Asianet Suvarna News Asianet Suvarna News

ಕೊರೋನಾ ಭೀತಿ; ಮೇಲುಕೋಟೆ ವೈರಮುಡಿ ಉತ್ಸವ ಮುಂದೂಡಲು ಗ್ರಾಮಸ್ಥರ ಒತ್ತಾಯ!

ಕೊರೋನಾ ವೈರಸ್‌ನಿಂದಾಗಿ ಸಂಪೂರ್ಣ ಭಾರತವೇ ಲಾಕ್‌ಡೌನ್ ಆಗಿದೆ. ಎಲ್ಲಾ ಕಾರ್ಯಕ್ರಮಗಳ, ಉತ್ಸವಗಳು ರದ್ದಾಗಿದೆ. ಆದರೆ ಮಂಡ್ಯದ ಮೇಲುಕೋಟೆ ವೈರಮುಜಿ ಉತ್ಸವ ಕುರಿತು ಇನ್ನು ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ. ಇದೀಗ ವೈರಮುಡಿ ಉತ್ಸವ ಮುಂದೂಡಲು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Coroanvirus Villagers demand postponement of Melukote Vairamudi festival in Mandya
Author
Bengaluru, First Published Mar 27, 2020, 7:16 PM IST

ಮಂಡ್ಯ(ಮಾ.27) : ಕೊರೊನ ಭೀತಿಯಿಂದಾಗಿ ರಾಜ್ಯದೆಲ್ಲೆಡೆ ಸಂತೆ, ಜಾತ್ರೆ ಹಾಗೂ ದೇವರ ಉತ್ಸವಗಳನ್ನು ಸರ್ಕಾರವೇ ಒಂದೆಡೆ ಮುಂದೂಡುತ್ತಿದೆ. ಮತ್ತೊಂದೆಡೆ ಮೇಲುಕೋಟೆ ವೈರಮುಡಿ ಉತ್ಸವವನ್ನು ಮುಂದೂಡುವಂತೆ ಗ್ರಾಮಸ್ಥರು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. 

ಯುಗಾದಿ ನಂತ್ರ ದಿಢೀರ್ ಹೆಚ್ಚಿದ ಶಂಕಿತರ ಸಂಖ್ಯೆ: ಮೈಸೂರಿನಲ್ಲಿ 1122 ಮಂದಿ ಮೇಲೆ ನಿಗಾ..

ಮೇಲುಕೋಟೆ ವೈರಮುಡಿ ಉತ್ಸವವನ್ನು ಸಾಂಕೇತಿಕ ಮತ್ತು ಸಂಪ್ರದಾಯವಾಗಿ ಆಚರಿಸಿದರೂ ಸಹ ಆ ಸಂದರ್ಭದಲ್ಲಿ 100ಕ್ಕಿಂತ ಹೆಚ್ಚು ಜನರು ಸೇರುತ್ತಾರೆ. ಇದು ಕೂಡ 144 ಉಲ್ಲಂಘನೆಯಾಗಲಿದೆ. ಹೀಗಾಗಿ ಏಪ್ರಿಲ್ 2 ರಂದು ನಡೆಯಲಿರುವ ಸಾಂಕೇತಿಕ ಕಿರೀಟಧಾರಣೆ ಮಹೋತ್ಸವ ಸೇರಿದಂತೆ ಮಾರ್ಚ್ 28ರಂದು ಆರಂಭಗೊಳ್ಳುವ ಇಡೀ ವೈರಮುಡಿ ಜಾತ್ರಾಮಹೋತ್ಸವ ಮುಂದೂಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕೊರೋನಾ ಕಾಟ: 110 ಗ್ರಾಮಗಳಲ್ಲಿ ಬೇರೆ ಊರಿನ ಜನರಿಗೆ ನಿಷೇಧ.

ಈ ಸಂಬಂಧ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರವನ್ನು ಮೇಲುಕೋಟೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ನಾಗರೀಕರು ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ಶುಕ್ರವಾರ ಬೆಳಗ್ಗೆ ಸಲ್ಲಿಸಿದರು. 

ದೇವಾಲಯ ಅನುಸರಿಸುತ್ತಿರುವ ಪೂಜಾ ಪದ್ಧತಿ ಈಶ್ವರ ಸಂಹಿತೆಯ ಪುಟ ಸಂಖ್ಯೆ 633 ಮತ್ತು 644 ರ ಪ್ರಕಾರ ಕ್ಷಾಮ ಹಾಗೂ ಸಂಕಷ್ಟದ ಸಮಯದಲ್ಲಿ ನಿಗದಿತ ಬ್ರಹ್ಮೋತ್ಸವವನ್ನು ಮುಂದೂಡಲು ಅವಕಾಶ ನೀಡಲಾಗಿದೆ. ಹೀಗಾಗಿ ವೈರಮುಡಿ ಉತ್ಸವವನ್ನು ಮುಂದೂಡಲು ಯಾವುದೇ ನಿರ್ಬಂಧಗಳಿಲ್ಲ. ಇದರಿಂದ ಮಾರ್ಚ್ 28 ರಿಂದ ಆರಂಭಗೊಳ್ಳಬೇಕು ಆಗಿರುವ ಇಡೀ ವೈರಮುಡಿ ಬ್ರಹ್ಮೋತ್ಸವ ವನ್ನು ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ.
 

Follow Us:
Download App:
  • android
  • ios