ಹಾರ್ದಿಕ್ ಪಾಂಡ್ಯ ಸಿಎಸ್‌ಕೆ ಸೇರಿಕೊಳ್ಳುತ್ತಾರಾ, ಧೋನಿಯನ್ನು ರೀಲಿಸ್ ಮಾಡುತ್ತಾರೆ ಅನ್ನೋ ಚರ್ಚೆಗಳ ನಡುವೆ ಇದೀಗ ಸಿಎಸ್‌ಕೆ ನಾಲ್ವರು ಕ್ರಿಕೆಟಿಗರ ಟ್ರೇಡ್ ಡೀಲ್ ಫೈನಲ್ ಮಾಡಿದೆ. ಸಿಎಸ್‌ಕೆ ಟ್ರೇಡ್ ಡೀಲ್ ಡಿಟೇಲ್ಸ್ ಇಲ್ಲಿದೆ.

ಚೆನ್ನೈ (ನ.05) ಐಪಿಎಲ್ 2027ರ ಟೂರ್ನಿಗೆ ತಯಾರಿಗಳು ಆರಂಭಗೊಂಡಿದೆ. ತಂಡದಿಂದ ಆಟದಾರರ ರಿಲೀಸ್ ಹಾಗೂ ರಿಟೇನ್ ಮಾಡಿಕೊಳ್ಳುವ ಅಂತಿಮ ಗಡುವು ಸಮೀಪಿಸುತ್ತಿದೆ. ಇತ್ತ ಟ್ರೇಡ್ ಡೀಲ್ ಮೂಲಕ ಫ್ರಾಂಚೈಸಿಗಳು ಒಪ್ಪಂದ ಮಾಡಿಕೊಳ್ಳುತ್ತಿದೆ. ಭಾರಿ ಕುತೂಹಲ ಕೆರಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ಟ್ರೇಡ್ ಡೀಲ್ ಘೋಷಣೆಯಾಗಿದೆ. ಒಟ್ಟು ನಾಲ್ವರು ಕ್ರಿಕೆಟಿಗರ ವಿನಿಮಯ ನಡೆಯುತ್ತಿದೆ. ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಸಿಎಸ್‌ಕೆ ನಡುವಿನ ಟ್ರೇಡ್‌ನಲ್ಲಿ ಪ್ರಮುಖ ನಾಲ್ವರ ತಂಡ ಬದಲಾಗುತ್ತಿದೆ.

ಸಿಎಸ್‌ಕೆ-ಸನ್‌ರೈಸರ್ಸ್ ಬಿಗ್ ಟ್ರೇಡ್ ಡೀಲ್

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ 2017ರ ಐಪಿಎಲ್ ಟೂರ್ನಿಗೆ ಭಾರಿ ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ. ಟ್ರೇಡ್ ಡೀಲ್ ಮೂಲಕ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಆಸ್ಟ್ರೇಲಿಯಾ ಅಲ್‌ರೌಂಡರ್ ಜ್ಯಾಕ್ ಎಡ್ವರ್ಡ್ಸ್ ಟ್ರೇಡ್ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿಕೊಂಡಿದ್ದಾರೆ. ಇತ್ತ ವೇಗಿ ಖಲೀಲ್ ಅಹಮ್ಮದ್ ಹಾಗೂ ಆಸ್ಟ್ರೇಲಿಯಾ ವೇಗಿ ನಥಾನ್ ಎಲ್ಲಿಸ್ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡಿದ್ದಾರೆ.

