SRK ಅಂದ್ರೆ ಶೇಖರ್ ರಾಧಾ ಕೃಷ್ಣ ಎಂದ ನಟ ಶಾರುಖ್ ಧರ್ಮದ ಬಗ್ಗೆ ಹೇಳಿದ್ದೇನು?
ಎಸ್ಆರ್ಕೆ ಎಂದರೆ ಶಾರುಖ್ ಅಲ್ಲ, ಶೇಖರ್ ರಾಧಾ ಕೃಷ್ಣ ಎಂದು ಶಾರುಖ್ ಖಾನ್ ಹೇಳಿರುವ ವಿಡಿಯೋ ಸಕತ್ ಸೌಂಡ್ ಮಾಡುತ್ತಿದೆ ಏನಿದು?
ನಟ ಶಾರುಖ್ ಖಾನ್ ಅವರ ಹವಾ ಚಿತ್ರರಂಗದಲ್ಲಿ ಬಹಳ ಜೋರಾಗಿದೆ. ಹಲವಾರು ಫ್ಲಾಪ್ ಚಿತ್ರಗಳ ಬಳಿಕ ಐದು ವರ್ಷದ ನಂತರ ಕಮ್ಬ್ಯಾಕ್ ಮಾಡಿ ಬ್ಲಾಕ್ಬಸ್ಟರ್ ಪಠಾಣ್ ಕೊಟ್ಟ ಮೇಲಂತೂ ಅವರಿಗೆ ಇನ್ನಷ್ಟು ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಪಠಾಣ್ ಚಿತ್ರದ ಭರ್ಜರಿ ಕಲೆಕ್ಷನ್ ಮೂಲಕ ಮಕಾಡೆ ಮಲಗಿದ್ದ ಬಾಲಿವುಡ್ಗೆ ಆಕ್ಸಿಜನ್ ನೀಡಿರೋ ಕಿಂಗ್ ಖಾನ್ ಈಗ ಜವಾನ್ ಚಿತ್ರಕ್ಕೂ ರೆಡಿಯಾಗಿದ್ದಾರೆ. ಇವೆಲ್ಲವುಗಳ ನಡುವೆಯೇ ದಿ ಕೇರಳ ಸ್ಟೋರಿ ಮುನ್ನೆಲೆಗೆ ಬಂದಿದೆ. ಇದರಿಂದಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ ಎನ್ನುವ ಬಗ್ಗೆ ಸಕತ್ ಸುದ್ದಿ ಮಾಡುತ್ತಿದೆ. ಚಿತ್ರನಟರಾದವರು, ಯಾವ ಧರ್ಮಕ್ಕೆ ಸೇರಿದವರೇ ಆದರೂ ನಟನೆಯ ವಿಷಯ ಬಂದಾಗ ಅವರು ಎಲ್ಲಾ ಪಾತ್ರಕ್ಕೂ ಸೈ ಇರಬೇಕು. ಇದೇ ರೀತಿ ಬಾಲಿವುಡ್ನ ಖಾನ್ತ್ರಯರು ಇದಾಗಲೇ ಹಲವಾರು ಹಿಂದೂ ದೇವತೆಗಳ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ, ಹಿಂದೂ ನಟರಾಗಿಯೂ ಪಾತ್ರ ನಿರ್ವಹಿಸಿದ್ದಾರೆ, ಅದೇ ರೀತಿ ಹಿಂದೂ ನಟರು ಕ್ರೈಸ್ತ, ಮುಸ್ಲಿಂ, ಪಾರ್ಸಿ ಎಲ್ಲವೂ ಆಗಿದ್ದಾರೆ. ಆದರೆ ದಿ ಕೇರಳ ಸ್ಟೋರಿಯ ಭಯಾನಕ ಸತ್ಯ ಘಟನೆಯ ನಂತರ ಮತ್ತೆ ಧರ್ಮದ ವಿಷಯ ಈಗ ಎಲ್ಲೆಡೆ ಹರಿದಾಡುತ್ತಿದೆ.
ಇದರ ನಡುವೆಯೇ ನಟ ಶಾರುಖ್ ಖಾನ್ ಅವರ ಕಳೆದ ವರ್ಷದ ವಿಡಿಯೋ ಒಂದು ಸಕತ್ ಸದ್ದು ಮಾಡುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ನಟ ಶಾರುಖ್ ಖಾನ್, SRK ಎಂದೇ ಖ್ಯಾತಿ ಪಡೆದವರು. ಹಲವು ಮಂದಿ ಅವರನ್ನು ಪ್ರೀತಿಯಿಂದ ಎಸ್ಆರ್ಕೆ ಎಂದೇ ಕರೆಯುತ್ತಾರೆ. ಆದರೆ SRK ಎಂದ್ರೆ ಶಾರುಖ್ ಖಾನ್ ಬದಲು ಶೇಖರ್ ರಾಧಾ ಕೃಷ್ಣ ಎಂದು ಈ ವಿಡಿಯೋದಲ್ಲಿ ಶಾರುಖ್ ಹೇಳಿದ್ದು, ಅದು ಥಹರೇವಾರಿ ಕಮೆಂಟ್ ಜೊತೆಗೆ ವೈರಲ್ ಆಗುತ್ತಿದೆ.
Suhana Khan: ಶಾರುಖ್ ಪುತ್ರಿ ಜೊತೆ ಯಾರೀ ಹೊಸ ಹ್ಯಾಂಡ್ಸಮ್ ಯುವಕ?
ಹೌದು. ಇದು ಕಾರ್ಯಕ್ರಮವೊಂದರಲ್ಲಿ ಶಾರುಖ್ ಅವರ ಜೊತೆ ನಡೆದ ಪ್ರಶ್ನೋತ್ತರದ ವಿಡಿಯೋ. ಅದರಲ್ಲಿ ಒಬ್ಬರು ನೀವು ಒಂದು ವೇಳೆ ಶಾರುಖ್ ಖಾನ್ ಆಗಿರದೇ ಶೇಖರ್ ಕೃಷ್ಣ ಆಗಿದ್ದರೆ... ಎಂದು ಪ್ರಶ್ನೆ ಪೂರ್ಣಗೊಳಿಸುವ ಮೊದಲೇ ನಟ ಶಾರುಖ್ ಅಲ್ಲಲ್ಲಾ... ಅದು ಶೇಖರ್ ಕೃಷ್ಣ ಅಲ್ಲ... SRK ಎಂದರೆ ಶೇಖರ್ ರಾಧಾ ಕೃಷ್ಣ ಎಂದು ಹೇಳಿದಾಗ ಅಲ್ಲಿದ್ದವರೆಲ್ಲಾ ದೊಡ್ಡದಾಗಿ ನಕ್ಕರು. ನಂತರ ಪ್ರಶ್ನೆ ಮುಂದುವರಿಸಿದ ಪತ್ರಕರ್ತ, ಸರಿ ಒಂದು ವೇಳೆ ನೀವು ಶೇಖರ್ ರಾಧಾ ಕೃಷ್ಣ ಆಗಿದ್ದರೂ ನೀವು ಇಷ್ಟೇ ಫೇಮಸ್ ಆಗುತ್ತಿದ್ದೀರಾ ಅಥವಾ ನಿಮ್ಮ ಮೇಲೆ ಈಗ ಹರಿಸುತ್ತಿರುವ ಪ್ರೀತಿ ಅಥವಾ ಇನ್ನು ಕೆಲವರು ಮಾಡುತ್ತಿರುವ ದ್ವೇಷ ಎಲ್ಲವೂ ಹೀಗೆಯೇ ಇರುತ್ತಿತ್ತಾ ಎಂದು ನಿಮಗೆ ಅನ್ನಿಸುತ್ತಿದೆಯೇ ಎಂದು ಕೇಳಿದರು. ಅದಕ್ಕೆ ಅದೇ ನಗುವಿನಿಂದ ಉತ್ತರಿಸಿದ ಶಾರುಖ್, ನಾನು ಧರ್ಮ ಮತ್ತು ಇತರ ವಿಷಯಗಳ ಬಗ್ಗೆ ಎಂದು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಇಂಥ ಅದ್ಭುತ ದೇಶದಲ್ಲಿ ಅವುಗಳಿಗೆ ಜಾಗವಿಲ್ಲವೆಂದೇ ನಾನು ನಂಬಿದವ. ನಾನು ರಾಧಾ ಕೃಷ್ಣ ಆಗಿದ್ದರೂ ಯಾವುದೇ ಬದಲಾವಣೆ ಆಗುತ್ತಿರಲಿಲ್ಲ. ಈ ದೇಶದಲ್ಲಿ ಅಂಥ ಕೆಟ್ಟ ವಿಚಾರಗಳು ಬರುವುದಿಲ್ಲ ಎಂದರು.
