ಸಿನಿಮಾ ನಿರ್ಮಾಣ ಸಂಸ್ಥೆ ಮುಂದೆ ಮಹಿಳೆಯ ಪ್ರತಿಭಟನೆ ಮೋಸ ಮಾಡಿದ್ದರೆಂದು ಬೆತ್ತಲೆ ಪ್ರತಿಭಟನೆ ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ ಪೊಲೀಸರು  

ಹೈದರಾಬಾದ್‌: 28 ವರ್ಷದ ಯುವತಿಯೊಬ್ಬರು ತಾನು ತೆಲುಗು ಸಿನಿಮಾ ರಂಗದ ಮಹಿಳಾ ಜ್ಯೂನಿಯರ್‌ ಆರ್ಟಿಸ್ಟ್‌ ಎಂದು ಹೇಳಿಕೊಂಡಿದ್ದು ಸಿನಿಮಾ ನಿರ್ಮಾಣ ಸಂಸ್ಥೆಯೊಂದರ ಮುಂದೆ ಬೆತ್ತಲಾಗಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆದರೆ ಈ ಯುವತಿ ಮಾನಸಿಕವಾಗಿ ದುರ್ಬಲವಾಗಿದ್ದು, ತನ್ನ ಬಟ್ಟೆಯನ್ನು ಕಳಚಿ ಸಿನಿಮಾ ನಿರ್ಮಾಣ ಸಂಸ್ಥೆಯ ಮುಂದಿರುವ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದಳು ಎಂದು ತಿಳಿದು ಬಂದಿದೆ. ಹೈದರಾಬಾದ್‌ನ ಜುಬಿಲಿಹಿಲ್ಸ್ ಬಳಿ ಈ ಘಟನೆ ನಡೆದಿದೆ. ಈ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಮಹಿಳಾ ಪೊಲೀಸರು ಆಕೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ತಿಳಿದು ಬಂದಿದೆ. ಇದಕ್ಕೂ ಮೊದಲು ಈ ಮಹಿಳೆ ಮೂರು ಬಾರಿ ಇದೇ ರೀತಿಯ ಕೃತ್ಯವೆಸಗಿದ್ದಾಳೆ ಎಂದು ತಿಳಿದು ಬಂದಿದೆ. ಅಲ್ಲದೇ ಆಕೆಯನ್ನು ಆಗಲೂ ಮಾನಸಿಕ ಆರೋಗ್ಯ (Mental Health) ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು ಎಂದು ಜುಬಿಲಿಹಿಲ್ಸ್‌ ಪೊಲೀಸ್ ಠಾಣೆಯ (Jubilee Hills police station) ಅಧಿಕಾರಿಗಳು ಹೇಳಿದ್ದಾರೆ. 

ಟೋಲ್‌ ಗೇಟ್‌ ರಸ್ತೆ ಮಧ್ಯೆ ಬಟ್ಟೆ ಕಳಚಿ ಬೆತ್ತಲಾಗಿ ಕುಳಿತ ಸ್ವಾಮೀಜಿ!

ಈ ಮಹಿಳೆ ಆಂಧ್ರಪ್ರದೇಶ (Andhra Pradesh) ಮೂಲದವರಾಗಿದ್ದು, ಸಿನಿಮಾ ರಂಗದ ಕಿರಿಯ ಕಲಾವಿದೆ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೇ ಆಕೆಯ ಕುಟುಂಬದವರು ಆಕೆಯ ವರ್ತನೆಯಿಂದ ರೋಸಿ ಹೋಗಿದ್ದಾರೆ ಎಂದು ಕೆಲವು ಅಧಿಕಾರಿಗಳು ಹೇಳಿದ್ದಾರೆ. ಆಕೆಯ ಪ್ರತಿಭಟನೆಗೆ ಕಾರಣವೇನು ಎಂದು ಕೇಳಿದಾಗ ಆಕೆ ಹಲವು ಬೇರೆ ಬೇರೆ ಕಾರಣಗಳನ್ನು ಹೇಳುತ್ತಿದ್ದಾಳೆ. ಸಿನಿಮಾದಲ್ಲಿ ಅವಕಾಶ ಗಿಟ್ಟಿಸಲು ಈ ರೀತಿ ಪ್ರತಿಭಟನೆ ಮಾಡುತ್ತಿರುವುದಾಗಿ ಒಮ್ಮ ಹೇಳಿದರೆ ಮತ್ತೊಮ್ಮೆ ಸಿನಿಮಾ ನಿರ್ಮಾಣ ಸಂಸ್ಥೆಯ ಕೆಲವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆಕೆ ಹೇಳಿದ್ದಾಳೆ. ಅಲ್ಲದೇ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುವ ಓರ್ವ ತನಗೆ ಮದುವೆಯಾಗುವುದಾಗಿ ಭರವಸೆ ನೀಡಿ ಮೋಸ ಮಾಡಿದ್ದಾಗಿ ಆಕೆ ಹೇಳಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. 

