ಬಾಲಿವುಡ್​ನ ಬಾಕ್ಸ್​ ಆಫೀಸ್​ ಕ್ವೀನ್​ ಪಟ್ಟದಲ್ಲಿ ಸ್ವಲ್ಪ ಏರು ಪೇರಾಗಿದೆ. ಹಾಗಿದ್ದರೆ ಯಾರಿಗೆ ದಕ್ಕಿದೆ ಈ ಪಟ್ಟ? 

ಸೂಪರ್​ ಸ್ಟಾರ್​, ಕಿಂಗ್​, ಕ್ವೀನ್​ ಪಟ್ಟಗಳೆಲ್ಲವೂ ಸಿನಿ ಜಗತ್ತಿನಲ್ಲಿ ಹಂಗಾಮಾ ಸೃಷ್ಟಿಸುತ್ತಲೇ ಇರುತ್ತವೆ. ಚಿತ್ರಗಳು ಹಿಟ್​ ಮೇಲೆ ಹಿಟ್​ (Hit) ಆದರೆ ಈ ಪಟ್ಟಗಳು ಒಬ್ಬರಿಂದ ಒಬ್ಬರಿಗೆ ಬರುವುದು ಸಹಜ. ದಶಕದವರೆಗೆ ದೊಡ್ಡ ದೊಡ್ಡ ಪಟ್ಟಗಳಿಂದ ಅಲಂಕಿಸಿರುವವರೂ ಒಂದಿಲ್ಲೊಮ್ಮೆ ಅಂಥ ಪಟ್ಟವನ್ನು ಬೇರೆಯವರಿಗೆ ಬಿಟ್ಟು ಕೊಡುವುದು ಅನಿವಾರ್ಯ. ಹಾಗೆಯೇ, ಮಾಡಿದ ಬಹುತೇಕ ಚಿತ್ರಗಳು ತೋಪೆದ್ದು ಹೋಗಿ ಒಂದೇ ಒಂದು ಚಿತ್ರ ಅದೃಷ್ಟ ಕೈಹಿಡಿದರೆ ಅವರು ರಾತ್ರೋ ರಾತ್ರಿ ದೊಡ್ಡ ಪಟ್ಟವನ್ನೂ ಅಲಂಕಿಸುವುದು ಇದೆ. ಅದೇ ರೀತಿ ಸದ್ಯ ಬಾಕ್ಸ್​ ಆಫೀಸ್​ ಕ್ವೀನ್​ (Box office queen) ಪಟ್ಟದ ಸ್ಥಿತಿ ಆಗಿದೆ. ಇಲ್ಲಿಯವರೆಗೆ ಇದ್ದ ಈ ಪಟ್ಟ ಸದ್ಯ ಉಲ್ಟಾ ಪಲ್ಟಾ ಆಗಿದ್ದು, ಬಾಕ್ಸ್ ಆಫೀಸ್​ ರಾಣಿಯ ಕಿರೀಟ ಬೇರೊಬ್ಬ ನಟಿಗೆ ಸಂದಿದೆ.