13ಕೋಟಿಯಿಂದ 6 ಕೋಟಿಗೆ ಕುಸಿದ ಮೊತ್ತ

ಸನ್‌ರೈಸರ್ಸ್ ಹೈದರಾಬಾದ್ ತಂಡ ಕಳೆದ ಬಾರಿ ಐಪಿಎಲ್ ಹರಾಜಿನಲ್ಲಿ ಇಂಗ್ಲೆಂಡ್ ಮೂಲದ ಬ್ಯಾಟರ್ ಲಿವಿಂಗ್‌ಸ್ಟೋನ್ 13 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದರೆ ಈ ವಿನಿಮಯದಲ್ಲಿ ಲಿವಿಂಗ್‌ಸ್ಟನ್ ಭಾರಿ ವೇತನ ಕಡಿತ ಒಪ್ಪಿಕೊಂಡಿದ್ದಾರೆ. 6 ಕೋಟಿ ರೂಪಾಯಿ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿದ್ದಾರೆ.

ಜ್ಯಾಕ್ ಎಡ್ವರ್ಡ್ಸ್: ಆಸ್ಟ್ರೇಲಿಯಾದ ವೇಗದ ಬೌಲಿಂಗ್ ಆಲ್‌ರೌಂಡರ್ ಜ್ಯಾಕ್ ಎಡ್ವರ್ಡ್ಸ್ ತಮ್ಮ ಹಾಲಿ ಒಪ್ಪಂದದ ಬೆಲೆಯಾದ ₹3 ಕೋಟಿಗೆ ಸಿಎಸ್‌ಕೆ ತಂಡಕ್ಕೆ ಪದಾರ್ಪಣೆ ಮಾಡಿದ್ದರೆ. 2026ರ ಆವೃತ್ತಿಗೆ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡ ಜ್ಯಾಕ್ ಖರೀದಿಸಿತ್ತು. ಆದರೆ ಇಂಜುರಿ ಕಾರಣದಿಂದ ಟೂರ್ನಿಯಿಂದ ಹೊರಬಿದ್ದಿದ್ದರು.

ಖಲೀಲ್ ಅಹ್ಮದ್ : 2018 ರಿಂದ 2021 ರವರೆಗೆ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಮಿಂಚಿದ್ದ ಎಡಗೈ ವೇಗಿ ಖಲೀಲ್ ಅಹ್ಮದ್ ಇದೀಗ 4.8 ಕೋಟಿ ರೂಪಾಯಿ ಒಪ್ಪಂದದ ಮೊತ್ತದೊಂದಿಗೆ ಮರಳಿ ತಮ್ಮ ಹಳೆಯ ತಂಡಕ್ಕೆ ಸೇರಿದ್ದಾರೆ. 2025ರ ಹರಾಜಿನಲ್ಲಿ ಸಿಎಸ್‌ಕೆ ಸೇರಿದ ಖಲೀಲ್, ಮೊದಲ ಆವೃತ್ತಿಯಲ್ಲಿ 14 ಪಂದ್ಯಗಳಿಂದ 15 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಆದರೆ 2026ರಲ್ಲಿ ಗಾಯಕ್ಕೆ ತುತ್ತಾಗಿ ಕೇವಲ 5 ಪಂದ್ಯಗಳಿಗೆ ಮಾತ್ರ ಸೀಮಿತಗೊಂಡಿದ್ದರು.

ನಥಾನ್ ಎಲ್ಲಿಸ್: ಆಸ್ಟ್ರೇಲಿಯಾದ ಅನುಭವಿ ಟಿ20 ವೇಗಿ ನಥಾನ್ ಎಲ್ಲಿಸ್ ₹2 ಕೋಟಿ ಮೊತ್ತದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಶವಾಗಿದ್ದಾರೆ. ಡೆತ್ ಓವರ್‌ಗಳಲ್ಲಿ ಸಾಲು ಸಾಲು ವೇರಿಯೇಷನ್‌ಗಳ ಮೂಲಕ ವಿಕೆಟ್ ಕಬಳಿಸುವ ಕೌಶಲ್ಯ ಹೊಂದಿರುವ ಎಲ್ಲಿಸ್, ಗಾಯದಿಂದಾಗಿ 2026ರ ಐಪಿಎಲ್ ಪಂದ್ಯಾವಳಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದರು.