Asianet Suvarna News Asianet Suvarna News

ರಾಜತಾಂತ್ರಿಕರ ಬ್ಯಾಗಲ್ಲಿ 30 ಕೇಜಿ ಚಿನ್ನ!

ರಾಜತಾಂತ್ರಿಕರ ಬ್ಯಾಗಲ್ಲಿ 30 ಕೇಜಿ ಚಿನ್ನ!| ರಾಜತಾಂತ್ರಿಕ ರಕ್ಷಣೆ ಹೊಂದಿರುವ ‘ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌’| 15 ಕೋಟಿ ರು. ಮೌಲ್ಯದ 30 ಕೇಜಿ ಚಿನ್ನ ವಶ

Customs seize 30 kg gold from diplomatic baggage in Kerala
Author
Bangalore, First Published Jul 6, 2020, 1:30 PM IST

ತಿರುವನಂತಪುರಂ(ಜು. 06): ರಾಜತಾಂತ್ರಿಕ ರಕ್ಷಣೆ ಹೊಂದಿರುವ ‘ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌’ನಲ್ಲಿ ಸಾಗಿಸಲಾಗುತ್ತಿದ್ದ 15 ಕೋಟಿ ರು. ಮೌಲ್ಯದ 30 ಕೇಜಿ ಚಿನ್ನವನ್ನು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ರಾಜತಾಂತ್ರಿಕ ರಕ್ಷಣೆ ಹೊಂದಿರುವ ವ್ಯಕ್ತಿಗಳ ಹೆಸರಿನಲ್ಲಿ ಚಿನ್ನ ಕಳ್ಳಸಾಗಣೆ ನಡೆಯುತ್ತಿರಬಹುದು ಎಂಬ ಗುಮಾನಿ ವ್ಯಕ್ತವಾಗಿದೆ.

ಈ ಹೊಟೇಲ್‌ನಲ್ಲಿ ಎಲ್ಲವೂ ಚಿನ್ನಮಯ! ಬಾಡಿಗೆಯೂ ಬಲು ಕಡಿಮೆ

ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌ನಲ್ಲಿ ಸ್ನಾನಗೃಹದ ಉಪಕರಣಗಳ ಒಳಗೆ ಚಿನ್ನವನ್ನು ಅಡಗಿಸಿಡಲಾಗಿತ್ತು. ಈ ಬ್ಯಾಗ್‌ ಎರಡು ದಿನದ ಹಿಂದೆಯೇ ವಿಮಾನ ನಿಲ್ದಾಣಕ್ಕೆ ಬಂದಿತ್ತಾದರೂ, ಅದನ್ನು ಕೇಳಿಕೊಂಡು ಯಾರೂ ಬಂದಿರಲಿಲ್ಲ. ಹೀಗಾಗಿ ಪರಿಶೀಲನೆ ನಡೆಸಿದಾಗ ಚಿನ್ನ ಪತ್ತೆಯಾಯಿತು ಎಂದು ಕಸ್ಟಮ್ಸ್‌ ಆಯುಕ್ತ ಸುಮೀತ್‌ ಕುಮಾರ್‌ ತಿಳಿಸಿದ್ದಾರೆ. ತಿರುವನಂತಪುರದ ಸಂಯುಕ್ತ ಅರಬ್‌ ಸಂಸ್ಥಾನದ ದೂತಾವಾಸ ವಿಳಾಸವನ್ನು ಈ ಬ್ಯಾಗ್‌ ಹೊಂದಿದೆ ಎಂದು ವರದಿಗಳು ತಿಳಿಸಿವೆ.

ಆಭರಣಕ್ಕೆ ಬೇಡಿಕೆ ಇಲ್ಲ, ಚಿನ್ನದ ದರ ಮಾತ್ರ ಕೆಳಗಿಳಿಯುತ್ತಿಲ್ಲ; 3 ವಿಚಿತ್ರ ಕಾರಣ!

ತಿರುವನಂತಪುರದ ಮನ್ಸಾಡ್‌ನಲ್ಲಿ ಇರುವ ಅರಬ್‌ ಸಂಯುಕ್ತ ಸಂಸ್ಥಾನದ ವಿಳಾಸಕ್ಕೆ ಈ ಬ್ಯಾಗ್‌ ಅನ್ನು ಕಳುಹಿಸಲಾಗಿತ್ತು. ಎರಡು ದಿನಗಳ ಹಿಂದೆ ಬಾಡಿಗೆ ವಿಮಾನವೊಂದರಲ್ಲಿ ಈ ಬ್ಯಾಗ್‌ ಬಂದಿಳಿದಿತ್ತು. ಆದರೆ, ಇದೊಂದು ಡಿಪ್ಲೋಮಾಟಿಕ್‌ ಬ್ಯಾಗೇಜ್‌ ಆಗಿದ್ದರಿಂದ ಹೆಚ್ಚಿನ ತಪಾಸಣೆಗೆ ಒಳಗಾಗಿರಲಿಲ್ಲ. ಆದರೆ, ಎರಡು ದಿನವಾದರೂ ಅದನ್ನು ಒಯ್ಯಲು ಯಾರೂ ಬರದೇ ಇದ್ದಿದ್ದರಿಂದ ಅನುಮಾನ ಬಂದು ತಪಾಸಣೆಗೆ ಒಳಪಡಿಸಿದ ವೇಳೆ ಅದರಲ್ಲಿ ಚಿನ್ನ ಇರುವುದು ಗೊತ್ತಾಗಿದೆ.

Follow Us:
Download App:
  • android
  • ios