ಮಂಗಳೂರಿಗೆ ನಿತ್ಯಪಾಸ್ ರದ್ದು: ಕೇರಳ ಕರ್ನಾಟಕ ಸಂಚಾರವೇ ಬಂದ್
ಮಂಗಳೂರಿನಿಂದ ಕಾಸರಗೋಡಿಗೆ ಉದ್ಯೋಗಿಗಳು, ವಿದ್ಯಾರ್ಥಿಗಳು ಪ್ರತಿನಿತ್ಯ ಪ್ರಯಾಣಿಸುವುದಕ್ಕೆ ಕೇರಳ ಸರ್ಕಾರ ನಿಷೇಧ ಹೇರಿದ್ದು, ಕಾಸರಗೋಡು ಜಿಲ್ಲಾಡಳಿತ ನೀಡಿರುವ ನಿತ್ಯದ ಪಾಸ್‌ಗಳನ್ನು ರದ್ದುಗೊಳಿಸಿದೆ.
ಮಂಗಳೂರು(ಜು.07): ಮಂಗಳೂರಿನಿಂದ ಕಾಸರಗೋಡಿಗೆ ಉದ್ಯೋಗಿಗಳು, ವಿದ್ಯಾರ್ಥಿಗಳು ಪ್ರತಿನಿತ್ಯ ಪ್ರಯಾಣಿಸುವುದಕ್ಕೆ ಕೇರಳ ಸರ್ಕಾರ ನಿಷೇಧ ಹೇರಿದ್ದು, ಕಾಸರಗೋಡು ಜಿಲ್ಲಾಡಳಿತ ನೀಡಿರುವ ನಿತ್ಯದ ಪಾಸ್‌ಗಳನ್ನು ರದ್ದುಗೊಳಿಸಿದೆ.
ಇನ್ನು ಮುಂದೆ ತಿಂಗಳಿಗೆ ಒಮ್ಮೆ ಮಾತ್ರ ಮಂಗಳೂರಿಗೆ ಪ್ರಯಾಣಿಸಬಹುದು ಎನ್ನುವ ಷರತ್ತನ್ನೂ ವಿಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗಿರುವುದು ಹಾಗೂ ಮಂಗಳೂರಿಗೆ ಬಂದು ಹೋದ ಐದು ಮಂದಿ ಕೇರಳಿಗರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಹಿನ್ನೆಲೆಯಲ್ಲಿ ಕೇರಳ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ನಿಲ್ಲದ ಮರಣಮೃದಂಗ, ದಕ್ಷಿಣ ಕನ್ನಡದಲ್ಲಿ ಮಹಾಮಾರಿಗೆ ಮತ್ತೆ ಇಬ್ಬರು ಬಲಿ
ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಈ ವಿಚಾರ ತಿಳಿಸಿದ್ದಾರೆ. ಲಾಕ್‌ಡೌನ್ ತೆರವಾದ ಬಳಿಕ ಕಾಸರಗೋಡು- ಮಂಗಳೂರು ನಡುವೆ ನಿತ್ಯ ಉದ್ಯೋಗಕ್ಕೆ ತೆರಳುವವರಿಗೆ ಅನುಕೂಲವಾಗುವಂತೆ ಎರಡು ಜಿಲ್ಲೆಗಳ ಸಮನ್ವಯತೆಯಿಂದ ಪಾಸ್ ನೀಡಿಕೆ ಆರಂಭವಾಗಿತ್ತು. ಇದೀಗ ಮಂಗಳೂರು ಜಿಲ್ಲಾಡಳಿತವು ಪಾಸ್‌ಗಳನ್ನು ಜು.11ರವರೆಗೆ ವಿಸ್ತರಿಸಿದೆ. ಆದರೆ ಕೇರಳ ಸರ್ಕಾರ ಸೋಮವಾರವೇ ಈ ವ್ಯವಸ್ಥೆ ರದ್ದುಗೊಳಿಸಿದೆ.