Asianet Suvarna News Asianet Suvarna News

ಕೊರೋನಾ ವ್ಯಾಪಕವಾಗಿ ಹರಡುತ್ತಿರುವ 15 ಜಿಲ್ಲೆ ಸಂಪೂರ್ಣ ಬಂದ್, ಯಾವ ಸೇವೆಯೂ ಲಭ್ಯವಿಲ್ಲ!

ಕೊರೋನಾ ವೈರಸ್ ಪ್ರತಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಭಾರತ ಲಾಕ್‌ಡೌನ್ ಆಗಿದ್ದರೂ ಕೆಲ ಅಗತ್ಯ ಸೇವೆಗಳು ಲಭ್ಯವಿದೆ. ಆದರೆ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಜಿಲ್ಲೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ. ಇದೀಗ ಉತ್ತರ ಪ್ರದೇಶದ 15 ಜಿಲ್ಲೆಗಳನ್ನು ಸರ್ಕಾರ ಸೀಝ್ ಮಾಡಿದೆ.

Uttar pradesh govt seals 15 districts to contain coronavirus
Author
Bengaluru, First Published Apr 9, 2020, 6:27 PM IST

ಉತ್ತರ ಪ್ರದೇಶ(ಏ.09): ಕೊರೋನಾ ವೈರಸ್ ಹರಡದಂತೆ ತಡೆಯಲ ಸಾಮಾಜಿಕ ಅಂತರ ಒಂದೇ ಮದ್ದು. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಭಾರತವನ್ನು 21 ದಿನಗಳ ಕಾಲ ಲಾಕ್‌ಡೌನ್ ಮಾಡಿದ್ದಾರೆ. ಆದರೆ ಹಲವರು ಅಗತ್ಯ ವಸ್ತು ಖರೀದಿ ತುರ್ತು ಸೇವೆ ಹೆಸರಿನಲ್ಲಿ ಅನವಶ್ಯಕವಾಗಿ ಓಡಾಡುತ್ತಿದ್ದಾರೆ. ಇದರಿಂದ ವೈರಸ್ ಮತ್ತಷ್ಟು ಹೆಚ್ಚಾಗುತ್ತಿದೆ. ಇದೀಗ ವೈರಸ್ ಹಾಟ್‌ಸ್ಪಾಟ್‌ ಎಂದೇ ಗುರಿಯಾಗಿರುವ ಉತ್ತರ ಪ್ರದೇಶದ 15 ಜಿಲ್ಲೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಕೊರೋನಾ ಯುದ್ಧಕ್ಕೆ ರೆಡಿಯಾದ ಭಾರತೀಯ ವಾಯುಸೇನೆಗೆ ಸಲಾಂ!..

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ  ನಿರ್ಧಾರ ತೆಗೆದುಕೊಂಡಿದ್ದಾರೆ. ಹೀಗಾಗಿ ಸರ್ಕಾರ ಗುರುತಿಸಿರುವ 15 ಜಿಲ್ಲೆಗಳ ಸಂಪೂರ್ಣ ಬಂದ್ ಆದೇಶ ಏಪ್ರಿಲ್ 15ರ ವರೆಗೆ ಮುಂದುವರಿಯಲಿದೆ. ಬಳಿಕ ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಯೋಗಿ ಸರ್ಕಾರ ಮುಂದಾಗಿದೆ. ಉತ್ತರ ಪ್ರದೇಶ ಸರ್ಕಾರ ಸಂಪೂರ್ಣವಾಗಿ ಬಂದ್ ಮಾಡಿರುವ ಜಿಲ್ಲೆಗಳ ವಿವರ ಇಲ್ಲಿದೆ.

ಒಡಿಶಾದಲ್ಲಿ ಏ.30ರವರೆಗೆ ಲಾಕ್‌ಡೌನ್, ಜೂನ್‌ 17ರವರೆಗೆ ಶಾಲೆ ಬಂದ್!...
 

  • ಲಕ್ನೋ
  • ನೋಯ್ಡಾ
  • ಘಾಜಿಯಾಬಾದ್
  • ಸೀತಾಪುರ್
  • ಕಾನ್ಪುರ್
  • ಆಗ್ರಾ
  • ಫಿರೋಝಾಬಾದ್
  • ಬರೇಲಿ
  • ಮೀರತ್
  • ಶಾಮ್ಲಿ
  • ಶಹರಾನ್ಪುರ್
  • ಬುಲಂದ್‌ಶಹರ್
  • ವಾರಾಣಸಿ
  • ಮಹರಾಜ್‌ಗಂಜ್
  • ಬಸ್ತಿ

ಇದರ ಜೊತೆಗೆ ಸರ್ಕಾರ ಕೆಲ ನಗರಗಳನ್ನು ವೈರಸ್ ಹಾಟ್‌ಸ್ಪಾಟ್ ಎಂದು ಗುರುತಿಸಿದೆ. ಈ ಜಿಲ್ಲೆ ಹಾಗೂ ನಗರಗಳ ಕುರಿತು ಹೆಚ್ಚಿನ ಗಮನಹರಿಸಲು ನಿರ್ಧರಿಸಿದೆ. ನಗರಗಳ  ಕೆಲ ಪ್ರದೇಶಗಳನ್ನೂ ವೈರಸ್ ಹರಡುವ ಹಾಟ್‌ಸ್ಪಾಟ್ ಎಂದು ಗುರತಿಸಿದೆ.  ಆಗ್ರಾದ 22 ಕಡೆಗಳಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಘಾಜಿಯಾಬಾದ್‌ನ 13, ಗೌತಮ್ ಬುದ್ದ ನಗರ ಹಾಗೂ ಕಾನ್ಪುರದಲ್ಲಿ 12, ವಾರಾಣಸಿ 4, ಶಾಮ್ಲಿಯ 3 , ಮೀರತ್‌ನ 3, ಬಸ್ತಿ ಹಾಗೂ ಫಿರೋಜಾಬಾದ್‌ನ 1  ಪ್ರದೇಶವನ್ನು ಕೊರೋನಾ ಹಾಟ್‌ಸ್ಪಾಟ್ ಎಂದು ಗುರುತಿಸಿಲಾಗಿದೆ.

Follow Us:
Download App:
  • android
  • ios