Asianet Suvarna News Asianet Suvarna News

ಡಿ.10ಕ್ಕೆ ಭಾರತ-ಪಾಕಿಸ್ತಾನ ಕ್ರಿಕೆಟ್ ಫೈಟ್, ಏಷ್ಯಾಕಪ್ ಅ-19 ವೇಳಾಪಟ್ಟಿ ಪ್ರಕಟ!

ಮತ್ತೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ದುಬೈನಲ್ಲಿ ಪಂದ್ಯ ನಡೆಯಲಿದೆ. ಹೌದು, ಏಷ್ಯಾಕಪ್ ಅ-19 ಕ್ರಿಕೆಟ್ ವೇಳಾಪಟ್ಟಿ ಪ್ರಕಟಗೊಂಡಿದೆ.
 

ACC announces Asia cup Under 19 schedule India will take Pakistan on Dec 9th ckm
Author
First Published Dec 2, 2023, 7:22 PM IST

ದುಬೈ(ಡಿ.02) ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಿ ಸಂಭ್ರಮಿಸಿದ್ದ ಅಭಿಮಾನಿಗಳಿಗೆ ಇದೀಗ ಮತ್ತೊಂದು ಗುಡ್ ನ್ಯೂಸ್. ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಏಷ್ಯಾಕಪ್ ಅಂಡರ್ 19 ಟೂರ್ನಿ ವೇಳಾಪಟ್ಟಿ ಪ್ರಕಟಗೊಂಡಿದೆ. ಡಿಸೆಂಬರ್ 8 ರಿಂದ ಟೂರ್ನಿ ಆರಂಭಗೊಳ್ಳುತ್ತಿದೆ. ಈ ಬಾರಿ ದುಬೈ ಆತಿಥ್ಯವಹಿಸಿದೆ. ಡಿಸೆಂಬರ್ 10 ರಂದು ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ.

ಏಷ್ಯಾಕಪ್ ಅಂಡರ್ 19 ಟೂರ್ನಿ ವೇಳಾಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಭಾರತ -ಪಾಕಿಸ್ತಾನ ಪಂದ್ಯ ಸವಿಯಲು ಸಜ್ಜಾಗಿದ್ದಾರೆ. 50 ಓವರ್ ಏಕದಿನ ಪಂದ್ಯದ ಏಷ್ಯಾಕಪ್ ಅಂಡರ್ 19 ಟೂರ್ನಿಗೆ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿದೆ. ಡಿಸೆಂಬರ್ 17 ರಂದು ಫೈನಲ್ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಭಾರತ ಇದೀಗ 10ನೇ ಏಷ್ಯಾಕಪ್ ಅ-19 ಟ್ರೋಫಿ ಕೈವಶ ಮಾಡಲು ಸಜ್ಜಾಗಿದೆ.

ವಿಶ್ವಕಪ್ ಸೋಲಿಗೆ ರೋಹಿತ್ ಶರ್ಮಾ- ದ್ರಾವಿಡ್ ವಿಚಾರಣೆ; ಅಸಮಧಾನ ತೋಡಿಕೊಂಡ ಕೋಚ್!

ಡಿಸೆಂಬರ್ 8ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಭಾರತ ಹಾಗೂ ಆಫ್ಘಾನಿಸ್ತಾನ ಹೋರಾಟ ನಡೆಸಲಿದೆ. ಡಿಸೆಂಬರ್ 13ರ ವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿದೆ. ಪ್ರತಿ ದಿನ ಎರಡೆರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಡಿಸೆಂಬರ್ 15 ರಂದು 2 ಸೆಮಿಫೈನಲ್ ಪಂದ್ಯ ಆಯೋಜಿಸಲಾಗಿದ್ದು, ಡಿಸೆಂಬರ್ 17 ರಂದು ಫೈನಲ್ ಪಂದ್ಯ ನಡೆಯಲಿದೆ. 

ಏಷ್ಯಾಕಪ್ ಅ-19 ಟೂರ್ನಿಯಲ್ಲಿ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಹಾಗೂ ಪಾಕಿಸ್ತಾನ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆಫ್ಘಾನಿಸ್ತಾನ ಹಾಗೂ ನೇಪಾಳ ತಂಡ ಕೂಡ ಎ ಗುಂಪಿನಲ್ಲಿದೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಯುಎಇ ಹಾಗೂ ಜಪಾನ್ ಸ್ಥಾನ ಪಡೆದಿದೆ. 

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಈ ಮೂರು ಸವಾಲುಗಳನ್ನ ಮೆಟ್ಟಿ ನಿಲ್ತಾರಾ ಕೆ ಎಲ್ ರಾಹುಲ್..?

ಏಷ್ಯಾಕಪ್ ಅ-19 ವೇಳಾಪಟ್ಟಿ
ಡಿ.8, ಭಾರತ-ಆಫ್ಘಾನಿಸ್ತಾನ
ಡಿ.8, ಪಾಕಿಸ್ತಾನ-ನೇಪಾಳ
ಡಿ.9, ಬಾಂಗ್ಲಾದೇಶ-ಯುಎಇ
ಡಿ.9, ಶ್ರೀಲಂಕಾ-ಜಪಾನ್
ಡಿ.10, ಭಾರತ-ಪಾಕಿಸ್ತಾನ
ಡಿ.10 ಆಫ್ಘಾನಿಸ್ತಾನ-ನೇಪಾಳ
ಡಿ.11, ಶ್ರೀಲಂಕಾ-ಯುಎಇ
ಡಿ.11, ಬಾಂಗ್ಲಾದೇಶ-ಜಪಾನ್
ಡಿ.12, ಪಾಕಿಸ್ತಾನ-ಆಫ್ಘಾನಿಸ್ತಾನ
ಡಿ.12, ಭಾರತ-ನೇಪಾಳ
ಡಿ.13, ಬಾಂಗ್ಲಾದೇಶ-ಶ್ರೀಲಂಕಾ
ಡಿ.13, ಯುಎಇ-ಜಪಾನ್

ಸೆಮಿಫೈನಲ್
ಡಿ.15, ಸೆಮಿಫೈನಲ್ 1
ಡಿ.15, ಸೆಮಿಫೈನಲ್ 2

ಫೈನಲ್
ಡಿ.17, ಫೈನಲ್

ಭಾರತ ಅಂಡರ್ 19 ತಂಡ
ಉದಯ್ ಸಹರಣ್(ನಾಯಕ), ಸೌಮಿ ಕುಮಾರ್ ಪಾಂಡೆ(ಉಪ ನಾಯಕ), ಅರ್ಶಿನಿ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ಧಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಧನುಶ್ ಗೌಡಾ, ಆವಿನಾಶ್ ರಾವ್(ವಿಕೆಟ್ ಕೀಪರ್), ಎಂ ಅಭಿಶೇಕ್, ಇನ್ನೇಶ್ ಮಹಾಜನ್, ಆರ್ಧ್ಯಾ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ  

 

Follow Us:
Download App:
  • android
  • ios