ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಮದುವೆಯ ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿಲ್ಲ. ಶಾರುಖ್‌ನನ್ನು  ಮದುವೆಯಾಗಿ ಮೂರು ದಶಕಗಳು ಕಳೇದರೂ ಹಿಂದೂ ಆಗಿಯೇ ಆಕೆ ಮುಂದುವರಿದಿರುವುದು ಅಚ್ಚರಿದಾಯಕ ಹಾಗೂ ಕುತೂಹಲಕರ. 

ಇತ್ತೀಚೆಗೆ ಶಾರುಖ್‌ ಖಾನ್‌ ಜೊತೆಗೆ ಆತನ ಪತ್ನಿ ಗೌರಿ ಹಿಜಾಬ್‌ ಧರಿಸಿರುವಂಥ ಫೋಟೋಗಳು ವೈರಲ್‌ ಆಗಿದ್ದವು. ಗೌರಿ ಚಿಬ್ಬರ್‌ ಎಂಬ ಹೆಸರಿನ ಈಕೆ ಗೌರಿ ಖಾನ್‌ ಆಗಿಯೇಬಿಟ್ಟಿದ್ದಾಳೆ ಎಂದು ಹಲವರು ಸುದ್ದಿ ಮಾಡಿದ್ದರು. ಆದರೆ ಇದು ನಿಜವಲ್ಲ, ಎಐ ಸಹಾಯದಿಂದ ಈ ಫೋಟೋ ಸೃಷ್ಟಿಸಿ ಹರಿಬಿಡಲಾಗಿದೆ ಎಂದು ನಂತರ ಗೊತ್ತಾಗಿತ್ತು. ಹಾಗಾದರೆ ಗೌರಿ, ಶಾರುಖ್‌ನನ್ನು ಮದುವೆಯಾದ ಬಳಿಕ ಮುಸ್ಲಿಂ ಆಗಿಲ್ಲವೆ? ಇಲ್ಲ. ಆಕೆ ಇಸ್ಲಾಂಗೆ ಮತಾಂತರ ಆಗಿಲ್ಲ. ಇದರ ಬಗ್ಗೆ ಆಕೆಯ ನಿಲುವೂ ಕುತೂಹಲಕರವಾಗಿದೆ ಹಾಗೂ ಸ್ಪಷ್ಟವಾಗಿದೆ. 

ಶಾರುಖ್ ಖಾನ್ ಮತ್ತು ಗೌರಿ ಚಿಬ್ಬರ್‌ ಅಕ್ಟೋಬರ್ 25, 1991ರಂದು ವಿವಾಹವಾದರು. ಇವರಿಗೆ ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಮ್ ಖಾನ್ ಎಂಬ ಮೂವರು ಮಕ್ಕಳಿದ್ದಾರೆ. ನಟ ಶಾರುಖ್ ಖಾನ್ ಮತ್ತು ಇಂಟೀರಿಯರ್ ಡಿಸೈನರ್ ಗೌರಿ ಮದುವೆಯಾಗಿ ಮೂರು ದಶಕಗಳು ಕಳೆದಿವೆ. ಶಾರುಖ್ ಮುಸ್ಲಿಂ ಆಗಿದ್ದರಿಂದ ಗೌರಿಯ ಪೋಷಕರು ಆರಂಭದಲ್ಲಿ ಅವರ ಮದುವೆಗೆ ವಿರೋಧಿಸಿದ್ದರು. ಕಾಫಿ ವಿತ್ ಕರಣ್‌ನ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದ ಗೌರಿ, ಈ ಕುರಿತು ಮಾತನಾಡಿದ್ದರು.

