Naga Chaitanya and Sai Pallavi New Movie Thandel: ತೆಲುಗು ನಟ ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಅವರು ʼತಂಡೇಲ್ʼ ಸಿನಿಮಾ ಮೂಲಕ ಮತ್ತೆ ಒಟ್ಟಿಗೆ ಕೆಲಸ ಮಾಡಿದ್ದರು. ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಈ ಸಿನಿಮಾ ಒಟಿಟಿಯಲ್ಲಿ ಲಭ್ಯವಿದೆ. ಹಾಗಾದರೆ ಎಲ್ಲಿ ನೋಡಬಹುದು?
ನಟ ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ ʼತಂಡೇಲ್ʼ ಸಿನಿಮಾ ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ನಾಗಚೈತನ್ಯ ಸಿನಿ ಕರಿಯರ್‌ನಲ್ಲಿ ಮೊದಲ ನೂರು ಕೋಟಿ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿದೆ.
ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್ ಕತೆ ಈ ಚಿತ್ರದಲ್ಲಿದೆ. ಬನ್ನಿ ವಾಸು ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದರು. ದೇವಿಶ್ರೀ ಪ್ರಸಾದ್ ಅವರು ಈ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು.
ಈ ಸಿನಿಮಾ ಕತೆ ಏನು?
2018ರಲ್ಲಿ ನಡೆದ ನೈಜ ಕಥೆ ಈ ಚಿತ್ರದಲ್ಲಿದೆ. ಈ ಚಿತ್ರದಲ್ಲಿ ಶ್ರೀಕಾಕುಲಂನ 21 ಮೀನುಗಾರರ ನಿಜವಾದ ಕಥೆಯಿದೆ. ಇದರ ಜೊತೆಗೆ ಲವ್‌ಸ್ಟೋರಿ ಕೂಡ ಇದೆ. ಮೀನುಗಾರರು ತಮಗೆ ಗೊತ್ತಿಲ್ಲದೆ ಪಾಕಿಸ್ತಾನದ ಜಲಗಡಿ ಪ್ರವೇಶ ಮಾಡುತ್ತಾರೆ. ಅವರನ್ನು ಪಾಕಿಸ್ತಾನದ ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ. ಆ ಸಂದರ್ಭದಲ್ಲಿ ಅವರು ಎದುರಿಸುವ ಕಷ್ಟಗಳು ಏನು? ಆಮೇಲೆ ಹೇಗೆ ತಪ್ಪಿಸಿಕೊಳ್ತಾರೆ ಎನ್ನೋದು ಈ ಸಿನಿಮಾದಲ್ಲಿದೆ. ಭಾರತದಲ್ಲಿ ಈ ಸಿನಿಮಾ 60 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ವಿದೇಶದಲ್ಲಿ ಕೂಡ ಈ ಚಿತ್ರ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ಈ ಸಿನಿಮಾ 75 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿತ್ತು. ರಾಜು ಹಾಗೂ ಸತ್ಯ ನಡುವಿನ ನವಿರಾದ ಪ್ರೇಮಕಥೆಯೂ ಈ ಚಿತ್ರದಲ್ಲಿದೆ. ಅಂದಹಾಗೆ ಈ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಸಾಯಿ ಪಲ್ಲವಿ ಬಳಸೋ ಎರಡೇ ಎರಡು ಮೇಕಪ್ ಪ್ರಾಡಕ್ಟ್ಸ್ ಏನು ಗೊತ್ತಾ?
ಕನ್ನಡಿಗ ಪ್ರಕಾಶ್ ಬೆಳವಾಡಿ ನಟನೆ
ಈ ಹಿಂದೆ ʼಲವ್‌ಸ್ಟೋರಿʼ ಸಿನಿಮಾ ಮೂಲಕ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದ ಸಾಯಿ ಪಲ್ಲವಿ, ನಾಗಚೈತನ್ಯ ʼತಂಡೇಲ್ʼ ಮೂಲಕ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡಿದರು. ಇವರಿಬ್ಬರ ಕೆಮಿಸ್ಟ್ರಿ ವೀಕ್ಷಕರಿಗೆ ಇಷ್ಟವಾಗಿತ್ತು. ಕನ್ನಡಿಗ ಪ್ರಕಾಶ್ ಬೆಳವಾಡಿ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.
ನಾಗ ಚೈತನ್ಯ ತಂಡೇಲ್ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ, ಯಾವ ಒಟಿಟಿಯಲ್ಲಿ? ನಿರೀಕ್ಷಿತ ದಿನಾಂಕ ಹೀಗಿದೆ
ಈ ಸಿನಿಮಾ ಎಲ್ಲಿ ಲಭ್ಯ ಇದೆ?
ನಿರ್ದೇಶಕ ಚಂದು ಮೊಂಟೇಟಿ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈಗ ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಲಭ್ಯವಿದೆ. ಥಿಯೇಟರ್‌ನಲ್ಲಿ ಈ ಸಿನಿಮಾ ನೋಡದೆ ಇರುವವರು, ಮತ್ತೆ ಸಿನಿಮಾ ನೋಡಬೇಕು ಎಂದು ಆಸೆ ಇಟ್ಟುಕೊಂಡಿರುವವರು ಒಟಿಟಿಯಲ್ಲಿ ಮತ್ತೆ ಸಿನಿಮಾ ನೋಡಬಹುದು. ನೆಟ್‌ಫ್ಲಿಕ್ಸ್‌ಗೆ 40 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎಂದು ಹೇಳಬಹುದು.
100 ಕೋಟಿ ಕ್ಲಬ್ ಸೇರಿದ ತಂಡೇಲ್: ಕೊನೆಗೂ ನಾಗಚೈತನ್ಯ ವೃತ್ತಿಜೀವನಕ್ಕೆ ಮೈಲಿಗಲ್ಲಾಯ್ತು ಬ್ಲಾಕ್‌ಬಸ್ಟರ್ ಸಿನಿಮಾ
ನಾಗಚೈತನ್ಯ ಸೋಲು, ಗೆಲುವು!
ಆಮಿರ್ ಖಾನ್ ನಟನೆಯ ʼಲಾಲ್ ಸಿಂಗ್ ಛಡ್ಡಾʼ ಸಿನಿಮಾದಲ್ಲಿಯೂ ಆಮಿರ್ ಖಾನ್ ನಟಿಸಿದ್ದರು. ಆದರೆ ಈ ಚಿತ್ರ ಯಶಸ್ಸು ಕಾಣಲಿಲ್ಲ. 2023ರಲ್ಲಿ ʼಧೂತʼ ಸಿರೀಸ್‌ನಲ್ಲಿ ನಾಗಚೈತನ್ಯ ಕಾಣಿಸಿಕೊಂಡಿದ್ದರು. ಈ ಸಿರೀಸ್ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ರಿಲೀಸ್ ಆಗಿತ್ತು. ಈ ಸಿರೀಸ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.
