Asianet Suvarna News Asianet Suvarna News

ಈ ಸೆಕ್ಸೀ ನಟಿ ತನ್ನ ಸೂಪರ್ ಸ್ಟಾರ್ ಗಂಡನಿಗಿಂತ 3 ವರ್ಷ ದೊಡ್ಡವಳು ಅಂದ್ರೆ ನಂಬ್ತೀರಾ?

ಆಕೆ ಒಂದು ಕಾಲದ ಬಾಲಿವುಡ್‌ನ ಸೆಕ್ಸೀ ನಟಿ. ಇದ್ದಕ್ಕಿದ್ದಂತೆ ತೆಲುಗಿನ ಸೂಪರ್ ಸ್ಟಾರ್ ಒಬ್ಬನ ಜೊತೆ ಪ್ರೀತಿಗೆ ಬಿದ್ದುಬಿಟ್ಟಳು. ಮದುವೆಯಾದಳು. ಗಂಡನಿಗಿಂತ ಆಕೆ 3 ವರ್ಷ ದೊಡ್ಡೋಳು. ಆಮೇಲೆ ನಟಿಸಲೇ ಇಲ್ಲ. ಬನ್ನಿ ಈಕೆಯ ಕತೆ ಕೇಳೋಣ.

 

Why Namrata Shirodkar left acting after marrying Mahesh Babu bni
Author
First Published Aug 28, 2024, 7:13 PM IST | Last Updated Aug 29, 2024, 8:59 AM IST

ಟಾಲಿವುಡ್‌ನ ರಾಜಕುಮಾರ ಎಂದೇ ಖ್ಯಾತನಾಗಿರುವ ನಟ ಮಹೇಶ್ ಬಾಬು ಮತ್ತು ಆತನ ಪತ್ನಿ ನಮ್ರತಾ ಶಿರೋಡ್ಕರ್ ತೆಲುಗು ಸಿನಿಮಾ ಇಂಡಸ್ಟ್ರಿಯ ಪವರ್ ಕಪಲ್. ಇವರನ್ನು ಒಟ್ಟಿಗೇ ನೋಡಲು ಅಭಿಮಾನಿಗಳು ಇಷ್ಟಪಡುತ್ತಾರೆ. ಈ ಜೋಡಿ 2005ರಲ್ಲಿ ವಿವಾಹವಾದರು. ಇವರು ಮದುವೆಯಾಗಿ 17 ವರ್ಷಗಳು ಕಳೆದಿವೆ. ಆದರೆ ಇಂದಿಗೂ ಅವರ ನಡುವೆ ಯಾವುದೇ ವಿವಾದ ಅಥವಾ ಜಗಳ ಇಲ್ಲ. ಮದುವೆಗೆ ಮುನ್ನ ನಮ್ರತಾ ಶಿರೋಡ್ಕರ್ ಬಾಲಿವುಡ್‌ನ ಬೇಡಿಕೆಯ ನಟಿಯರಲ್ಲಿ ಒಬ್ಬಳು. ದಿಲ್ ಮಿಲ್ ಪ್ಯಾರ್ ವ್ಯಾರ್, ತೆಹಜೀಬ್ ಮೊದಲಾದ ಫಿಲಂಗಳಲ್ಲಿ ನಟಿಸಿದ್ದಳು. ಆದರೆ ಮದುವೆ ನಂತರ ನಮ್ರತಾ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಈ ಬಗ್ಗೆ ಆಕೆಗೆ ಯಾವ ಪಶ್ಚಾತ್ತಾಪವೂ ಇಲ್ಲವೇ? 

