- Home
- Entertainment
- Cine World
- ಯಾರಿಂದನೂ ನಿನ್ನ ಜೀವನ ನಿಲ್ಲಬಾರ್ದು: ವುಮೆನ್ಸ್ ಡೇ ದಿನ ಮಗಳು ಶ್ರೀಜಾ ಕಷ್ಟಗಳ ಬಗ್ಗೆ ಹೇಳಿದ ಚಿರಂಜೀವಿ!
ಯಾರಿಂದನೂ ನಿನ್ನ ಜೀವನ ನಿಲ್ಲಬಾರ್ದು: ವುಮೆನ್ಸ್ ಡೇ ದಿನ ಮಗಳು ಶ್ರೀಜಾ ಕಷ್ಟಗಳ ಬಗ್ಗೆ ಹೇಳಿದ ಚಿರಂಜೀವಿ!
ಮೆಗಾ ಫ್ಯಾಮಿಲಿ ವುಮೆನ್ಸ್ ಡೇ ಸ್ಪೆಷಲ್: ವಿಶ್ವ ಮಹಿಳಾ ದಿನದ ಪ್ರಯುಕ್ತ ಮೆಗಾಸ್ಟಾರ್ ಚಿರಂಜೀವಿ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ಸಂದರ್ಶನದಲ್ಲಿ ತಾಯಿ ಅಂಜನಮ್ಮ, ಸಹೋದರ ನಾಗಬಾಬು, ಸಹೋದರಿಯರಾದ ಮಾಧವಿ, ವಿಜಯ್ ದುರ್ಗಾ ಅವರೊಂದಿಗೆ ಚಿರಂಜೀವಿ ಭಾಗವಹಿಸಿದ್ದರು.

ವಿಶ್ವ ಮಹಿಳಾ ದಿನದ ಪ್ರಯುಕ್ತ ಮೆಗಾಸ್ಟಾರ್ ಚಿರಂಜೀವಿ ಸಂದರ್ಶನದಲ್ಲಿ ಭಾಗವಹಿಸಿದ್ದರು. ತಾಯಿ ಅಂಜನಮ್ಮ, ಸಹೋದರ ನಾಗಬಾಬು, ಸಹೋದರಿಯರಾದ ಮಾಧವಿ, ವಿಜಯ್ ದುರ್ಗಾ ಅವರೊಂದಿಗೆ ಚಿರಂಜೀವಿ ಈ ಸಂದರ್ಶನದಲ್ಲಿ ಭಾಗವಹಿಸಿದ್ದರು. ಅಂಜನಮ್ಮ ಮಕ್ಕಳನ್ನು ಹೇಗೆ ಬೆಳೆಸಿದರು, ಕಷ್ಟದಲ್ಲಿ ಏನೆಲ್ಲಾ ಸಲಹೆ ನೀಡಿದರು ಎಂಬ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ತನ್ನ ಮಕ್ಕಳಲ್ಲಿ ಅಮ್ಮನಿಗೆ ನಾಗಬಾಬು ಅಂದ್ರೆ ತುಂಬಾ ಇಷ್ಟ ಅಂತ ಚಿರಂಜೀವಿ ಹೇಳಿದರು. ಈಗಲೂ ನಾಗಬಾಬು ಅವರನ್ನು ಹತ್ತಿರಕ್ಕೆ ತೆಗೆದುಕೊಂಡು ಮುತ್ತು ಕೊಡುತ್ತಾರಂತೆ. ಇನ್ನು, ಪುತ್ರಿಯರಾದ ವಿಜಯ ದುರ್ಗಾ, ಮಾಧವಿ ಕೂಡ ಅಂಜನಮ್ಮ ಅವರ ಬಗ್ಗೆ ಹೊಗಳಿದರು. ಎಂತಹ ಕಷ್ಟಗಳು ಬಂದರೂ ಅಮ್ಮ ನಮಗೆ ಸ್ಫೂರ್ತಿ ತುಂಬುತ್ತಿದ್ದರು. ಜೀವನದಲ್ಲಿ ಕಷ್ಟಗಳು ಬಂದಾಗ ನಿನ್ನ ಸಮಸ್ಯೆಯನ್ನು ನೀನೇ ಪರಿಹರಿಸಿಕೊಳ್ಳಬೇಕು. ಇಲ್ಲದಿದ್ದರೆ ನಿನ್ನ ಗೌರವ ಹೋಗುತ್ತದೆ ಎಂದು ಅಮ್ಮ ಹೇಳುತ್ತಿದ್ದ ಮಾತುಗಳು ಸ್ಪೂರ್ತಿದಾಯಕವಾಗಿತ್ತು ಎಂದು ವಿಜಯ ದುರ್ಗಾ ಹೇಳಿದರು.
ಚಿರಂಜೀವಿ ಅವರ ಚಿಕ್ಕ ಮಗಳು ಶ್ರೀಜಾ ಅವರ ವೈವಾಹಿಕ ಜೀವನದಲ್ಲಿ ಎದುರಾದ ತೊಂದರೆಗಳ ಬಗ್ಗೆಯೂ ಚರ್ಚೆ ನಡೆಯಿತು. ಶ್ರೀಜಾ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಎದುರಿಸಿದ್ದಾಳೆ ಎಂದು ಚಿರಂಜೀವಿ ಹೇಳಿದರು. ಆ ಸಮಯದಲ್ಲಿ ಶ್ರೀಜಾ ಅಜ್ಜಿಯ ಬಳಿ ಸಲಹೆಗಳನ್ನು ಪಡೆದಳು.
ಯಾರೋ ಒಬ್ಬರಿಂದ ನಿನ್ನ ಜೀವನ ನಿಲ್ಲಬಾರದು. ನೀನು ಅಂದುಕೊಂಡದ್ದನ್ನು ಮಾಡಬೇಕು, ಜೀವನದಲ್ಲಿ ಮುಂದೆ ಸಾಗಬೇಕು ಎಂದು ಅಂಜನಮ್ಮ ಶ್ರೀಜಾಗೆ ನೀಡಿದ ಸಲಹೆಗಳ ಬಗ್ಗೆ ಚಿರಂಜೀವಿ ವಿವರಿಸಿದರು. ಸದ್ಯ ಶ್ರೀಜಾ ಪ್ರೀತಿಸಿ ಮದುವೆಯಾಗಿ ಮೊದಲ ಗಂಡನಿಂದ ದೂರವಾಗಿದ್ದಾರೆ.