Asianet Suvarna News Asianet Suvarna News

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಈ ಮೂರು ಸವಾಲುಗಳನ್ನ ಮೆಟ್ಟಿ ನಿಲ್ತಾರಾ ಕೆ ಎಲ್ ರಾಹುಲ್..?

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು 2027ರ ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾವನ್ನ ಕಟ್ಟಬೇಕಿದೆ ಬಿಸಿಸಿಐ. ಅದಕ್ಕೂ ಮೊದಲು, ನಾಯಕನನ್ನ ಸರ್ಚ್ ಮಾಡ್ತಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಯಾರು ಟೀಂ ಇಂಡಿಯಾವನ್ನ ಲೀಡ್ ಮಾಡ್ತಾನೋ, ಆತನೇ ಒನ್ಡೇ ವರ್ಲ್ಡ್‌ಕಪ್‌ನಲ್ಲೂ ನಾಯಕನಾಗಿರ್ತಾನೆ. ಅಲ್ಲಿಯವರೆಗೂ ಕ್ಯಾಪ್ಟನ್ ಆಗಿರಬೇಕು ಅಂದ್ರೆ, ರಾಹುಲ್ ಮೂರು ಸವಾಲುಗಳನ್ನ ಮೆಟ್ಟಿ ನಿಲ್ಲಬೇಕು.

3 challenges for KL Rahul if he considered a long term Team India captaincy option kvn
Author
First Published Dec 2, 2023, 1:53 PM IST

ಬೆಂಗಳೂರು(ಡಿ.02) ರಾಹುಲ್  ಕೇವಲ ಸೌತ್ ಆಫ್ರಿಕಾ ಸರಣಿಗೆ ಮಾತ್ರ ಕ್ಯಾಪ್ಟಲ್ ಅಲ್ಲ. ಅವರು ನಾಯಕತ್ವವನ್ನ ಖಾಯಂ ಮಾಡಿಕೊಳ್ಳಲು ಆಫ್ರಿಕಾ ಒಂದು ವೇದಿಕೆ ಅಷ್ಟೆ. ಆಫ್ರಿಕಾದಲ್ಲಿ ರಾಹುಲ್ಗೆ ಟೆಸ್ಟ್ ನಡೆಯಲಿದೆ. ಆ ಟೆಸ್ಟ್‌ನಲ್ಲಿ ಪಾಸ್ ಆದ್ರೆ ಭವಿಷ್ಯದಲ್ಲಿ ಅವರೇ ಒನ್ಡೇ ಕ್ಯಾಪ್ಟನ್.

ರೋಹಿತ್ ಶರ್ಮಾ ವಿಶ್ರಾಂತಿ ಬಯಸಿದಕ್ಕೋ..? ಹಾರ್ದಿಕ್ ಪಾಂಡ್ಯ ಇಂಜುರಿಯಾಗಿದಕ್ಕೋ..? ಗೊತ್ತಿಲ್ಲ, ಕೆ ಎಲ್ ರಾಹುಲ್ ಏಕದಿನ ತಂಡದ ನಾಯಕರಾಗಿದ್ದಾರೆ. ಅದು ಕೇವಲ ಸೌತ್ ಆಫ್ರಿಕಾ ಸರಣಿಗೆ ಮಾತ್ರ ಅಂತಲೂ ಹೇಳೋಕಾಗಲ್ಲ. ಮುಂದುವರೆಯುತ್ತಾರಾ..? ಇಲ್ವಾ..? ಅನ್ನೋದು ಗೊತ್ತಿಲ್ಲ. ಸದ್ಯ ಬಿಸಿಸಿಐ ಸೆಲೆಕ್ಟರ್ಸ್‌ಗಳೇ ಗೊಂದಲದಲ್ಲಿದ್ದಾರೆ.

