ಕೊರೋನಾ ಯುದ್ಧಕ್ಕೆ ರೆಡಿಯಾದ ಭಾರತೀಯ ವಾಯುಸೇನೆಗೆ ಸಲಾಂ!

First Published 9, Apr 2020, 5:58 PM

ದೇಶದಲ್ಲಿನ ಕೊರೋನಾ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು, ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರು ಪ್ರತಿಯೊಬ್ಬರೂ ಶ್ರಮಿಸುತ್ತಿದ್ದಾರೆ.ಈ ನಿಟ್ಟಿನಲ್ಲಿ ನಮ್ಮ ಸೈನ್ಯವು ರೆಡಿಯಾಗಿದೆ. ಕೊರೋನಾ ವಿರುದ್ಧ ಯುದ್ಧಕ್ಕೆ ವಾಯು ಪಡೆ ಸಹಾಯಮಾಡಲು ಮುಂದಾಗಿದೆ. ವಾಯು ಪಡೆಯು ತನ್ನ ಸರಕು ವಿಮಾನಗಳು, ಹೆಲಿಕಾಪ್ಟರ್‌ಗಳಿಂದ ದೇಶದ ಒಂದು ಕಡೆಯಿಂದ, ಇನ್ನೊಂದು ಕಡೆಗೆ ಅಗತ್ಯ ವಸ್ತುಗಳನ್ನು ಸಾಗಿಸುತ್ತಿದೆ. ವೈದ್ಯರೂ ಅಗತ್ಯ ಬಿದ್ದರೆ ಸಹಾಯ ನೀಡಲು ತಯಾರಾಗಿದ್ದಾರೆ. ಕಷ್ಟ ಪರಿಸ್ಥಿತಿಯಲ್ಲಿ ಸದಾ ಸಾಥ್‌ ನೀಡುವ ವಾಯುಪಡೆಯು ಕರೋನಾ ವಿರುದ್ಧ #HarKaamDeshKeNaam ಸರಿನಲ್ಲಿ ಯುದ್ಧಕ್ಕೆ ರೆಡಿಯಾಗಿದೆ.

ಭಾರತದಲ್ಲಿ ಹೆಚ್ಚುತ್ತಿರುವ ಕೊರೋನಾದ ಕಾಟದಿಂದ ಹೆಚ್ಚು ನೆರವಿನ ಅಗತ್ಯವಿದೆ. ಅದಕ್ಕೆ ಸೈನ್ಯಗಳಿಂದ ಸಹಾಯವನ್ನು ಪಡೆಯಲು ಗೃಹ ಸಚಿವ ರಾಜನಾಥ್ ಸಿಂಗ್ ಅವರೇ ಸ್ವತಃ ಪರಿಶೀಲಿಸಿದ್ದಾರೆ.

ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸಲು ಸಿದ್ಧವಾಗಿರುವ ವಾಯುಪಡೆಯ ವಿಮಾನಗಳು.

ಯಾವುದೇ ರೀತಿಯ ತುರ್ತು ಪರಿಸ್ಥಿತಿಗೆ ಸಂಪೂರ್ಣ ಸಿದ್ಧರಾಗಿದ್ದಾರೆ ಸೈನ್ಯದ 8,500 ವೈದ್ಯರು.

ಎಂಥದ್ದೇ ತುರ್ತು ಪರಿಸ್ಥಿತಿಯಲ್ಲಿಯೂ ಕಾರ್ಯ ನಿರ್ವಹಿಸಲು ಸಿದ್ಧವಾಗಿರುತ್ತದೆ ನಮ್ಮ ಸೇನೆ. 

ಸೈನ್ಯದ ನಿವೃತ್ತ ಆರೋಗ್ಯ ವೃತ್ತಿಪರರೂ ಸಹಾಯಕ್ಕೆ ಸಿದ್ಧರಾಗಿರುವಂತೆ ಕೋರಲಾಗಿದೆ. ಇದಲ್ಲದೆ ನಾಗರಿಕ ಆಡಳಿತಕ್ಕೆ ಸಹಾಯ ಮಾಡಲು ಎನ್‌ಸಿಸಿಯ 25 ಸಾವಿರ ಕೆಡೆಟ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ.