ಕೆಲವು ನಟರಿಗೂ ಈ ಕೆಟ್ಟ ವಿಷಯಗಳು ತಲೆಗೆ ಹೋಗುತ್ತವೆ, ಜಾತಿ-ಧರ್ಮ ಇಲ್ಲಿಯೂ ಕೆಲವೊಮ್ಮೆ ಮಾತುಕತೆಯಾಗುತ್ತದೆ. ಆದರೆ ನನ್ನ ವೈಯಕ್ತಿಕ ವಿಷಯದಲ್ಲಿ ಹೇಳುವುದಾದರೆ ನನಗೆ ಇವುಗಳಲ್ಲಿ ನಂಬಿಕೆ ಇಲ್ಲ. ನನ್ನನ್ನು ಯಾವುದೇ ಹೆಸರಿನಿಂದ ಕರೆದರೂ ಖುಷಿಯಾಗುತ್ತದೆ ಎಂದು ಹೇಳಿದ ಶಾರುಖ್, ಭಾರತದ ಜಾತ್ಯತೀತತೆಯನ್ನು ಶ್ಲಾಘಿಸಿದರು. ಅದರ ವಿಡಿಯೋ ವೈರಲ್ ಆಗಿದೆ. ಶಾರುಖ್ ಖಾನ್ ಇದೀಗ ಭಾರತದಲ್ಲಿ ಅತ್ಯಂತ ಪ್ರೀತಿಪಾತ್ರರನ್ನಾಗಿ ಮಾಡಲಾಗಿದೆ. ದೇವರು ನಾನು ಕನಸು ಕಂಡಿದ್ದಕ್ಕಿಂತ ಹೆಚ್ಚಿನದನ್ನು ನೀಡಿದ್ದಾನೆ ಮತ್ತು ಅವನು ಪಡೆದ ಪ್ರೀತಿಗೆ ಯಾವಾಗಲೂ ಕೃತಜ್ಞನಾಗಿದ್ದಾನೆ ಎಂದು ಶಾರುಖ್ ಈ ಹಿಂದೆಯೂ ಹೇಳಿದ್ದರು. ಅಂದಹಾಗೆ ಶಾರುಖ್ ಹಿಂದೂ ಯುವತಿ ಗೌರಿ (Gouri) ಅವರನ್ನು ಮದುವೆಯಾಗಿದ್ದು, ಗೌರಿ ಈಗ ಗೌರಿ ಖಾನ್ ಆಗಿದ್ದಾರೆ.
ಶಾರುಖ್ ತಯಾರಿಸಿದ ಪಿಜ್ಜಾ ತಿಂದು ಕುಣಿದಾಡಿದ ಮಾಡೆಲ್ ನವಪ್ರೀತ್ ಕೌರ್