ಒಂದಂತೂ ಸತ್ಯ. ರಾಹುಲ್‌ಗೆ ಅವಕಾಶ ಸಿಕ್ಕಿದೆ. ಆ ಅವಕಾಶವನ್ನ ಸದ್ಭಳಕೆ ಮಾಡಿಕೊಂಡ್ರೆ ಅವರೇ ಒನ್ಡೇ ಟೀಮ್‌ನ ಪರ್ಮನೆಂಟ್ ಕ್ಯಾಪ್ಟನ್ ಆಗಲಿದ್ದಾರೆ. ಹೌದು, ರೋಹಿತ್ ಶರ್ಮಾ ಅವರ ವೈಟ್ ಬಾಲ್ ಕ್ರಿಕೆಟ್ ಜರ್ನಿ ಬಹುತೇಕ ಕೊನೆ ಘಟ್ಟದಲ್ಲಿದೆ. ಇನ್ನು ಕುಂಗ್ಫು ಪಾಂಡ್ಯ, ಆಡೋದಕ್ಕಿಂತ ಇಂಜುರಿಯಾಗಿ ಹೊರಗುಳಿಯೋದು ಜಾಸ್ತಿ. ಹಾಗಾಗಿ ಸೆಲೆಕ್ಟರ್ಸ್, ರೋಹಿತ್ ಶರ್ಮಾ ಬದಲಿಗೆ ಒನ್ಡೇ ಟೀಮ್ಗೆ ಪರ್ಮನೆಂಟ್ ಕ್ಯಾಪ್ಟನ್ನನ್ನ ಸರ್ಚ್ ಮಾಡ್ತಿದ್ದಾರೆ. ಸದ್ಯಕ್ಕೆ ಅವರಿಗೆ ರಾಹುಲ್ ಬೆಸ್ಟ್ ಚಾಯ್ಸ್ ಅನಿಸಿದ್ದು, ಆಫ್ರಿಕಾ ಸಿರೀಸ್ಗೆ ಕ್ಯಾಪ್ಟನ್ ಮಾಡಿದ್ದಾರೆ.

ಕಿವೀಸ್ ಎದುರು ತವರಿನಲ್ಲಿ ಐತಿಹಾಸಿಕ ಟೆಸ್ಟ್ ಗೆಲುವು ದಾಖಲಿಸಿದ ಬಾಂಗ್ಲಾದೇಶ

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು 2027ರ ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾವನ್ನ ಕಟ್ಟಬೇಕಿದೆ ಬಿಸಿಸಿಐ. ಅದಕ್ಕೂ ಮೊದಲು, ನಾಯಕನನ್ನ ಸರ್ಚ್ ಮಾಡ್ತಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಯಾರು ಟೀಂ ಇಂಡಿಯಾವನ್ನ ಲೀಡ್ ಮಾಡ್ತಾನೋ, ಆತನೇ ಒನ್ಡೇ ವರ್ಲ್ಡ್‌ಕಪ್‌ನಲ್ಲೂ ನಾಯಕನಾಗಿರ್ತಾನೆ. ಅಲ್ಲಿಯವರೆಗೂ ಕ್ಯಾಪ್ಟನ್ ಆಗಿರಬೇಕು ಅಂದ್ರೆ, ರಾಹುಲ್ ಮೂರು ಸವಾಲುಗಳನ್ನ ಮೆಟ್ಟಿ ನಿಲ್ಲಬೇಕು.

ಫಿಟ್ನೆಸ್ ಕಾಪಾಡಿಕೊಳ್ಳಬೇಕಿದೆ ಕನ್ನಡಿಗ ರಾಹುಲ್

ಕೆ ಎಲ್ ರಾಹುಲ್ ಇಂಟರ್ ನ್ಯಾಷನಲ್ ಕ್ರಿಕೆಟ್‌ಗೆ ಡೆಬ್ಯು ಮಾಡಿ ಬರೋಬ್ಬರಿ 9 ವರ್ಷವಾಗಿದೆ. ಆದ್ರೂ ಈ 9 ವರ್ಷದಲ್ಲಿ ಅವರು ಆಡಿದಕ್ಕಿಂತ ಹೊರಗುಳಿದಿದ್ದೇ ಹೆಚ್ಚು. ಮೂರು ಮಾದರಿಯಲ್ಲಿ ಆಡುತ್ತಿದ್ದರೂ ಯಾವ್ದೇ ಫಾಮ್ಯಾಟ್ನಲ್ಲೂ ನೂರಕ್ಕೂ ಅಧಿಕ ಮ್ಯಾಚ್ ಆಡೇ ಇಲ್ಲ. ಕಾರಣ, ಪದೇ ಪದೆ ಇಂಜುರಿ. ಈಗ ನಾಯಕತ್ವ ಸಿಗಬೇಕು ಅಂದ್ರೆ ಮೊದಲು ಫಿಟ್ನೆಸ್ ಸಾಧಿಸಬೇಕು. ಸದಾ ಫಿಟ್ ಆಗಿದ್ದರೆ ಮಾತ್ರ ನಾಯಕತ್ವಕ್ಕೆ ಪರಿಗಣಿಸಲಾಗುತ್ತೆ.