ಕಾಫಿ ವಿತ್ ಕರಣ್ ಸಂಚಿಕೆಯ ವೀಡಿಯೊದಲ್ಲಿ, ಹೃತಿಕ್ ರೋಷನ್ ಅವರ ಆಗಿನ ಪತ್ನಿ ಸುಸಾನ್ ಖಾನ್ ಜೊತೆಗೆ ಗೌರಿ ಕಾಣಿಸಿಕೊಂಡರು. “ಆರ್ಯನ್, ಶಾರುಖ್‌ಗೆ ತುಂಬಾ ಇಷ್ಟ. ಅವನು ಇಸ್ಲಾಂ ಧರ್ಮವನ್ನು ಅನುಸರಿಸುತ್ತಾನೆ ಎಂದು ನಾನು ಭಾವಿಸುತ್ತೇನೆ. ಅವನು ಯಾವಾಗಲೂ, ‘ನಾನು ಮುಸ್ಲಿಂ’ ಎಂದು ಹೇಳುತ್ತಾನೆ. ಇದನ್ನು ನನ್ನ ತಾಯಿಗೆ ಹೇಳಿದಾಗ ಅವಳು, ‘ಏನು ಹೇಳ್ತಿದೀಯಾʼ ಅಂತಾಳೆ. ಆದರೆ ನಮ್ಮ ನಡುವೆ ಒಂದು ಸಮತೋಲನವಿದೆ. ನಾನು ಶಾರುಖ್‌ನ ಧರ್ಮವನ್ನು ಗೌರವಿಸುತ್ತೇನೆ. ಆದರೆ ನಾನು ಮತಾಂತರಗೊಂಡು ಮುಸ್ಲಿಂ ಆಗುತ್ತೇನೆ ಎಂದು ಅರ್ಥವಲ್ಲ. ನಾನು ಅದರಲ್ಲಿ ನಂಬಿಕೆ ಇಟ್ಟಿಲ್ಲ. ಪ್ರತಿಯೊಬ್ಬರೂ ಅವರವರ ಧರ್ಮವನ್ನು ಅನುಸರಿಸಬೇಕು ಎಂದು ನಾನು ಭಾವಿಸುತ್ತೇನೆ. ಆದರೆ ನಿಸ್ಸಂಶಯವಾಗಿ ಇನ್ನೊಂದರ ಬಗ್ಗೆ ಅಗೌರವ ಇರಬಾರದು. ಶಾರುಖ್ ನನ್ನ ಧರ್ಮವನ್ನು ಅಗೌರವಿಸುವುದಿಲ್ಲ” ಎಂದು ಹೇಳಿದ್ದರು ಗೌರಿ.

ಕೆಲವು ವರ್ಷಗಳ ಹಿಂದೆ ಡ್ಯಾನ್ಸ್ ಪ್ಲಸ್ 5ರ ಸೆಟ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾರುಖ್, "ನಾವು ಎಂದಿಗೂ ಹಿಂದೂ-ಮುಸ್ಲಿಂ ಎಂದು ಚರ್ಚಿಸಿಲ್ಲ. ನನ್ನ ಹೆಂಡತಿ ಹಿಂದೂ, ನಾನು ಮುಸ್ಲಿಂ ಮತ್ತು ನಮ್ಮ ಮಕ್ಕಳು ಹಿಂದೂಸ್ಥಾನ್. ನನ್ನ ಮಗಳು ಚಿಕ್ಕವಳಿದ್ದಾಗ, ಅವಳ ಶಾಲೆಯಲ್ಲಿ ಅರ್ಜಿಯಲ್ಲಿ ಆಕೆಯ ಧರ್ಮವನ್ನು ಬರೆಯಬೇಕಾಗಿತ್ತು. ನನ್ನ ಮಗಳು ಒಮ್ಮೆ ನನ್ನ ಬಳಿಗೆ ಬಂದು ‘ನಮ್ಮ ಧರ್ಮ ಯಾವುದು?’ ಎಂದು ಕೇಳಿದಳು. ನಾನು ಅವಳ ಅರ್ಜಿಯಲ್ಲಿ ನಾವು ಭಾರತೀಯರು, ನಮಗೆ ಧರ್ಮವಿಲ್ಲ ಎಂದು ಬರೆದಿದ್ದೆ" ಎಂದಿದ್ದ.

ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪ್ರೇಮಕಥೆಯು ಬಾಲಿವುಡ್‌ನ ಜನಪ್ರಿಯ ಪ್ರೇಮಕಥೆಗಳಲ್ಲಿ ಒಂದು. ಭಿನ್ನ ಧರ್ಮಗಳ ಈ ಜೋಡಿ ಅನೇಕ ಕಷ್ಟಗಳನ್ನು ದಾಟಿ ಅಂತಿಮವಾಗಿ ಮದುವೆಯಾಯಿತು. ಈ ಮಧ್ಯೆ ಅನೇಕ ಸವಾಲುಗಳು ಬಂದವು. ಗಮನಿಸಬೇಕಾದ ವಿಷಯವೆಂದರೆ ಶಾರುಖ್ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ. ಶಾರುಖ್ ಖಾನ್ ಅವರ ಮನೆಯಲ್ಲಿ ಈದ್ ಮತ್ತು ದೀಪಾವಳಿಯನ್ನು ಆಚರಿಸಲಾಗುತ್ತದೆ. ಅವರ ಮನೆ ಮನ್ನತ್ ಅನ್ನು ಧಾರ್ಮಿಕ ಏಕತೆಯ ಸಂಕೇತ.

ಯಾರಿಂದನೂ ನಿನ್ನ ಜೀವನ ನಿಲ್ಲಬಾರ್ದು: ವುಮೆನ್ಸ್ ಡೇ ದಿನ ಮಗಳು ಶ್ರೀಜಾ ಕಷ್ಟಗಳ ಬಗ್ಗೆ ಹೇಳಿದ ಚಿರಂಜೀವಿ!

ಗೌರಿ ಚಿಬ್ಬರ್‌ ಈಗ ಗೌರಿ ಖಾನ್‌ ಆಗಿದ್ದರೂ ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದಾರೆ. ವಿಶೇಷವೆಂದರೆ, ಮೊದಲು ಶಾರುಖ್​-ಗೌರಿ ರಿಜಿಸ್ಟರ್ ಮದುವೆ ಆಗಿದ್ದರು. ಆನಂತರ ಮುಸ್ಲಿಂ ಸಂಪ್ರದಾಯದ ಪ್ರಕಾರ, ನಂತರ ಪಂಜಾಬಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆದರು. ಆಗ 'ರಾಜು ಬನ್ ಗಯಾ ಹೀರೋ' ಸಿನಿಮಾದಲ್ಲಿ ಶಾರುಖ್ ನಟಿಸುತ್ತಿದ್ದರು. ಆ ಸಿನಿಮಾದ ಸೆಟ್‌ನಿಂದಲೇ ಸ್ಯೂಟ್ ಅನ್ನು ತಂದಿದ್ದ ಶಾರುಖ್, ಅದನ್ನೇ ಮದುವೆಗೆ ಧರಿಸಿದ್ದರಂತೆ! 1997ರ ನವೆಂಬರ್‌ನಲ್ಲಿ ಆರ್ಯನ್ ಖಾನ್‌ಗೆ ಗೌರಿ ಜನ್ಮ ನೀಡಿದರು. 2000ರಲ್ಲಿ ಸುಹಾನಾ ಖಾನ್ ಕೂಡ ಜನಿಸಿದಳು. ಮದುವೆಯಾಗಿ 22 ವರ್ಷಗಳ ನಂತರ ಬಾಡಿಗೆ ತಾಯ್ತನದ ಮೂಲಕ ಮತ್ತೊಂದು ಮಗುವನ್ನು ಈ ದಂಪತಿ ಪಡೆದುಕೊಂಡರು. ಆ ಮಗುವಿಗೆ ಅಬ್ರಾಮ್ ಎಂದು ಹೆಸರಿಟ್ಟಿದ್ದಾರೆ. 

ರೊಮ್ಯಾನ್ಸ್ ಬೇಡ, ಕಿಸ್ಸಿಂಗ್ ಸೀನ್ ಬೇಡ.. ಕಿಂಗ್ ನಾಗಾರ್ಜುನಗೆ ಕಂಡೀಷನ್ ಹಾಕಿದ್ರು ಸ್ಟಾರ್ ನಟಿ!