ಹೌದು. ಸದ್ಯ ಪಠಾಣ್​ ಯಶಸ್ಸಿನ ನಂತರ ನಟನ ಬಾಲಿವುಡ್​ ಇಂಡಸ್ಟ್ರಿಯಲ್ಲಿ ನಾನಾ ರೀತಿಯ ಬದಲಾವಣೆಗಳು ಆಗುತ್ತಿವೆ. ಹಲವಾರು ದಾಖಲೆಗಳನ್ನು ಪಠಾಣ್​ (Pathaan) ಮುರಿದಿದೆ. ಕೆಲವು ಸಿನಿಮಾಗಳಿಂದ ತುಂಬಾ ಸೋಲನ್ನೇ ಅನುಭವಿಸಿದ್ದ ನಟ ಶಾರುಖ್​ ಖಾನ್​ (Shah Rukh Khan) ಈಗ ನಿಜವಾಗಿಯೂ ಕಿಂಗ್​ ಎನಿಸಿಕೊಂಡಿದ್ದಾರೆ. ನಾಲ್ಕು ವರ್ಷಗಳ ಬಳಿಕ ನಿಜಕ್ಕೂ ಅವರು ಕಿಂಗ್​ ಖಾನ್​ ಹೆಸರನ್ನು ಉಳಿಸಿಕೊಂಡು ರಾರಾಜಿಸುತ್ತಿದ್ದಾರೆ. ಜನವರಿ 25ರಂದು ಬಿಡುಗಡೆಗೊಂಡಿರುವ ಪಠಾಣ್​ ಇದುವರೆಗೆ ಅಂದರೆ ಈ 9 ದಿನಗಳಲ್ಲಿ ವಿಶ್ವಾದ್ಯಂತ ಬಾಕ್ಸ್ ಆಫೀಸ್​(Box office)ನಲ್ಲಿ 700 ಕೋಟಿ ರೂಪಾಯಿಗಳ ದಾಖಲು ಮಾಡಿದೆ ಎನ್ನಲಾಗಿದೆ. ಆದ್ದರಿಂದ ಸದ್ಯ ಬಾಕ್ಸ್ ಆಫೀಸ್​ ರಾಣಿಯ ಪಟ್ಟಿ ಏರುಪೇರಾಗಿದೆ.

ಎದೆ ಭಾಗಕ್ಕೆ ಸರ್ಜರಿ- ಬಾಲಿವುಡ್​ನ ಕರಾಳ ಮುಖ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ

ಪಠಾಣ್​ ನಾಯಕಿ ದೀಪಿಕಾ ಪಡುಕೋಣೆಯ ಇತ್ತೀಚಿನ ಕೆಲ ಸಿನಿಮಾಗಳು ಶಾರುಖ್​ ಖಾನ್​ ಅವರಂತೆಯೇ ಬಾಕ್ಸ್ ಆಫೀಸ್​ನಲ್ಲಿ ಸೋಲುಂಡಿದ್ದವು. ಇದರಿಂದಾಗಿ ದೀಪಿಕಾ ಮತ್ತೆ ಚಿಗುರುವುದು ಕಷ್ಟ ಎಂದೇ ಹೇಳಿತ್ತು ಬಾಲಿವುಡ್​ ಇಂಡಸ್ಟ್ರಿ. ಆದರೆ ಪಠಾಣ್​ ಎಲ್ಲಾ ಉಲ್ಟಾ ಪಲ್ಟಾ ಮಾಡಿದೆ. ಬಾಲಿವುಡ್​ನ ಬಾಕ್ಸ್​ಆಫೀಸ್​ ಕ್ವೀನ್​ ಆಗಿ ದೀಪಿಕಾ (Deepika Padukone)ಮಿಂಚಿದ್ದಾರೆ. ಅವರಿಗೆ ಈಗ ನಂ.1 ಪಟ್ಟ ಸಿಕ್ಕಿದೆ. ದೀಪಿಕಾ ಪಡುಕೋಣೆಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಇವರ ಕಾಲ್​ಷೀಟ್​ಗೆ ನಿರ್ಮಾಪಕರು ಕಾಯುತ್ತಿದ್ದಾರೆ ಎನ್ನಲಾಗಿದೆ.

