Asianet Suvarna News Asianet Suvarna News

ಫೋನ್‌ನಲ್ಲಿ ಮಾತನಾಡುತ್ತಾ ಒಂದೇ ಬಾರಿಗೆ 2 ಡೋಸ್ ಲಸಿಕೆ ನೀಡಿದ ನರ್ಸ್!

ಭಾರತದಲ್ಲಿ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲಾಗಿದೆ. ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಲಸಿಕೆ ಜೊತೆ ಮತ್ತೆ ಹಲವು ನಿರ್ಬಂಧ ಹೇರಲಾಗುತ್ತಿದೆ. ಲಸಿಕೆ ವೇಗ ಹೆಚ್ಚಿಸಲಾಗಿದೆ. ಇದೀಗ ನರ್ಸ್ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರಿಗೆ ಒಂದೇ ಬಾರಿಗೆ 2 ಡೋಸ್ ಲಸಿಕೆ ನೀಡಿದ ಘಟನೆ ನಡೆದಿದೆ. 

UP nurse gives woman 2 doses of Covid 19 vaccine due to negligence ckm
Author
Bengaluru, First Published Apr 3, 2021, 7:22 PM IST

ಉತ್ತರ ಪ್ರದೇಶ(ಎ.03):  ಕೊರೋನಾ ಲಸಿಕೆ ನೀಡುವವರು ಹಾಗೂ ಪಡೆದುಕೊಳ್ಳುವವರು ಮುನ್ನಚ್ಚೆರಿಕೆ ವಹಿಸುುವುದು ಅಗತ್ಯ. ವೈದ್ಯಕೀಯ ಚಿಕಿತ್ಸೆ ನೀಡುವಾಗ ನಿರ್ಲಕ್ಷ್ಯ ಗಂಭೀರ ಅಪಾಯ ತಂದೊಡ್ಡಲಿದೆ. ಸಣ್ಣ ತಪ್ಪಿಗೆ ಬಾರಿ ದಂಡ ತೇರಬೇಕಾಗುತ್ತದೆ. ಇದೀಗ ಉತ್ತರ ಪ್ರದೇಶದ ಕಾನ್ಪುರ ದೆಹತ್ ಜಿಲ್ಲೆಯಲ್ಲಿ ನರ್ಸ್ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರಿಗೆ 2 ಡೋಸ್ ಕೊರೋನಾ ಲಸಿಕೆ ನೀಡಿದ್ದಾರೆ.

ಕೊರೋನಾ ತಡೆಗೆ ಈ ಜಿಲ್ಲೆಯಲ್ಲಿ 9 ದಿನಗಳ ಲಾಕ್ ಡೌನ್!

ಅಕ್ಬಾರಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 50 ವರ್ಷ ಕಮಲೇಶ್ ಕುಮಾರಿ ಲಸಿಕೆ ಪಡೆಯಲು ತೆರಳಿದ್ದಾರೆ. ಆದರೆ ನರ್ಸ್ ಮಾತ್ರ ಫೋನ್‌ನಲ್ಲಿ ಮಾತನಾಡುತ್ತಾ ಬ್ಯೂಸಿಯಾಗಿದ್ದಾರೆ. ಫೋನ್ ಕಟ್ ಮಾಡದೇ ಮಾತು ಮುಂದುವರಿಸಿದ ನರ್ಸ್, ಕಮಲೇಶ್ ಕುಮಾರಿಗೆ ಒಂದು ಡೋಸ್ ಬದಲು ಎರಡು ಡೋಸ್ ಲಸಿಕೆ ನೀಡಿದ್ದಾರೆ.

2ನೇ ಡೋಸ್ ನೀಡಿದ ಬೆನ್ನಲ್ಲೇ ನರ್ಸ್‌ಗೆ ತಪ್ಪಿನ ಅರಿವಾಗಿದೆ. ತಕ್ಷಣವೇ ಕ್ಷಮೇ ಕೇಳಿದ್ದಾರೆ. ಇಷ್ಟೇ ಅಲ್ಲ ಆರೋಗ್ಯ ಕೇಂದ್ರದಲ್ಲಿ ಇರುವಂತೆ ಮನವಿ ಮಾಡಿದ್ದಾರೆ.ಅಷ್ಟರಲ್ಲೇ 2 ಡೋಸ್ ಲಸಿಕೆ ವಿಚಾರ ಮನೆ ಮುಟ್ಟಿದೆ. ಕುಟುಂಬಸ್ಥರು ಆರೋಗ್ಯ ಕೇಂದ್ರಕ್ಕೆ ತೆರಳಿ ಜಗಳ ಮಾಡಿದ್ದಾರೆ.

ಆರೋಗ್ಯ ಕೇಂದ್ರದ ವೈದ್ಯರು ತಪಾಸಣೆ ನಡೆಸಿ ಕುಟುಂಬಸ್ಥರನ್ನು ಸಮಾಧಾನ ಪಡಿಸಿದ್ದಾರೆ. 2 ಡೋಸ್ ಪಡೆದ ಕಾರಣ ಕಮಲೇಶ್ ಕುಮಾರಿ ಕೈ ಊದಿಕೊಂಡಿದೆ. ಇತರ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ಕುಟುಂಬಸ್ಥರು ಕೊಂಚ ಸಮಾಧಾನಗೊಂಡಿದ್ದಾರೆ.

Follow Us:
Download App:
  • android
  • ios