Vijay Hazare Trophy ದೇವದತ್ ಪಡಿಕ್ಕಲ್ ಮತ್ತೊಂದು ಶತಕ, ರಾಜ್ಯಕ್ಕೆ ಸತತ 5ನೇ ಗೆಲುವು

ವಿಕೆಟ್ ಹಿಂದೆ ಮುಂದೆ ಉತ್ತಮ ಪ್ರದರ್ಶನ ನೀಡ್ಬೇಕು..! 

ಯೆಸ್, ಫಿಟ್ನೆಸ್ ಜೊತೆ ರಾಹುಲ್ ವಿಕೆಟ್ ಹಿಂದೆ ಮುಂದೆ ಉತ್ತಮ ಪ್ರದರ್ಶನ ನೀಡಲೇಬೇಕು. ಒನ್ಡೇಯಲ್ಲಿ ಕೀಪಿಂಗ್ ಮಾಡುವ ರಾಹುಲ್, ವರ್ಲ್ಡ್ಕಪ್ನಲ್ಲಿ ವಿಕೆಟ್ ಹಿಂದೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕ್ಯಾಚ್, ಸ್ಟಂಪಿಂಗ್, ಡಿಆರ್ಎಸ್ ತೆಗೆದುಕೊಳ್ಳೋದ್ರಲ್ಲಿ ಇನ್ನಷ್ಟು ಪಂಟರ್ ಆಗಬೇಕು. ಹಾಗೆ ಬ್ಯಾಟಿಂಗ್ನಲ್ಲೂ ಅಗ್ರಸ್ಸೀವ್ ಆಗಿ ಆಡಬೇಕು. ನಾಯಕನಿಗೆ ತಕ್ಕ ಆಟವಾಡಿ ತಂಡದ ಗೆಲುವಿಗೆ ಕಾರಣೀಕರ್ತನಾಗಬೇಕು. ಆಗ ಮಾತ್ರ ನಾಯಕತ್ವಕ್ಕೆ ರಾಹುಲ್ನನ್ನ ಸದಾ ಪರಿಗಣಿಸಬಹುದು.

ಒನ್ಡೇಯಲ್ಲಿ ಟೀಂ ಇಂಡಿಯಾವನ್ನ ಯಶಸ್ವಿಯಾಗಿ ಮುನ್ನಡೆಸಬೇಕು

ರಾಹುಲ್ ತಾನಾಡಿದ್ರೆ ಸಾಕಾಗಲ್ಲ. ತಾನು ಆಡೋದ್ರ ಜೊತೆ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಬೇಕು. ಈಗಾಗಲೇ 9 ಒನ್ಡೇ ಮ್ಯಾಚ್ನಲ್ಲಿ ಟೀಂ ಇಂಡಿಯಾ ಲೀಡ್ ಮಾಡಿರೋ ರಾಹುಲ್, 6 ಗೆಲ್ಲಿಸಿ, 3 ಸೋಲಿಸಿದ್ದಾರೆ. ಮೂರು ಟೆಸ್ಟ್ ಮತ್ತು ಒಂದು ಟಿ20ಯಲ್ಲೂ ನಾಯಕರಾಗಿದ್ದರು. ಐಪಿಎಲ್ನಲ್ಲೂ ಕ್ಯಾಪ್ಟನ್ ಆಗಿದ್ದಾರೆ. ಈ ಎಲ್ಲಾ ಅನುಭವದಿಂದ ಟೀಂ ಇಂಡಿಯಾವನ್ನ ಉತ್ತಮವಾಗಿ ಮುನ್ನಡೆಬೇಕು. ಆಗ ಮಾತ್ರ ರಾಹುಲ್ಗೆ ಒನ್ಡೇ ಕ್ಯಾಪ್ಟನ್ಸಿ ಪರ್ಮನೆಂಟ್ ಆಗೋದು.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

Follow Us:
Download App:
  • android
  • ios