ಹಾಗಿದ್ದರೆ ಪಠಾಣ್​ ಯಾವ ನಟಿಯರ ಪಾಲಿಗೆ ನುಂಗಲಾಗದ ತುತ್ತಾಯ್ತು ಎಂದು ನೋಡುವುದಾದರೆ ಕತ್ರಿನಾ ಕೈಫ್​,(Katrina Kaif) ಆಲಿಯಾ ಭಟ್​ ಹಾಗೂ ಕಾಂಟ್ರವರ್ಸಿ ಲೇಡಿ ಕಂಗನಾ ರಣಾವತ್​ಗೆ ಹಿನ್ನಡೆಯಾಗಿದೆ. ಬಾಕ್ಸ್ ಆಫೀಸ್​ ಕ್ವೀನ್​ ಎನಿಸಿಕೊಂಡಿದ್ದ ಈ ಮೂವರೂ ನಟಿಯರನ್ನು ದೀಪಿಕಾ ಹಿಂದಿಕ್ಕಿ ನಂ.1 ಪಟ್ಟ ಪಡೆದುಕೊಂಡಿದ್ದಾರೆ. ಕತ್ರಿನಾ ಕೈಫ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾ 'ಟೈಗರ್ ಜಿಂದಾ ಹೇ' ಇದು ಬಾಕ್ಸ್​ ಆಫೀಸ್​ನಲ್ಲಿ 564.2 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆಲಿಯಾ ಭಟ್ ನಾಯಕಿಯಾಗಿ ನಟಿಸಿದ್ದ 'ಗಂಗೂಬಾಯಿ ಕಾಠಿಯಾವಾಡಿ' 200 ಕೋಟಿ ರೂ. ಕಲೆಕ್ಷನ್​ ಮಾಡಿದ್ದರೆ, ಕಂಗನಾ ರಣಾವತ್​ (Kangana Ranuat) ಅವರು ಕೂಡ ಈ ಪೈಪೋಟಿಯಲ್ಲಿದ್ದರು. ಆದರೆ ಇವರೆಲ್ಲರಿಗೂ ಈಗ ದೀಪಿಕಾ ನಿರಾಸೆಯುಂಟು ಮಾಡಿದ್ದಾರೆ.

ನಟಿ ಆಲಿಯಾ ಭಟ್​ ತೆಗೆದುಕೊಂಡ್ರು ಬಹುದೊಡ್ಡ ನಿರ್ಧಾರ: ಅಭಿಮಾನಿಗಳು ಶಾಕ್​

ಅಷ್ಟಕ್ಕೂ ದೀಪಿಕಾ ಮತ್ತು ಶಾರುಖ್ ಖಾನ್ ಕೆಮೆಸ್ಟ್ರಿಯನ್ನು ಅಭಿಮಾನಿಗಳು ಈ ಹಿಂದೆಯೇ ಬಹಳ ಮೆಚ್ಚಿಕೊಂಡಿದ್ದಾರೆ. ಇದೇ ಕಾರಣದಿಂದ ಇವರ ಜೋಡಿಯ ಬಹುತೇಕ ಚಿತ್ರಗಳು ಯಶಸ್ಸು ಕಂಡಿವೆ. 'ಪದ್ಮಾವತ್' 585 ಕೋಟಿ ರೂ. ಕಲೆಕ್ಷನ್ ಮಾಡಿದ್ದರೆ, 'ಬಾಜಿರಾವ್ ಮಸ್ತಾನಿ' 355 ಕೋಟಿ ರೂ., ಚೆನ್ನೈ ಎಕ್ಸ್‌ಪ್ರೆಸ್ 424 ಕೋಟಿ ರೂ., 'ಹ್ಯಾಪಿ ನ್ಯೂ ಇಯರ್' 400 ಕೋಟಿ ರೂ. ಕಲೆ ಹಾಕಿದ್ದವು. ಆದರೆ ಇದಾದ ಮೇಲೆ ದೀಪಿಕಾ ಪಡುಕೋಣೆ ನಟನೆಯ 'ಛಪಾಕ್', '83' ಬಾಕ್ಸ್​ ಆಫೀಸ್‌ನಲ್ಲಿ (Box office) ಹೀನಾಯವಾಗಿ ಸೋಲುಂಟಿದ್ದವು. ಓಟಿಟಿಯಲ್ಲಿ ತೆರೆಕಂಡಿದ್ದ 'ಗೆಹರಾಯಿಯಾ' ಕೂಡ ತೋಪೆದ್ದು ಹೋಗಿತ್ತು. ಆದರೆ ಈಗ ಪಠಾಣ್​ ಮೂಲಕ ಮತ್ತೆ ದೀಪಿಕಾ ಮೇಲೆದ್ದು ಬಂದಿದ್ದಾರೆ.