏಕದಿನ ಸ್ವರೂಪದಿಂದ ದೂರವಿಡಲಾಗಿದೆ. ಆದ್ದರಿಂದ, ಭುವನೇಶ್ವರ್ ಕುಮಾರ್ ಏಕದಿನ ವಿಶ್ವಕಪ್‌ನ ಭಾಗವಾಗುವುದಿಲ್ಲ ಎಂದು ಈಗ ಖಚಿತವಾಗಿದೆ.

ಏಕದಿನಕ್ಕೆ ಯುವ ವೇಗಿಗಳಿಗೆ ಚಾನ್ಸ್!

ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಗಾಗಿ, ಅನುಭವಿ ಭುವನೇಶ್ವರ್ ಬದಲಿಗೆ ಯುವ ಮತ್ತು ಹೊಸ ವೇಗದ ಬೌಲರ್‌ಗಳ ಮೇಲೆ ಕೇಂದ್ರೀಕರಿಸಲು ಆಯ್ಕೆದಾರರು ನಿರ್ಧರಿಸಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತೀಯ ಏಕದಿನ ತಂಡವನ್ನು ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ.

2022ರಲ್ಲಿ ಕೊನೇ ಪಂದ್ಯ!

ಭುವನೇಶ್ವರ್ ಕುಮಾರ್ 2022ರಲ್ಲಿ ತಮ್ಮ ಕೊನೇ ಏಕದಿನ ಪಂದ್ಯ ಆಡಿದರು. ಮುಂಬರುವ ಏಕದಿನ ವಿಶ್ವಕಪ್ ನಡೆಯುವ ದೇಶವಾದ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದರು. ಈ ಪಂದ್ಯದಲ್ಲಿ ಭುವಿ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಇದರ ಮಧ್ಯ, ಟೀಂ ಇಂಡಿಯಾದ ವಿಶ್ವಕಪ್ ಯೋಜನೆ ಸಸ್ಟೈನ್‌ ಆಗಿದೆ. ಗಂಭೀರ್ ಬೌಲಿಂಗ್ ವಿಭಾಗದಲ್ಲಿ ಎಲ್ಲಾ ಸರಿಯಾದ ಬೌಲರ್‌ಗಳನ್ನು ಆಯ್ಕೆ ಮಾಡಿದ್ದಾರಾ? ಗುರ್ನೂರ್ ಬ್ರಾರ್, ಅರ್ಷದೀಪ್ ಸಿಂಗ್ ಮತ್ತು ಪ್ರಸಿದ್ಧ್ ಕೃಷ್ಣ ಈ ಮೂವರು ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ಸಹಾಯ ಮಾಡುತ್ತಾರೆಯೇ? ಇದು ದೊಡ್ಡ ಪ್ರಶ್ನೆ.