ಈ ವಾರ ಒಟಿಟಿಯಲ್ಲಿ ಹೊಸ ಸಿನಿಮಾ, ವೆಬ್ ಸಿರೀಸ್‌ಗಳ ಧಮಾಕಾ? ಯಾವೆಲ್ಲಾ ಚಿತ್ರಗಳನ್ನು ನೋಡಬಹುದು?
ಈ ವಾರ ಹಲವು ಹಿಂದಿ, ತೆಲುಗು, ಮಲಯಾಳಂ ಮತ್ತು ಹಾಲಿವುಡ್ ಸಿನಿಮಾಗಳು ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುತ್ತಿವೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಸೋನಿ ಲಿವ್, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಜಿಯೋ ಸಿನಿಮಾದಲ್ಲಿ ಹೊಸ ಸಿನಿಮಾಗಳು ಮತ್ತು ವೆಬ್ ಸರಣಿಗಳು ಲಭ್ಯವಿರುತ್ತವೆ.
ಕಳೆದ ಎರಡ್ಮೂರು ವರ್ಷಗಳಿಂದ ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಿಸುವ ಜನರ ಸಂಖ್ಯೆ ಇಳಿಮುಖವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಕಾರಣ ಒಟಿಟಿದು.
ಥಿಯೇಟರ್‌ನಲ್ಲಿ ಬಿಡುಗಡೆಯಾಗುವ ಸಿನಿಮಾಗಳು ಕೆಲವೇ ದಿನಗಳಲ್ಲಿ ಒಟಿಟಿ ವೇದಿಕೆಯಲ್ಲಿಯೂ ರಿಲೀಸ್ ಆಗುತ್ತವೆ. ಅಮೆಜಾನ್, ಸೋನಿ ಲಿವ್, ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜಿಯೋ ಸಿನಿಮಾ ಸೇರಿದಂತೆ ಹಲವು ಒಟಿಟಿ ವೇದಿಕೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವೆ.
ಈ ವಾರವೂ ಸಹ ಹಿಂದಿ, ತೆಲುಗು, ಮಲಯಾಳಂ ಸೇರಿದಂತೆ ಹಾಲಿವುಡ್ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಯಾವ ಒಟಿಟಿಯಲ್ಲಿ ಯಾವ ಸಿನಿಮಾ ರಿಲೀಸ್ ಆಗುತ್ತಿದೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ದಿ ಸಿಕ್ಸ್ ಟ್ರಿಪಲ್ ಏಟ್ (The Six Triple Eight)
ದಿ ಸಿಕ್ಸ್ ಟ್ರಿಪಲ್ ಏಟ್ (The Six Triple Eight)
ಡಿಸೆಂಬರ್ 20ರಂದು ಅಮೆರಿಕನ್ ಡ್ರಾಮಾ ದಿ ಸಿಕ್ಸ್ ಟ್ರಿಪಲ್ ಏಟ್ ಬಿಡುಗಡೆಯಾಗಲಿದೆ. ಈ ಕಥೆ 855ರ ಮಹಿಳೆಯರ ಸುತ್ತ ಸುತ್ತುತ್ತದೆ. ತಾರತಮ್ಯ ವಿರುದ್ಧ ಈ ಕಥೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
ಜಿಬ್ರಾ (Zebra)
ಜಿಬ್ರಾ (Zebra)
ತೆಲುಗು ಆಕ್ಷನ್ ಸಿನಿಮಾ ಜಿಬ್ರಾ ಡಿಸೆಂಬರ್ 20ರಂದು Aha ಪ್ಲಾಟ್‌ಫಾರಂನಲ್ಲಿ ಬಿಡುಗಡೆಯಾಗಲಿದೆ. ಪ್ರಿಯಾ ಭವಾನಿ ಶಂಕರ್, ಸತ್ಯ ದೇವ್, ಜೆನಿಫರ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ವೈಟ್ ಕಾಲರ್ ಗುಂಪಿನ ವಂಚಕರ ಕಥೆ ಈ ಸಿನಿಮಾ ಹೊಂದಿದೆ.
ಬೌಗೇನ್ವಿಲ್ಲಾ (Bougainvillea)
ಮಲಯಾಳಂ ಚಲನಚಿತ್ರ, ಬೌಗೆನ್‌ವಿಲ್ಲಾ, ಸೋನಿಲೈವ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಬಾಲಕಿಯೊಬ್ಬಳು ಕಾಣೆಯಾಗುತ್ತಾಳೆ. ಆಕೆಯ ಹುಡುಕಾಟಕ್ಕೆ ದಂಪತಿ ಮುಂದಾಗುತ್ತಾರೆ. ಇದುವೇ ಚಿತ್ರದ ಒನ್ ಲೈನ್ ಕಥೆ. SonyLIVನಲ್ಲಿ ಲಭ್ಯವಿದ್ದು, ವೀಕ್ಷಿಸಬಹುದು.
ಯೋ ಯೋ ಹನಿ ಸಿಂಗ್: ಫೇಮಸ್
ಯೋ ಯೋ ಹನಿ ಸಿಂಗ್: ಫೇಮಸ್ (Yo Yo Honey Singh: Famous)
ಪಂಜಾಬ್ ಮೂಲದ ಬಾಲಿವುಡ್ ಗಾಯಕ ಯೋ ಯೋ ಹನಿ ಸಿಂಗ್ ಅವರ ಜೀವನ ಕಥೆಯ ಡಾಕ್ಯೂಮೆಂಟರಿ ಡಿಸೆಂಬರ್ 20ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಈ ಸಾಕ್ಷ್ಯಚಿತ್ರದಲ್ಲಿ ಹನಿಸಿಂಗ್ ಕುರಿತ ಅಚ್ಚರಿ ವಿಷಯಗಳು ಹೊರಬರುವ ಸಾಧ್ಯತೆಗಳಿವೆ.
ಮೂನ್‌ವಾಕ್ (Moonwalk)
ಸಮಿರ್ ಕೊಚ್ಚಾರ್, ಸಿಧಿ ಸಿಂಗ್ ಮತ್ತು ಅಂಶುಮಾನ್ ಪುಷ್ಕರ್ ನಟನೆಯ ಮೂನ್‌ವಾಕ್ ವೆಬ್ ಸಿರೀಸ್ ಡಿಸೆಂಬರ್ 20ರಂದು ಜಿಯೋ ಸಿನಿಮಾ ಒಟಿಟಿ ಪ್ಲಾಟ್‌ಫಾರಂನಲ್ಲಿ ಬಿಡುಗಡೆಯಾಗಲಿದೆ. ಇದು ಇಬ್ಬರು ಕಳ್ಳರ ಕಥೆಯಾಗಿದ್ದು, ಸ್ಥಳೀಯರೊಂದಿಗಿನ ಇಬ್ಬರ ಒಡನಾಟವನ್ನು ತಮಾಷೆಯಾಗಿ ತೋರಿಸಲಾಗಿದೆ.
ಇನ್ನಿತರ ಸಿನಿಮಾಗಳು