Asianet Suvarna News Asianet Suvarna News

6 ತಿಂಗಳ ಬಳಿಕ ಕಾಕನಕೋಟೆ ಅರಣ್ಯದಲ್ಲಿ ಕರಿ ಚಿರತೆ ಪ್ರತ್ಯಕ್ಷ!

ಕಾಕನಕೋಟೆ ಅರಣ್ಯದಲ್ಲಿ ಕರಿ ಚಿರತೆ ಪ್ರತ್ಯಕ್ಷ| ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿಯಲ್ಲಿರುವ ಉದ್ಯಾನವನ| ಕಳೆದ 5 ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಈ ಕಪ್ಪು ಚಿರತೆ

Karnataka Black Panther Pic Goes Viral People Call It Bagheera
Author
Bangalore, First Published Jul 7, 2020, 2:18 PM IST

ಹುಣಸೂರು(ಜು.07): ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿಯ ಕಾಕನಕೋಟೆ ಅರಣ್ಯದಲ್ಲಿ ಸೋಮವಾರ ಸಂಜೆ ಸಫಾರಿಗೆ ಹೋಗಿದ್ದ ಪ್ರವಾಸಿಗರ ಕಣ್ಣಿಗೆ ಅಪರೂಪದ ಕಪ್ಪು ಚಿರತೆಯೊಂದು ಕಾಣಿಸಿಕೊಂಡಿದೆ.

ಗುಂಡ್ಲುಪೇಟೆ: ಬಾವಿಯೊಳಗೆ ಅವಿತು ಕುಳಿತಿದ್ದ ಚಿರತೆ ಏಣಿಯಿಂದ ಮೇಲೆ ಬಂತು!

ಕಳೆದ 5 ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಈ ಕಪ್ಪು ಚಿರತೆಯೊಂದು, 6 ತಿಂಗಳ ಹಿಂದೆ ನಾಗರಹೊಳೆಯಲ್ಲಿ ಪ್ರವಾಸಿಗರಿಗೆ ಕಾಣಿಸಿಕೊಂಡಿತ್ತು. ಆದರೆ ಸೋಮವಾರ ಸಂಜೆ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಈ ಕಪ್ಪು ಚಿರತೆ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದೆ.

ಇದು ಹೊಸದೇನಲ್ಲ, ಪ್ರವಾಸಿಗರಿಗೆ ಸಹಜವಾಗಿ ಕಾಣಿಸಿಕೊಂಡಿದ್ದರಿಂದ ವಿಶೇಷವಾಗಿದೆ ಎನ್ನುತ್ತಿದ್ದಾರೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಲಿ ಯೋಜನೆ ನಿರ್ದೇಶಕ ಮಹೇಶ್‌ ಕುಮಾರ್‌ ತಿಳಿಸಿದ್ದಾರೆ

Follow Us:
Download App:
  • android
  • ios