ಅಂದಹಾಗೆ ನಮ್ರತಾ ಶಿರೋಡ್ಕರ್, ಮಹೇಶ್ ಬಾಬುಗಿಂತ 3 ವರ್ಷ ದೊಡ್ಡವಳು. ಮಹೇಶ್ ಬಾಬುಗೆ 4೯ ವರ್ಷ, ನಟಿಗೆ 5೨ ವರ್ಷ. ಆದರೆ ಈಗಲೂ ಮಹೇಶ್ ಬಾಬು ಪಕ್ಕ ನಿಂತಾಗ ಅಕೆ ಆತನಿಗಿಂತಲೂ ಸೆಕ್ಸಿಯಾಗಿ, ಯವ್ವನದಿಂದ ಕಳೆಕಳೆಯಾಗಿ ಕಾಣಿಸುತ್ತಾಳೆ. ಆಕೆ ಮಹೇಶನಿಗಿಂತ ದೊಡ್ಡವಳಾಗಿರಬಹುದು, ಆದರೆ ಅವರ ಪ್ರೀತಿಗೆ ವಯಸ್ಸು ಎಂದಿಗೂ ಅಡ್ಡಿಯಾಗಿಲ್ಲ. ಇಬ್ಬರೂ ಅವಕಾಶ ಸಿಕ್ಕಾಗಲೆಲ್ಲಾ ಗುಣಮಟ್ಟದ ಸಮಯವನ್ನು ಒಟ್ಟಿಗೆ ಕಳೆಯುತ್ತಾರೆ. ಇಬ್ಬರೂ ಎರಡು ಮಕ್ಕಳಿಗೆ ತಂದೆ ತಾಯಿ. ಮಗ ಗೌತಮ್ ಮತ್ತು ಮಗಳು ಸಿತಾರಾ. ಮದುವೆ ನಂತರ ಮನೆ ಹಾಗೂ ಮಕ್ಕಳಿಗಾಗಿ ಇಂಡಸ್ಟ್ರಿ ತೊರೆದ ಬಗ್ಗೆ ಆಕೆಗೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲವಂತೆ. 

ಇತ್ತೀಚಿನ ಸಂದರ್ಶನವೊಂದರಲ್ಲಿ, ನಮ್ರತಾ ಶಿರೋಡ್ಕರ್ ತನ್ನ ನಟನೆಯನ್ನು ತಾನು ತೀರಾ ಗಂಭೀರವಾಗಿ ಪರಿಗಣಿಸಲಿಲ್ಲ ಮತ್ತು ಎಂದಿಗೂ ಹೆಸರು ಮತ್ತು ಖ್ಯಾತಿಯನ್ನು ಬಯಸಲಿಲ್ಲ ಎಂದು ಹೇಳಿದ್ದಳು. 'ಇಂಡಸ್ಟ್ರಿ ತೊರೆದಿದ್ದಕ್ಕಾಗಿ ನನಗೆ ಯಾವುದೇ ವಿಷಾದವಿಲ್ಲ. ನನ್ನ ಜೀವನದ ಬಗ್ಗೆ ಮುಂಚಿತವಾಗಿ ನಾನು ಯಾವುದೇ ಯೋಜನೆ ಮಾಡಲಿಲ್ಲ. ಎಲ್ಲವೂ ತಾನಾಗಿಯೇ ಸಂಭವಿಸಿದವು. ವಾಸ್ತವವಾಗಿ, ಮಹೇಶ್ ಬಾಬುವನ್ನು ಮದುವೆಯಾದ ನಂತರ ನನ್ನ ಜೀವನವು ಸಂಪೂರ್ಣವಾಗಿ ಬದಲಾಗಿದೆ. ಮದುವೆಯ ನಂತರದ ಅನುಭವ ಅದ್ಭುತವಾದುದು' ಅನ್ನುತ್ತಾಳೆ ನಮ್ರತಾ.

ನಮ್ರತಾ ಶಿರೋಡ್ಕರ್ ಒಂದು ಕಾಲದಲ್ಲಿ ಬಾಲಿವುಡ್‌ನ ಪ್ರಸಿದ್ಧ ಮುಖ. ಹತ್ತಾರು ಬಾಲಿವುಡ್ ಚಿತ್ರಗಳಲ್ಲಿ ಅಜಯ್ ದೇವಗನ್ ಮೊದಲಾದ ಹೀರೋಗಳ ಜೊತೆಗೆ ಕಾಣಿಸಿಕೊಂಡಿದ್ದಾಳೆ. ನಮ್ರತಾ 1993ರಲ್ಲಿ ಮಿಸ್ ಇಂಡಿಯಾ ಕಿರೀಟವನ್ನು ಗೆದ್ದಿದ್ದರು. ಅದಾದ ನಂತರ ಚಿತ್ರರಂಗಕ್ಕೆ ಕಾಲಿಟ್ಟಿದ್ದಳು. ಈಕೆ 'ಜಬ್ ಪ್ಯಾರ್ ಕಿಸಿ ಸೇ ಹೋತಾ ಹೈ', 'ವಾಸ್ತವ್', 'ಕಚ್ಚೆ ಧಾಗೆ' ಮುಂತಾದ ಹಿಂದಿ ಚಲನಚಿತ್ರಗಳು ಪ್ರಸಿದ್ಧ. ನಮ್ರತಾ ದಕ್ಷಿಣ ಭಾರತದ ಹಲವು ಚಿತ್ರಗಳಲ್ಲೂ ನಟಿಸಿದ್ದಾಳೆ.