ಸಿನಿಮಾ ರಂಗದ ನಗ್ನ ಸತ್ಯ ಬಿಚ್ಚಿಟ್ಟ ಶ್ರೀ ರೆಡ್ಡಿ!

ಅಲ್ಲದೇ ಆಕೆಯ ಹಲವು ಆರೋಪಗಳು ಸತ್ಯವಲ್ಲ ಎಂದು ತಿಳಿದು ಬಂದಿದೆ. ಅಲ್ಲದೇ ಆಕೆಯ ಪ್ರತಿಭಟನೆಯ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕೆಯನ್ನು ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಇದಾದ ಬಳಿಕ ಕೋರ್ಟ್‌ ರಾಜ್ಯ ಸರ್ಕಾರ ನಡೆಸುವ ಮಾನಸಿಕ ಆರೋಗ್ಯ ಸಂಸ್ಥೆಗೆ ಆಕೆಯನ್ನು ದಾಖಲಿಸುವಂತೆ ಸಲಹೆ ನೀಡಿದೆ ಎಂದು ಪೊಲೀಸರು ಹೇಳಿದ್ದಾರೆ. 

ಈ ಹಿಂದೆ ತೆಲುಗು ನಟಿ ಶ್ರೀರೆಡ್ಡಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿ ಸುದ್ದಿಯಾಗಿದ್ದರು. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎನ್ನುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶ್ರೀ ರೆಡ್ಡಿ ಅರೆ ಬೆತ್ತಲೆಯಾಗಿ ಪ್ರತಿಭಟಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ, ಸ್ಯಾಂಡಲ್‌ವುಡ್‌​ ನಟಿ ಕವಿತಾ, ಅರೆಬೆತ್ತಲೆಯಾದ ವಿಡಿಯೋ ಮಾಡುವ ಶ್ರೀರೆಡ್ಡಿ ಅದರಲ್ಲಿ ಯಾವುದೇ ಇಂಡಸ್ಟ್ರಿ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಿ ಮಾತ ನಾಡಬೇಕು. ಇಲ್ಲವಾದಲ್ಲಿ ಆಯಾ ಸಿನಿಮಾ ಇಂಡಸ್ಟ್ರಿಗಳ ಲೆಜೆಂಡ್‌ಗಳಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಹೇಳಿ ಟಾಂಗ್​ ಕೊಟ್ಟಿದ್ದರು. ಅಲ್ಲದೇ ಅದರಲ್ಲಿ ಬಟ್ಟೆ ಬಿಚ್ಚಿ ಬೋಲ್ಡ್ ಆಗಿರುವುದು ಹೇಗೆಂದು ಹೇಳಿದ್ದರು.


ಇದರ ಬೆನ್ನಲ್ಲೇ ನಟಿ ಕವಿತಾಗೆ ಜೀವ ಬೆದರಿಕೆ ಫೋನ್​ ಕರೆಗಳು ಬಂದಿವೆ ಎಂದು ಅವರು ಹೇಳಿದ್ದರು. 24 ಗಂಟೆಯೊಳಗೆ ನೀನು ಪೋಸ್ಟ್​ ಮಾಡಿರುವ ವಿಡಿಯೋ ಡಿಲೀಟ್​ ಮಾಡಬೇಕು. ಅಲ್ಲದೇ ನೀನು ಅಪ್​ಲೋಡ್​ ಮಾಡಿರುವ ವಿಡಿಯೋ ಬಗ್ಗೆ ಕ್ಷಮೆಯಾಚಿಸಿ ಮತ್ತೊಂದು ವಿಡಿಯೋ ಅಪ್​ಲೋಡ್ ​ಮಾಡಬೇಕು, ಇಲ್ಲವಾದಲ್ಲಿ ನಿನ್ನ ಕಥೆ ಮುಗಿಸಲಾಗುತ್ತದೆ ಎಂದು ಬೆದರಿಕೆ ಒಡ್ಡಲಾಗಿದೆ ಎಂದು ಕವಿತಾ ಹೇಳಿದ್ದರು.