ತಿರುವನಂತಪುರಂ(ಜು.07): ತಿರುವನಂತಪುರದ ಸೌದಿ ಅರೆಬಿಯಾ ದೂತಾವಾಸ ಕಚೇರಿಯಿಂದ 30 ಕೆಜಿ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿದ ಪ್ರಕರಣ ಈಗ ಕೇರಳ ಸಿಎಂ ಕಚೇರಿ ಕದ ತಟ್ಟಿದೆ. ಕೊರೋನಾ ಮಧ್ಯೆಯೇ ಕೇರಳದಲ್ಲಿ ವಿವಾದಕ್ಕೆ ಒಳಗಾದ ಈ ಪ್ರಕರಣದಿಂದ ಸಿಎಂಗೆ ಢವ ಢವ ಶುರುವಾಗಿದೆ.

ಸೌದಿ ಅರೆಬಿಯಾ ದೂತಾವಾಸ ಕಚೇರಿಯ ಮಾಜಿ ಅಧಿಕಾರಿ, ಕೇರಳ ರಾಜ್ಯ ಮಾಹಿತಿ ತಂತ್ರಜ್ಞಾನ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಪರಿಮಿತಿಯಲ್ಲಿ ಬರುವ ಸ್ಪೇಸ್ ಪಾರ್ಕ್‌ ಮಾರ್ಕೆಟಿಂಗ್ ಸಂಪರ್ಕ ಅಧಿಕಾರಿ ಸ್ವಪ್ನಾ ಸುರೇಶ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.

6 ತಿಂಗಳ ಬಳಿಕ ಕಾಕನಕೋಟೆ ಅರಣ್ಯದಲ್ಲಿ ಕರಿ ಚಿರತೆ ಪ್ರತ್ಯಕ್ಷ!

ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಸಿಎಂ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪಪ್ನಾ ಆರೋಪಿ ಎಂದು ತಿಳಿದ ಕೂಡಲೇ ಸಿಎಂ ಕಚೇರಿ ಹಾಗೂ ಐಟಿ ಕಾರ್ಯದರ್ಶಿ ಅವರನ್ನು ರಿಲೀಸ್ ಮಾಡುವಂತೆ ಕಸ್ಟಮ್ಸ್‌ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಐಟಿ ಆಫೀಸ್ ಹಾಗೂ ಸಿಎಂ ಕಚೇರಿ ಫೋನ್ ರೆಕಾರ್ಡ್ ನೋಡಿದರೆ ಈ ಬಗ್ಗೆ ಸ್ಪಷ್ಟವಾಗಿ ತಿಳಿಯಲಿದೆ ಎಂದಿದ್ದಾರೆ.

ದೂತಾವಾಸ ಕಚೇರಿಯ ಮಾಜಿ ಪಿಆರ್‌ಒ ಸರಿತ್ ಎಂಬಾತ ಪ್ರಕರಣದಲ್ಲಿ ಗುರುತಿಸಲ್ಪಡುತ್ತಿದ್ದಂತೆ ಸ್ಪಪ್ನಾ ಕೂಡಾ ಲಿಂಕ್ ಆಗಿರುವುದು ತಿಳಿದಿದೆ. ಸರಿತ್‌ನನ್ನು ಕೊಚ್ಚಿಯ ಕಸ್ಟಮ್ಸ್‌ ಕಚೇರಿಯಲ್ಲಿ ವಿಚಾರಣೆಗೊಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಕಚೇರಿಯಿಂದ ಹೊರಬಂದ ಮೇಲೂ ಸರಿತ್ ದೂತಾವಾಸ ಕಚೇರಿಯ ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದು ಸಂಶಯಗಳಿಗೆ ಎಡೆ ಮಾಡಿಕೊಟ್ಟಿತು. ಸರಿತ ಸ್ವಪ್ನಾ ಜೊತೆಯೂ ಸಂಪರ್ಕವಿಟ್ಟುಕೊಂಡಿದ್ದ.

