ಮುಂಬೈ (ಏ.05): ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಕುಮಾರ್‌ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಬಗ್ಗೆ ಟ್ವೀಟ್ ಮೂಲಕ ವಿಷಯ ತಿಳಿಸಿದ್ದರು. ಅಕ್ಷಯ ಕುಮಾರ್ ತಮ್ಮ ಹೊಸ ಚಿತ್ರ ರಾಮಸೇತು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಅಲ್ಲದೇ ಮುಂಬೈನಲ್ಲಿರುವ ಮಧ್ ಐಲೆಂಡ್‌ನಲ್ಲಿ 100 ಸಹ ಕಲಾವಿದರೊಂದಿಗೆ ಚಿತ್ರೀಕರಣ ಮುಂದುವರೆಸಬೇಕಿತ್ತು. ಹಾಗಾಗಿ ಚಿತ್ರದ ನಿರ್ದೇಶಕ ವಿಕ್ರಮ್ ಮಲೋತ್ರಾ ಸೆಟ್‌ಗೆ ಬರುವ ಎಲ್ಲರಿಗೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದ್ದರು. ಹಾಗಾಗಿ ಎಲ್ಲಾ ನೂರು ಕಿರಿಯ ಕಲಾವಿದರೂ ಪರೀಕ್ಷೆಗೆ ಒಳಗಾಗಿದ್ದರು. ಅದರಲ್ಲಿ 45 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ. 

ಮಾಸ್ಕ್ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ್ದ ನಟ ಅಕ್ಷಯ್ ಕುಮಾರ್‌ಗೆ ಕೊರೋನಾ ಪಾಸಿಟಿವ್ 

ಭಾವಿವಾರ ಅಕ್ಷಯ ಕುಮಾರ್ ಟ್ವೀಟ್ ಮಾಡಿ, 'ನನಗೆ ಕೋರೊನಾ ಸೋಂಕು ದೃಢಪಟ್ಟಿದೆ. ನಾನು ಐಸೋಲೆಟ್ ಆಗಿದ್ದೇನೆ ಅಲ್ಲದೇ ಎಲ್ಲ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಮನೆಯಲ್ಲಿಯೇ ಕ್ವಾರೈಂಟನ್ ಆಗಿದ್ದೇನೆ. ನನ್ನ ಸಂಪರ್ಕದಲ್ಲಿ ಬಂದವರೆಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಕಾಳಜಿ ವಹಿಸಿ,ʼ ಎಂದು ಹೇಳಿದ್ದರು.

ಇತ್ತಿಚೀಗೆ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳಿಗೆ ಕೊರೊನಾ ಸೋಂಕು ದೃಟಪಟ್ಟಿತ್ತು. ಅಮಿರ್ ಖಾನ್, ಕಾರ್ತಿಕ್ ಆರ್ಯನ್, ಆರ್. ಮಾಧವನ್, ಆಲಿಯಾ ಭಟ್, ರಣಬೀರ್ ಕಪೂರ್, ಕೃತಿ ಸನನ್ ಸೇರಿದಂತೆ ಹಲವರಿಗೆ ಸೋಂಕು ತಗುಲಿದ್ದು, ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಈ ಪಟ್ಟಿಗೆ ಅಕ್ಷಯ್ ಕುಮಾರ್ ಹಾಗೂ ರಾಮಸೇತು ಚಿತ್ರ ತಂದವೂ ಸೇರಿಕೊಂಡಿಡೆ. ಮಾರ್ಚ್ 18ರಂದು ಅಕ್ಷಯ ಕುಮಾರ್, ಬಾಲಿವುಡ್ ನಟಿಯರಾದ ನಶ್ರುತ್ ಬರುಚಾ ಮತ್ತು ಜ್ಯಾಕ್ವಲೀನ್ ಫರ್ನಾಂಡಿಸ್ ಜೊತೆಗೆ ರಾಮಸೇತು ಚಿತ್ರದ ಮುಹೂರ್ತಕ್ಕಾಗಿ ಉತ್ತರ ಪ್ರದೇಶದ ಅಯೋಧ್ಯೆಗೆ ತೆರಳಿದ್ದರು. ಅಯೋಧ್ಯೆಯ ರಾಮ ಮಂದಿರದಲ್ಲಿ ಸಂಪೂರ್ಣ ಚಿತ್ರ ತಂಡ ರಾಮನ ಆಶೀರ್ವಾದ ಪಡೆದುಕೊಂಡಿತ್ತು. ಈ ಬಗ್ಗೆ ಕೂಡ ಟ್ವೀಟ್ ಮಾಡಿದ್ದ ಅಕ್ಷಯ ಕುಮಾರ್ ಜೈ ಶ್ರೀರಾಮ್ ಎಂದು ಬರೆದುಕೊಂಡಿದ್ದರು.

ಬಾಲಿವುಡ್ ನಟಿ ಆಲಿಯಾ ಭಟ್‌ಗೆ ಕೊರೋನಾ ಪಾಸಿಟಿವ್!

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಬಾಲಿವುಡ್ ಮಂದಿಗೆ ಕೋರೊನಾ ಸೋಂಕು ಸಾಮಾನ್ಯವಾಗಿದೆ. ಏ.1ರಂದು ಮಹಾರಾಷ್ಟ್ರದಲ್ಲಿ 57,074 ಕೊರೋನಾ ಹೊಸ ಪ್ರಕರಣಗಳು ವರದಿಯಾಗಿವೆ. ಒಂದೇ ದಿನ 222 ಜನ ಕೊರೋನಾಗೆ ಬಲಿಯಾಗಿದ್ದಾರೆ.