'ಆ ಸಮಯ ಮತ್ತೆ ಬರೋಲ್ಲ...' ರಿಯಾ ಚಕ್ರವರ್ತಿ ಮುಂದೆ ಕಣ್ಣೀರು ಹಾಕಿದ ಆಮೀರ್ ಖಾನ್

ಮದುವೆಯ ನಂತರ ಆಕೆಗೆ ಕುಟುಂಬವೇ ಸರ್ವಸ್ವ ಮಾತ್ರವಲ್ಲ, ಅದರೊಂದಿಗೆ ತನ್ನ ಪತಿ ಮಹೇಶ್ ಬಾಬುವಿನ ಎಲ್ಲಾ ಹೂಡಿಕೆಗಳು ಮತ್ತು ವ್ಯವಹಾರವನ್ನು ನಿರ್ವಹಿಸುತ್ತಾಳೆ. ನಟನ ಕುಟುಂಬಕ್ಕಾಗಿ ತನ್ನ ವೃತ್ತಿಜೀವನವನ್ನು ತ್ಯಾಗ ಮಾಡಿದ ಮತ್ತು ತನ್ನ ಜೀವನವನ್ನು ಮತ್ತು ಕುಟುಂಬವನ್ನು ತುಂಬಾ ಸುಂದರವಾಗಿ ನೋಡಿಕೊಂಡ ಹೆಣ್ಣು ಈಕೆ. ಸಂದರ್ಶನವೊಂದರಲ್ಲಿ ನಮ್ರತಾ, ಪತಿ ಮಹೇಶ್ ಬಾಬು ಮತ್ತು ಮಕ್ಕಳು ಇಲ್ಲದೆ ಯಾವುದೇ ಒಂದು ವಿಶೇಷ ಸಂದರ್ಭವನ್ನು ತನ್ನ ಜೀವನದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಅವರಿಬ್ಬರೂ ಭೇಟಿಯಾದಾಗಿನಿಂದ, ತನ್ನ ಸಂಗಾತಿಗಾಗಿ ಕೃತಜ್ಞತೆಯ ಭಾವನೆಯನ್ನು ಅನುಭವಿಸದ ದಿನವೇ ಇಲ್ಲ. ಮಹೇಶ್ ಇಲ್ಲದಿದ್ದರೆ ನನ್ನ ಜೀವನ ಹೇಗೆ ಬದಲಾಗುತ್ತಿತ್ತು ಎಂದು ನನಗೆ ಗೊತ್ತಿಲ್ಲ  ಎನ್ನುತ್ತಾಳೆ ನಮ್ರತಾ. 

ಇಲ್ಲಿ ತೆಲುಗಿನ 'ವಂಶಿ' ಸಿನಿಮಾ ಚಿತ್ರೀಕರಣದ ವೇಳೆ ಸೆಟ್‌ನಲ್ಲಿ ತೆಲುಗು ಸ್ಟಾರ್ ಮಹೇಶ್ ಬಾಬು ಅವರನ್ನು ಭೇಟಿಯಾಗಿದ್ದಳು. ಅಲ್ಲಿ ಹುಟ್ಟಿಕೊಂಡ ಪ್ರೀತಿ ಮದುವೆಗೆ ತಿರುಗಿತ್ತು. ಮದುವೆಯಾಗುವ ಮುನ್ನ ಅವರಿಬ್ಬರೂ ಐದು ವರ್ಷ ಜೊತೆಗಿದ್ದರು.

‘ನಿಮ್ಮ ಗಡ್ಡ ಮುಟ್ಟಬಹುದೇ?’: ಕೆಬಿಸಿ ಸ್ಪರ್ಧಿಯ ವಿಚಿತ್ರ ಮನವಿಗೆ ಅಮಿತಾಭ್‌ ಬಚ್ಚನ್‌ ಶಾಕ್!
 

Latest Videos
Follow Us:
Download App:
  • android
  • ios