ಕತ್ತು ಮುಟ್ಟಿದ್ರೆ ಲೈಂಗಿಕ ಉತ್ತೇಜನ! ಬಾಲಿವುಡ್ ಹೇರ್ ಸ್ಟೈಲಿಸ್ಟ್ ಗೂ ಇದಕ್ಕೂ ಸಂಬಂಧ ಏನು?

ಬಾಲಿವುಡ್ ನಟಿಯರಿಗೆ ಪುರುಷ ಹೇರ್ ಸ್ಟೈಲಿಸ್ಟ್ ಇರೋದಿಲ್ಲ. ಹುಡುಗಿಯರೇ ಕೇಶ ವಿನ್ಯಾಸ ಮಾಡ್ತಾರೆ. ಇದಕ್ಕೆ ಕಾರಣ ಏನು ಎಂಬುದನ್ನು ನಿಖಿಲ್ ಅಡ್ವಾಣಿ ಹೇಳಿದ್ದಾರೆ. 
 

Why is there no male hair stylist in Bollywood for actresses

ಬಾಲಿವುಡ್ (Bollywood) ಗೆ ಸಂಬಂಧಿಸಿದಂತೆ ಅನೇಕ ಕುತೂಹಲಕಾರಿ ವಿಷ್ಯಗಳು ಆಗಾಗ ಸುದ್ದಿಗೆ ಬರ್ತಿರುತ್ತವೆ. ಬಾಲಿವುಡ್ ತನ್ನದೇ ಆದ ಕೆಲಸದ ಶೈಲಿ ಹಾಗೂ ನಿಯಮಗಳನ್ನು ಹೊಂದಿದೆ. ಇಲ್ಲಿ ಪಕ್ಷಪಾತ, ಸ್ತ್ರೀ ದ್ವೇಷ ಸೇರಿದಂತೆ ಅನೇಕ ವಿಷ್ಯಗಳಿವೆ. ಕಲಾವಿದರು ಅನೇಕ ಬಾರಿ ಈ ವಿಷ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ, ಧ್ವನಿ ಎತ್ತಿದ್ದಾರೆ. ನಟರಿಗಿಂತ ನಟಿಯರಿಗೆ ಕಡಿಮೆ ಸಂಭಾವನೆ (Salary) ನೀಡಲಾಗುತ್ತದೆ, ಮಹಿಳಾ ಸಿಬ್ಬಂದಿ ಮೇಲೆ ಶೋಷಣೆ ನಡೆಯುತ್ತದೆ ಎಂಬೆಲ್ಲ ಸಂಗತಿ ನಿಮಗೆ ತಿಳಿದಿದೆ. ಆದ್ರೀಗ  ನಿರ್ದೇಶಕ ನಿಖಿಲ್ ಅಡ್ವಾಣಿ (Director Nikhil Advani) ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಪ್ರೈಮ್ ವಿಡಿಯೋದ ಓ ವುಮಾನಿಯಾ  ಪ್ಯಾನೆಲ್‌ನಲ್ಲಿ ನಡೆದ ಸಂವಾದದಲ್ಲಿ ನಿಖಿಲ್ ಅಡ್ವಾಣಿ ಕೂಡ ಭಾಗವಹಿಸಿದ್ದರು. ಈ ವೇಳೆ ಬಾಲಿವುಡ್ ನ ಕಲಾವಿದೆಯರಿಗೆ ಯಾಕೆ ಮಹಿಳಾ ಹೇರ್ ಸ್ಟೈಲಿಸ್ಟ್ (Hair Stylist) ಇರ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದನ್ನು ಕೇಳಿದ ಜನರು ಅಚ್ಚರಿಗೊಳಗಾಗಿದ್ದಾರೆ. 

ಯಾಕಿರೋದಿಲ್ಲ ಪುರುಷ ಹೇರ್ ಸ್ಟೈಲಿಸ್ಟ್? : ಬಾಲಿವುಡ್ ನಲ್ಲಿ ನಟಿಯರಿಗೆ ಹೇರ್ ಸ್ಟೈಲ್ ಮಾಡೋದು ಮಹಿಳಾ ಹೇರ್ ಸ್ಟೈಲಿಸ್ಟ್ಗಳು ಮಾತ್ರ. ಅಲ್ಲಿ ಪುರುಷ ಹೇರ್ ಸ್ಟೈಲಿಸ್ಟ್ ಗಳನ್ನು ನೇಮಕ ಮಾಡುವಂತಿಲ್ಲ. ಇದು ಯೂನಿಯಮ್ ನಿಯಮ. ಆದ್ರೆ ಇದಕ್ಕೆ ಕಾರಣ ಮಾತ್ರ ಆಘಾತಕಾರಿಯಾಗಿದೆ.  ಮಾತಿನ ಮಧ್ಯೆ ಬಾಲಿವುಡ್ ನಲ್ಲಿ ಹೇರ್ ದೀದಿ ಮತ್ತು ಮೇಕ್ ಅಪ್ ದಾದಾ ಯಾಕಿರ್ತಾರೆ ಗೊತ್ತಾ? ಇದು ಇಂಟರೆಸ್ಟಿಂಗ್ ಆಗಿದೆ ಕೇಳಿ ಎನ್ನುವ ನಿಖಿಲ್ ಅಡ್ವಾಣಿ, ಪುರುಷ ಹೇರ್ ಸ್ಟೈಲಿಸ್ಟ್ ಗಳು ಕಲಾವಿದೆಯರ ಕತ್ತು ಸ್ಪರ್ಶಿಸಿದಾಗ ಅದು ಲೈಂಗಿಕ ಉತ್ತೇಜನಕ್ಕೆ ಕಾರಣವಾಗುತ್ತದೆ. ಹಾಗಾಗಿ ಇದನ್ನು ನಿಷೇಧಿಸಲಾಗಿದೆ. ಯೂನಿಯನ್ ಅದಕ್ಕೆ ಅವಕಾಶ ನೀಡುವುದಿಲ್ಲ. ಮಹಿಳಾ ಹೇರ್ ಸ್ಟೈಲಿಸ್ಟ್ ಕಲಾವಿದೆಯರ ಕತ್ತು ಸ್ಪರ್ಶಿಸಿದಾಗ ಅವರು ಉತ್ತೇಜನಗೊಳ್ಳುವುದಿಲ್ಲ. ಈ ಮಾತನ್ನು ಕೇಳಿ ನಾನು ಶಾಕ್ ಆಗಿದ್ದೆ. ನಂತ್ರ ನಾವೂ ಒಬ್ಬ ಮಹಿಳಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಅನಿವಾರ್ಯತೆ ಎದುರಾಯ್ತು ಎಂದು ನಿಖಿಲ್ ಅಡ್ವಾಣಿ ಹೇಳಿದ್ದಾರೆ. 

