Asianet Suvarna News Asianet Suvarna News

ರಾತ್ರಿ 8.30ಕ್ಕೆ ಜನತೆಯನ್ನುದ್ದೇಶಿ ಸಿಎಂ ಭಾಷಣ; ಮಹಾರಾಷ್ಟ್ರದಲ್ಲಿ ಮತ್ತೊಂದು ಲಾಕ್‌ಡೌನ್?

ಕೊರೋನಾ ವೈರಸ್ ಮಿತಿ ಮೀರುತ್ತಿದೆ. 2ನೇ ಅಲೆ ಭೀತಿ ಎದುರಾಗಿದೆ. ಈಗಾಗಲೇ ಪ್ರತಿ ರಾಜ್ಯದಲ್ಲೂ ಗರಿಷ್ಠ ಕೊರೋನಾ ಪ್ರಕರಣಗಳು ದಾಖಲಾಗುತ್ತಿದೆ. ಇದರ ನಡುವೆ ಇದೀಗ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಜನತೆಯನ್ನುದ್ದೇಶಿ ಭಾಷಣ ಮಾಡಲಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Spike in COVID 19 cases Maharashtra cm Uddhav Thackeray will address people 8 30 pm today ckm
Author
Bengaluru, First Published Apr 2, 2021, 3:06 PM IST

ಮುಂಬೈ(ಎ.02): ದೇಶದಲ್ಲಿ ಗರಿಷ್ಠ ಕೊರೋನಾ ಪ್ರಕರಣಗಳ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಮುಂಬೈ, ಪುಣೆ, ಔರಂಗಾಬಾದ್ ಸೇರಿದಂತೆ ಮಹಾರಾಷ್ಟ್ರದ ಬಹುತೇಕ ಕಡೆ ಕೊರೋನಾ ಗಣನೀಯವಾಗಿ ಏರಿಕೆಯಾಗಿದೆ. ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡರೂ ಸೋಂಕಿನ ಪ್ರಮಾಣ ತಗ್ಗಿಲ್ಲ. ತುರ್ತು ಸಭೆ ನಡೆಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು (ಎ.02) ಭಾಷಣ ಮಾಡಲಿದ್ದಾರೆ.

ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಮಿತಿ ಮೀರಿದ ಕೊರೋನಾ; ಆರೋಗ್ಯ ಇಲಾಖೆ ವಾರ್ನಿಂಗ್!.

ಕೊರೋನಾ ನಿಯಂತ್ರಣ ಹಾಗೂ ಸರ್ಕಾರದ ಮುಂದಿನ ನಡೆ ಕುರಿತು ಉದ್ಧವ್ ಠಾಕ್ರೆ ರಾತ್ರಿ 8.30ಕ್ಕೆ ಭಾಷಣ ಮಾಡಲಿದ್ದಾರೆ. ಮುಖ್ಯಮಂತ್ರಿ ಕಾರ್ಯಾಲಯದಿಂದ ಭಾಷಣ ಮಾಹಿತಿ ಹೊರಬೀಳುತ್ತಿದ್ದಂತೆ ಇದೀಗ ಮಹಾರಾಷ್ಟ್ರದಲ್ಲಿ ಆತಂಕ ಎದುರಾಗಿದೆ. ಕೊರೋನಾ ನಿಯಂತ್ರಣಕ್ಕೆ ಮತ್ತೊಮ್ಮೆ ಲಾಕ್‌ಡೌನ್ ಹೇರಲಾಗುತ್ತಾ ಅನ್ನೋ ಚರ್ಚೆ ಜೋರಾಗಿದೆ.

ನಾಗ್ಪುರ ಆಸ್ಪತ್ರೆಯಲ್ಲಿ 1 ಬೆಡ್‌ಗೆ ಇಬ್ಬರು ಕೊರೋನಾ ಪೇಶಂಟ್‌!.

ಇದರ ನಡುವೆ ಮುಂಬೈ ಪಾಲಿಕೆ ಮೇಯರ್ ಕಿಶೋರಿ ಪೆಡ್ನೇಕರ್ ಮಹತ್ವದ ಮಾಹಿತಿ ನೀಡಿದ್ದಾರೆ. ಇಂದಿನಿಂದ(ಎಪ್ರಿಲ್ 2) ಮಹಾರಾಷ್ಟ್ರದಲ್ಲಿ ಕಟ್ಟು ನಿಟ್ಟಿನ ಕೊರೋನಾ ನಿಯಮ ಜಾರಿಗಾಯಲಿದೆ. ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಸೋಂಕಿತರಿಗೆ ಬೆಡ್, ವಾರ್ಡ್, ಸೂಕ್ತ ಚಿಕಿತ್ಸೆ, ಪರೀಕ್ಷೆ ಕುರಿತು ಸಿಎಂ ಚರ್ಚೆ ನಡೆಸಿದ್ದಾರೆ. ಮುಂದಿನ ನಿರ್ಧಾರ ಕುರಿತು ಠಾಕ್ರೆ ಘೋಷಣೆ ಮಾಡಲಿದ್ದಾರೆ ಎಂದು ಪೆಡ್ನೇಕರ್ ಹೇಳಿದ್ದಾರೆ.

ಅನ್‌ಲಾಕ್ ಆರಂಭದ ಬಳಿಕ ಕೊರೋನಾ ಮಾರ್ಗಸೂಚಿ ಪಾಲಿಸಲು ಹೇಳಿದ್ದೇವೆ. ಆದರೆ ಜನರು ನಿರ್ಲಕ್ಷ್ಯವಹಿಸಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಇದೀಗ ಹೆಚ್ಚುತ್ತಿರುವ ಕೊರೋನಾ ನಿಯಂತ್ರಣಕ್ಕೆ ಕಠಿಣ ನಿರ್ಧಾರ ಅಗತ್ಯ ಎಂದು ಪೆಡ್ನೇಕರ್ ಸೂಚಿಸಿದ್ದಾರೆ.

ಜಮ್ಮು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾಗೆ ಕೊರೋನಾ

ಧಾರ್ಮಿಕ ಕೇಂದ್ರಗಳನ್ನು ಸಂಪೂರ್ಣ ಮುಚ್ಚವು ಸಾಧ್ಯತೆ ಇದೆ. ಹೊಟೆಲ್ , ಕಚೇರಿಗಳಲ್ಲಿ ಶೇಕಡಾ 50 ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಲು ಸೂಚಿಸುವ ಕುರಿತು ಚರ್ಚಿಸಲಾಗಿದೆ. ರೈಲು ಪ್ರಯಾಣಕ್ಕೂ ನಿರ್ಬಂಧ ಸೇರಿದಂತೆ ಹಲವು ನಿರ್ಬಂಧಗಳು ಜಾರಿಯಾಗುವ ಸಾಧ್ಯತೆ ಇದೆ ಎಂದು ಪೇಡ್ನೇಕರ್ ಹೇಳಿದ್ದಾರೆ.

Follow Us:
Download App:
  • android
  • ios