ಭಾರತೀಯ ವಾಯುಸೇನೆದ 02 AN ಸಾರಿಗೆ ವಿಮಾನವು ಏಪ್ರಿಲ್ 6 ರಂದು ವೈದ್ಯಕೀಯ ಉಪಕರಣಗಳು ಮತ್ತು ಸೌಲಭ್ಯಗಳ ಸ್ಥಾಪನೆಗಾಗಿ ತಂಬರಂನಿಂದ ಭುವನೇಶ್ವರಕ್ಕೆ ಸಾಮಗ್ರಿಗಳನ್ನು ಸಾಗಿಸಿತು.

ಒಡಿಶಾದ ಐಸಿಎಂಆರ್ ಲ್ಯಾಬ್ ಅನ್ನು ಸುಗಮಗೊಳಿಸಿ ಜನರಿಗೆ ಸಹಾಯ ಮಾಡಿತು. ವಾಯುಪಡೆಯು ತಕ್ಷಣ ಜನರು ಮತ್ತು ವೈದ್ಯಕೀಯ ಉಪಕರಣಗಳನ್ನು ಸಾಗಿಸಿತು.

ಬಾಗ್ದೋಗ್ರಾದಿಂದ ಗ್ಯಾಂಗ್ಟಾಕ್‌ಗೆ ಸರಕುಗಳನ್ನು ತಲುಪಿಸಿದ Mi17V5 ಚಾಪರ್.

ಕರಾವಳಿ ಪ್ರದೇಶಗಳಲ್ಲಿ ಅಗತ್ಯವಿದ್ದಾಗ ದೊಡ್ಡ ಪ್ರಮಾಣದ ಸರಕುಗಳನ್ನು ಪೂರೈಸಲು ಸಹಾಯವಾಗುವಂತೆ ನೌಕಾಪಡೆಯ ಯುದ್ಧನೌಕೆಗಳು ಸಹ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿವೆ.

ಅಗತ್ಯ ವೈದ್ಯಕೀಯ ವಸ್ತುಗಳನ್ನು ಮಣಿಪುರ ಮತ್ತು ನಾಗಾಲ್ಯಾಂಡ್‌ಗೆ ಸಾಗಿಸಲು ಭಾರತೀಯ ವಾಯುಪಡೆ IL -76 ವಿಮಾನ ಬಳಿಸಲಾಯಿತು.

ಭಾರತೀಯ ವಾಯುಪಡೆಯ ಅಧಿಕಾರಿಗಳ ಪ್ರಕಾರ,ಕೊರೋನಾ ವೈರಸ್‌ ಕಾರಣದಿಂದ ಭಾರತೀಯ ವಾಯುಪಡೆಯು ಐಎಎಫ್ ಕೇಂದ್ರ ಕಚೇರಿಯಲ್ಲಿ ಸುಮಾರು 50% ರಷ್ಟು ಮ್ಯಾನ್‌ಪವರ್‌ ಹಾಗೂ . 25-30% ರಷ್ಟು ಅಧಿಕಾರಿಗಳ ಸಂಖ್ಯೆಯನ್ನು ಸಹ ಕಡಿಮೆ ಮಾಡಲಾಗಿದೆ.

ಕೊರೋನಾ ವೈರಸ್ ಸ್ಯಾಂಪಲ್‌ಗಳನ್ನು ದೆಹಲಿಯಿಂದ ಲಡಾಖ್‌ಗೆ ಭಾರತೀಯ ವಾಯುಪಡೆಯ ಮೂಲಕ ಸಾಗಿಸಲಾಯಿತು. ದೆಹಲಿ, ಸೂರತ್, ಚಂಡೀಗಡದಿಂದ ಮಣಿಪುರ, ನಾಗಾಲ್ಯಾಂಡ್, ಅರುಣಾಚಲ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ಗಳಿಗೆ 25 ಟನ್ ಔಷಧಿಗಳನ್ನು ಪೂರೈಸಿದೆ ವಾಯುಪಡೆ.

loader