Asianet Suvarna News Asianet Suvarna News

‘ನಿಮ್ಮ ಗಡ್ಡ ಮುಟ್ಟಬಹುದೇ?’: ಕೆಬಿಸಿ ಸ್ಪರ್ಧಿಯ ವಿಚಿತ್ರ ಮನವಿಗೆ ಅಮಿತಾಭ್‌ ಬಚ್ಚನ್‌ ಶಾಕ್!

ಖ್ಯಾತ ನಟ ಅಮಿತಾಭ್‌ ಬಚ್ಚನ್‌ ನಡೆಸುವ ಕೌನ್‌ ಬನೇಗಾ ಕರೋಡ್‌ಪತಿ ಯಲ್ಲೊ (ಕೆಬಿಸಿ) ಸ್ಪರ್ಧಿಯೊಬ್ಬರು ಕೇಳಿದ ಪ್ರಶ್ನೆಗೆ ಸ್ವತಃ ಬಚ್ಚನ್‌ ಹೌಹಾರಿದ್ದಾರೆ. ಏಕೆಂದರೆ ಅಲ್ಕಾ ಸಿಂಗ್‌ ಎಂಬಾಕೆ ಕಾರ್ಯಕ್ರಮದ ಮಧ್ಯದಲ್ಲಿ ಅಮಿತಾಭ್‌ರ ಗಡ್ಡವನ್ನು ಮುಟ್ಟುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
 

Kaun Banega Crorepati 16 Contestant Alka Singh requests host Amitabh Bachchan to let her touch his beard gvd
Author
First Published Aug 28, 2024, 8:09 AM IST | Last Updated Aug 28, 2024, 8:51 AM IST

ಮುಂಬೈ (ಆ.28): ಖ್ಯಾತ ನಟ ಅಮಿತಾಭ್‌ ಬಚ್ಚನ್‌ ನಡೆಸುವ ಕೌನ್‌ ಬನೇಗಾ ಕರೋಡ್‌ಪತಿ ಯಲ್ಲೊ (ಕೆಬಿಸಿ) ಸ್ಪರ್ಧಿಯೊಬ್ಬರು ಕೇಳಿದ ಪ್ರಶ್ನೆಗೆ ಸ್ವತಃ ಬಚ್ಚನ್‌ ಹೌಹಾರಿದ್ದಾರೆ. ಏಕೆಂದರೆ ಅಲ್ಕಾ ಸಿಂಗ್‌ ಎಂಬಾಕೆ ಕಾರ್ಯಕ್ರಮದ ಮಧ್ಯದಲ್ಲಿ ಅಮಿತಾಭ್‌ರ ಗಡ್ಡವನ್ನು ಮುಟ್ಟುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಹಾಟ್‌ ಸೀಟ್‌ನಲ್ಲಿ ಕುಳಿತಿದ್ದ ಅಲ್ಕಾ, ಪ್ರಶ್ನೋತ್ತರಗಳ ನಡುವೆ ಈ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಒಂದು ಕ್ಷಣ ಅವಾಕ್ಕಾದ ಬಚ್ಚನ್ ಆವರ ಆಸೆಗೆ ಕಾರಣ ಕೇಳಿದ್ದಾರೆ. ಆಗ ಆಕೆ ‘ನನ್ನ ಸಹೋದರ ಸದಾ ಕ್ಲೀನ್‌ ಶೇವ್‌ ಮಾಡಿಕೊಳ್ಳುತ್ತಾನೆ. ಹಾಗಾಗಿ ನನಗೆ ನಿಮ್ಮ ಬಿಳಿ ಗಡ್ಡ ಮುಟ್ಟುವ ಆಸೆಯಾಗಿದೆ’ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಚ್ಚನ್, ‘ನಿಮ್ಮ ಸಹೋದರ 87 ವರ್ಷದವನಾದಾಗ ಅವನಿಗೂ ಬಿಳಿ ಗಡ್ಡ ಬರುತ್ತದೆ’ ಎಂದು ತಮಾಷೆ ಮಾಡುತ್ತಾ, ಕಾರ್ಯಕ್ರಮದ ನಂತರ ಅನುಮತಿಸುವುದಾಗಿ ಹೇಳಿದ್ದಾರೆ.