ಕಾಲ್ ಮೇಲೆ ಕಾಲ್ ಹಾಕಿ ಕುಳಿತ ಭಾಗ್ಯಾ, ಶ್ರೇಷ್ಠಾ ಬಾಳು ಅಯೋಮಯ

ನಿರ್ದೇಶಕರಿಂದ ಈ ಮಾತು ಕೇಳಿ ರಿಚಾ ಚಡ್ಡಾ ಅಚ್ಚರಿಗೊಂಡಿದ್ದಾರೆ. ಪ್ಯಾನಲ್ ನಲ್ಲಿದ್ದ ಅನನ್ಯಾ ಪಾಂಡೆ, ಅನುಪಮಾ ಚೋಪ್ರಾ ಕೂಡ ಈ ಮಾತು ಕೇಳಿ ಆಶ್ಚರ್ಯ ವ್ಯಕ್ತಪಡಿಸಿದ್ರು. 

ಮಹಿಳೆಯರಿಗೆ ಇರೋದು ಇಷ್ಟೇ ಉದ್ಯೋಗ ! :  ಪ್ಯಾನಲ್ ನಲ್ಲಿ ಮಹಿಳೆಯರ ಉದ್ಯೋಗದ ಬಗ್ಗೆ ಚರ್ಚೆ ನಡೆದಿದೆ. ಬಾಲಿವುಡ್ ನಲ್ಲಿ ಅನೇಕ ಕೆಲಸಗಳು ಮಹಿಳೆಯರಿಗೆ ಸಿಗ್ತಿಲ್ಲ ಎಂಬ ಬಗ್ಗೆ ಚರ್ಚೆ ಶುರುವಾದಾಗ ನಿಖಿಲ್ ಅಡ್ವಾಣಿ, ಬಾಲಿವುಡ್ ಉದ್ಯಮದಲ್ಲಿ 170 ಉದ್ಯೋಗಗಳಿವೆ. ಅದರಲ್ಲಿ ಮಹಿಳೆಯರು ಕೇವಲ 9 ಉದ್ಯೋಗಗಳಿಗೆ ಮಾತ್ರ ಸಮರ್ಥರಾಗಿದ್ದಾರೆ ಎಂದು ಭಾವಿಸಲಾಗುತ್ತದೆ. ಪ್ರಾಜೆಕ್ಟ್ ಒಂದರ ಬಜೆಟ್ ಲೀಸ್ಟ್ ನೋಡ್ತಿದ್ದಾಗ ನನಗೆ ಈ ವಿಷ್ಯ ಅರಿವಿಗೆ ಬಂತು ಎನ್ನುತ್ತಾರೆ ನಿಖಿಲ್. ಅವರ ಮಾತಿಗೆ ಪ್ಯಾನಲ್ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಾರೆ. ಹೇರ್, ಮೇಕಪ್, ಕಾಸ್ಟ್ಯೂಮ್ ಡಿಸೈನ್ ಬಿಟ್ಟು ಮಹಿಳೆ ಇನ್ನೂ ಎಲ್ಲ ಕೆಲಸವನ್ನು ಮಾಡುತ್ತಿದ್ದಾಳೆ ಎನ್ನುತ್ತಾರೆ. ಆಗ ನಿಖಿಲ್ ಈ ಹೇರ್ ದೀದಿ ಮತ್ತು ಮೇಕಪ್ ದಾದಾ ಬಗ್ಗೆ ಹೇಳ್ತಾರೆ. 

ಈ ವಾರ ಒಟಿಟಿಯಲ್ಲಿ ಹೊಸ ಸಿನಿಮಾ, ವೆಬ್‌ ಸಿರೀಸ್‌ಗಳ ಧಮಾಕಾ? ಯಾವೆಲ್ಲಾ ಚಿತ್ರಗಳನ್ನು ನೋಡಬಹುದು?

2003 ರಲ್ಲಿ ಧರ್ಮ ಪ್ರೊಡಕ್ಷನ್ಸ್ ಅಡಿಯಲ್ಲಿ ಅಡ್ವಾಣಿ ತಮ್ಮ ಮೊದಲ ಚಲನಚಿತ್ರವನ್ನು ನಿರ್ದೇಶಿಸಿದ್ದರು. ಶಾರುಖ್ ಖಾನ್ ನಟಿಸಿದ ಕಲ್ ಹೋ ನಾ ಹೋ ಅವರಿಗೆ ಬ್ರೇಕ್ ನೀಡಿತ್ತು. 

Latest Videos
Follow Us:
Download App:
  • android
  • ios