ಮಂಗಳೂರಿಗೆ ನಿತ್ಯಪಾಸ್‌ ರದ್ದು: ಕೇರಳ ಕರ್ನಾಟಕ ಸಂಚಾರವೇ ಬಂದ್

ರಾಜತಾಂತ್ರಿಕ ಸಾಮಾನುಗಳನ್ನು ವಿಸ್ತಾರವಾಗಿ ಪರಿಶೀಲನೆಗೆ ಒಳಪಡಿಸಲಾಗುವುದಿಲ್ಲ ಎಂದು ತಿಳಿದಿದ್ದರಿಂದ, ಅವರು ಸರ್ಕಾರಿ ಮರ್ಗಾ ಬಳಸಿಕೊಂಡು ದೊಡ್ಡ ಪ್ರಮಾಣದ ಚಿನ್ನವನ್ನು ರಾಜ್ಯಕ್ಕೆ ಕಳ್ಳಸಾಗಣೆ ಮಾಡಿದ್ದಾರೆ ಎನ್ನಲಾಗಿದೆ.

ದೂತಾವಾಸ ಕಚೇರಿಯಲ್ಲಿದ್ದಷ್ಟು ಸಮಯ ಸರಿತ್ ಜೊತೆ ಹೊಂದಾಣಿಕೆ ನಡೆಸಿಕೊಂಡಿದ್ದ ಸ್ವಪ್ನಾ ಕಚೇರಿಯಿಂದ ಹೊರ ಬಂದ ಮೇಲೂ ಸ್ಮಗ್ಲಿಂಗ್‌ನಲ್ಲಿ ನೆರವಾಗಿದ್ದರು. ಹಲವು ಬಾರಿ ಸುಗಮವಾಗಿ ಕಳ್ಳ ಸಾಗಣೆ ಮಾಡಲು ಸ್ವಪ್ನಾ ತನ್ನ ಹಿರಿಯ ಸಂಪರ್ಕಗಳನ್ನು ಬಳಸಿದ್ದಾಗಿಯೂ ತಿಳಿದು ಬಂದಿದೆ. ಇದೇ ಸಂದರ್ಭ ಈ ಬಗ್ಗೆ ಪ್ರತಿಕ್ರಿಯಿಸಿದ ಸೌದಿ ದೂತಾವಾಸ ಕಚೇರಿ ಅಧಿಕಾರಿಗಳು ಇದರಲ್ಲಿ ತಮ್ಮ ಹಾಗೂ ಸಿಬ್ಬಂದಿಯ ಯಾವುದೇ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜತಾಂತ್ರಿಕರ ಬ್ಯಾಗಲ್ಲಿ 30 ಕೇಜಿ ಚಿನ್ನ!

ಪ್ರಕರಣದ ತೀವ್ರತೆ ಹೆಚ್ಚುತ್ತಿದ್ದಂತೆ ಸ್ವಪ್ನಾಳನ್ನು ಸ್ಥಾನದಿಂದ ಕೆಳಗಿಳಿಸಿದ ಸರ್ಕಾರ ಆಕೆಯದ್ದು ಕಾಂಟ್ರಾಕ್ಟ್ ಕೆಲಸವಾಗಿತ್ತು ಎಂದು ಹೇಳಿದೆ. ಅಕ್ರಮ ಚಿನ್ನ ಸಾಗಣೆ ಆರೋಪಿ ಲಿಸ್ಟ್‌ನಲ್ಲಿ ಆಖೆಯ ಹೆಸರು ಬಂದ ಕೂಡಲೇ ಆಕೆಯನ್ನು ಕೆಲಸದಿಂದ ತೆಗೆಯಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ವಿದೇಶಾಂಗ ವ್ಯವಹಾರ ಸಚಿವಾಲಯದ ಅನುಮತಿಯೊಂದಿಗೆ ಅಕ್ರಮ ಚಿನ್ನ ಸಾಗಣೆ ತಪಾಸಣೆ ನಡೆಸಿ, 30.24 ಕೆಜಿ ಚಿನ್ನ ವಶಪಡಿಸಿದ್ದರು.