ಮ.ಪ್ರ.ದ ಕುನೋ ಅರಣ್ಯದಲ್ಲಿ ಮತ್ತೊಂದು ಚೀತಾ ಸಾವು: ಮಧ್ಯಪ್ರದೇಶದ ಕುನೋ ಚೀತಾ ಅಭಯಾರಣ್ಯದಲ್ಲಿ ಮತ್ತೊಂದು ಚೀತಾ ಅಸುನೀಗಿದೆ.ಮಂಗಳವಾರ ಬೆಳಗ್ಗೆ 10:30ರ ವೇಳೆಗೆ ‘ಪವನ್‌’ ಎಂಬ ಚೀತಾ ಮೃತದೇಹ ಪತ್ತೆಯಾಗಿದೆ. ಅದು ಎಷ್ಟು ಹೊತ್ತಾದರೂ ಚಲಿಸದ ಕಾರಣ ಪರೀಕ್ಷಿಸಿದಾಗ ಅದರ ಅರ್ಧ ದೇಹ ನೀರಿನಲ್ಲಿ ಮುಳುಗಿರುವುದು ತಿಳಿದುಬಂದಿದೆ. ಅದರ ದೇಹದಲ್ಲಿ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಅದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ.5ರಂದೂ ಒಂದು ಚೀತಾ ಅಸುನೀಗಿತ್ತು. ಪ್ರಸ್ತುತ ಕುನೋದಲ್ಲಿ 12 ಮರಿಗಳು ಸೇರಿದಂತೆ 24 ಚೀತಾಗಳು ಉಳಿದಿವೆ.

ಪರಪ್ಪನ ಅಗ್ರಹಾರ ಜೈಲಲ್ಲಿ ಆತಿಥ್ಯ: ದರ್ಶನ್ ವಿಚಾರಣೆಗೆ ಕೋರ್ಟ್‌ ಅನುಮತಿ

‘ಎಮರ್ಜೆನ್ಸಿ’ ಚಿತ್ರದ ಕಾರಣ ಜೀವ ಬೆದರಿಕೆ: ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಅವರು ತಮ್ಮ ಮುಂಬರುವ ಚಿತ್ರ ‘ಎಮರ್ಜೆನ್ಸಿ’ ಬಿಡುಗಡೆಗೆ ಸಂಬಂಧಿಸಿದಂತೆ ಬೆದರಿಕೆ ಬಂದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.ಚಿತ್ರದಲ್ಲಿ ಕಂಗನಾ ಅವರು ಸಿಖ್‌ ಅಂಗರಕ್ಷಕರಿಂದ ಹತ್ಯೆಗೀಡಾದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿಹಾಂಗ್‌ ಸಿಖ್ಖರ ವೇಷ ಧರಿಸಿ 6 ಪುರುಷರು ಪರಸ್ಪರ ಮಾತನಾಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಅದರಲ್ಲಿ ಮಾತನಾಡುವ ಅವರು, ‘ಸಿನಿಮಾ ಬಿಡುಗಡೆಯಾದರೆ ಸಿಖ್ ಸಮುದಾಯ ಖಂಡಿಸುತ್ತದೆ. ನಿಮ್ಮ ಚಲನಚಿತ್ರವನ್ನು ಚಪ್ಪಲಿಗಳೊಂದಿಗೆ ಸ್ವೀಕರಿಸಲಾಗುತ್ತದೆ. ಇಂದಿರಾ ಗಾಂಧಿಗೆ ಆದ ಗತಿಯೇ ನಿಮಗೂ ಆದೀತು. ತಲೆ ಕತ್ತರಿಸಲೂ ನಾವು ಅಂಜುವುದಿಲ್ಲ’ ಎನ್ನುತ್ತಾರೆ.ಇದನ್ನು ಪೊಲೀಸರ ಗಮನಕ್ಕೆ ತಂದಿರುವ ಕಂಗನಾ, ರಕ್ಷಣೆಗೆ ಮನವಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios